₹600 ಲಂಚ ಪಡೆದ ಪ್ರಕರಣ: ಉಪ ವಲಯ ಅರಣ್ಯಾಧಿಕಾರಿಗೆ 5 ವರ್ಷ ಕಠಿಣ ಜೈಲು, ₹6 ಲಕ್ಷ ದಂಡ

ಹಂಚಿಕೊಳ್ಳಿ
WhatsApp Facebook X Telegram
digital Ban Bike Owner Jailed & Fined for Minor's Accident in Tumakuru | Karnataka Court Verdict
Bike Owner Jailed & Fined for Minor's Accident in Tumakuru | Karnataka Court Verdict

ಮಲೆನಾಡು ಟುಡೆ ಸುದ್ದಿ / ಹೊಸಪೇಟೆ / ಕಸಿದುಕೊಂಡಿದ್ದ ಮೊಬೈಲ್ ಫೋನ್ ಹಿಂದಿರುಗಿಸಲು ₹600 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಟಿ. ಪಂಪಾಪತಿ ನಾಯ್ಕ ಅವರಿಗೆ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹6 ಲಕ್ಷ ದಂಡ ವಿಧಿಸಿದೆ.

₹600 ಲಂಚ ಪಡೆದ ಪ್ರಕರಣದಲ್ಲಿ ಶಿಕ್ಷೆ

ವಿಜಯನಗರ ಜಿಲ್ಲೆಯ ಹೊಸಪೇಟೆಯ ನ್ಯಾಯಾಲಯವು ಶುಕ್ರವಾರ ಈ ತೀರ್ಪು ನೀಡಿದ್ದು, ದಂಡದ ಮೊತ್ತ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 12 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದೆ. ಕೊಪ್ಪಳದ ತಗ್ಗಿನಕೇರಿ ಓಣಿಯ ನಿವಾಸಿ ಸೈಯದ್ ಶಬ್ಬಿರ್ ಅವರ ಟಿಪ್ಪರ್ ಪರವಾನಗಿ ನಕಲಿ ಎಂದು ಹೇಳಿ, ಟಿಪ್ಪರ್ ವಾಹನವನ್ನು ಬಿಡಲು ₹1,000 ಲಂಚಕ್ಕೆ ಬೇಡಿಕೆ ಇಡಲಾಗಿತ್ತು.

ಭಾರತ್ ಜೋಡೋ ಯಾತ್ರೆ 2.0

ಲಂಚ ನೀಡಲು ತಮ್ಮ ಬಳಿ ಹಣವಿಲ್ಲ ಎಂದು ಸೈಯದ್ ಶಬ್ಬಿರ್ ತಿಳಿಸಿದ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಬಳಿಕ ಕಸಿದುಕೊಂಡ ಮೊಬೈಲ್ ಫೋನ್ ಹಿಂದಿರುಗಿಸಲು ₹600 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಮೊಬೈಲ್ ಫೋನ್ ಹಿಂದಿರುಗಿಸುವುದಕ್ಕಾಗಿ ಬೇಡಿಕೆ ಇಟ್ಟಿದ್ದ ₹600 ಲಂಚದ ಹಣವನ್ನು ಪಡೆಯುತ್ತಿದ್ದ ವೇಳೆ 2014ರ ಜುಲೈ 23ರಂದು ಲೋಕಾಯುಕ್ತ ಪೊಲೀಸರು ಟಿ. ಪಂಪಾಪತಿ ನಾಯ್ಕ ಅವರನ್ನು ಬಂಧಿಸಿದ್ದರು.

ಪ್ರಕರಣದ ತನಿಖೆಯನ್ನು ಹೊಸಪೇಟೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿ. ಮಹಾಂತೇಶ್ ನಡೆಸಿದ್ದರು. ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಟಿ. ಪಂಪಾಪತಿ ನಾಯ್ಕ ಅವರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹6 ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ 12 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor