ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನೆ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ. ಹೊಸನಗರ, ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ ಪ್ರಕಟವಾಗಿದ್ದು, ಸಾರ್ವಜನಿಕರು ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿವಿಧ ಪ್ರವರ್ಗಗಳಡಿ ಮೀಸಲಿಡಲಾಗಿದೆ. ಇದರೊಂದಿಗೆ ಹಲವು ಕ್ಷೇತ್ರಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಚುನಾವಣಾ ಕ್ಷೇತ್ರಗಳ ಮೀಸಲಾತಿ ವಿವರ ಹೀಗಿದೆ.
ಶಿವಮೊಗ್ಗ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ
ಶಿವಮೊಗ್ಗ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗಾಜನೂರು ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಆಗಸವಳ್ಳಿ ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಮತ್ತೂರು ಕ್ಷೇತ್ರ ಪರಿಶಿಷ್ಟ ಜಾತಿಗೆ, ಹಾರನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆಗೆ, ರಾಮನಗರ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಕುಂಚೇನಹಳ್ಳಿ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.ಕೋಟೆಗಂಗೂರು ಮತ್ತು ಹಸೂಡಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಮಹಿಳೆಯರಿಗೆ ಮೀಸಲಿಡಲಾಗಿದೆ. ಹೊಳಲೂರು ಸಾಮಾನ್ಯ ಮಹಿಳೆಗೆ, ಕೊಮ್ಮನಾಳು, ಮೇಲಿನಹನಸವಾಡಿ ಹಾಗೂ ಕೂಡ್ಲಿ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.ಸದಾಶಿವಪುರ ಕ್ಷೇತ್ರವನ್ನು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿಡಲಾಗಿದ್ದು, 14ನೇ ಕ್ರಮಸಂಖ್ಯೆಯ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಸೋಗಾನೆ ಸಾಮಾನ್ಯ ವರ್ಗಕ್ಕೆ, ಕುಂಸಿ ಹಿಂದುಳಿದ ವರ್ಗ ‘ಆ’ಗೆ, ಆಯನೂರು ಹಿಂದುಳಿದ ವರ್ಗ ‘ಆ’ ಮಹಿಳೆಗೆ, ಮಂಡಘಟ್ಟ ಸಾಮಾನ್ಯ ಮಹಿಳೆಗೆ ಹಾಗೂ ತಮ್ಮಡಿಹಳ್ಳಿ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಭದ್ರಾವತಿ ತಾಲೂಕು ಪಂಚಾಯಿತಿ ಮೀಸಲಾತಿ
ಭದ್ರಾವತಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಆನವೇರಿ, ಮಂಗೋಟಿ, ಮೈದೂಳಲು ಹಾಗೂ ಸಿದ್ದಿಪುರ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.ಯಡೇಹಳ್ಳಿ ಕ್ಷೇತ್ರ ಪರಿಶಿಷ್ಟ ಪಂಗಡ ಮಹಿಳೆಗೆ, ಕಲ್ಲಿಹಾಳ್ ಹಿಂದುಳಿದ ವರ್ಗ ‘ಅ’ಗೆ, ಅರಬಿಳಚಿ ಪರಿಶಿಷ್ಟ ಜಾತಿಗೆ, ಕೂಡ್ಲಿಗೆರೆ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಕಾಗೆಕೋಡಮಗೆ ಹಿಂದುಳಿದ ವರ್ಗ ‘ಬ’ ಮಹಿಳೆಗೆ ಮೀಸಲಾಗಿದೆ.ಆರಳಿಹಳ್ಳಿ ಕ್ಷೇತ್ರ ಪರಿಶಿಷ್ಟ ಜಾತಿಗೆ, ಅಂತರಗಂಗೆ ಸಾಮಾನ್ಯ ವರ್ಗಕ್ಕೆ, ಮಾವಿನಕೆರೆ ಸಾಮಾನ್ಯ ಮಹಿಳೆಗೆ ಹಾಗೂ ಬಾರಂದೂರು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.ಹಿರಿಯೂರು ಮತ್ತು ಕಲ್ಲಹಳ್ಳಿ ಕ್ಷೇತ್ರಗಳು ಪರಿಶಿಷ್ಟ ಜಾತಿ ಮಹಿಳೆಯರಿಗೆ, ಸಿಂಗನಮನೆ ಸಾಮಾನ್ಯ ಮಹಿಳೆಗೆ, ದೊಣಬಘಟ್ಟ ಹಿಂದುಳಿದ ವರ್ಗ ‘ಆ’ ಮಹಿಳೆಗೆ ಹಾಗೂ ಹುಣಸೇಕಟ್ಟಿ ಸಾಮಾನ್ಯ ಮಹಿಳೆಗೆ ಮೀಸಲಾಗಿವೆ.
ಸಾಗರ ತಾಲೂಕು ಪಂಚಾಯಿತಿ ಮೀಸಲಾತಿ ವಿವರ
ಸಾಗರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಹಿರೇನೆಲ್ಲೂರು ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಕೆಳದಿ ಮತ್ತು ನಾಡಕಲಸಿ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ, ಬರೂರು ಹಿಂದುಳಿದ ವರ್ಗ ‘ಆ’ಗೆ ಹಾಗೂ ಹೊಸೂರು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. 6ನೇ ಕ್ರಮಸಂಖ್ಯೆಯ ಕ್ಷೇತ್ರವನ್ನು ಹಿಂದುಳಿದ ವರ್ಗ ‘ಅ’ಗೆ ಮೀಸಲಿಡಲಾಗಿದೆ.ಆನಂದಪುರ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, ಹೆಗ್ಗೋಡು ಸಾಮಾನ್ಯ ಮಹಿಳೆಗೆ ಹಾಗೂ ಅವಿನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆಗೆ ಮೀಸಲಾಗಿದೆ.ಯಡಜಿಗಳೇಮನೆ ಹಾಗೂ ತುಮರಿ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ, ಚನ್ನಗೊಂಡ ಸಾಮಾನ್ಯ ಮಹಿಳೆಗೆ ಹಾಗೂ ತಲವಾಟ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿಡಲಾಗಿದೆ.ತಾಳಗುಪ್ಪ ಮತ್ತು ಕಾನೆ ಕ್ಷೇತ್ರಗಳನ್ನು ಹಿಂದುಳಿದ ವರ್ಗ ‘ಅ’ ಮಹಿಳೆಯರಿಗೆ ಮೀಸಲಿಡಲಾಗಿದೆ.
ಸೊರಬ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ
ಸೊರಬ ತಾಲೂಕು ಪಂಚಾಯಿತಿ ವ್ಯಾಪ್ತಿಯ ಶಕುನವಳ್ಳಿ ಕ್ಷೇತ್ರ ಸಾಮಾನ್ಯ ಮಹಿಳೆಗೆ ಹಾಗೂ ಆಗಸನಹಳ್ಳಿ ಹಿಂದುಳಿದ ವರ್ಗ ‘ಆ’ ಮಹಿಳೆಗೆ ಮೀಸಲಾಗಿದೆ. 3ನೇ ಕ್ರಮಸಂಖ್ಯೆಯ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, ಕಾತುವಳ್ಳಿ ಹಿಂದುಳಿದ ವರ್ಗ ‘ಆ’ಗೆ ಹಾಗೂ ಎಣ್ಣೆಕೊಪ್ಪ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿಡಲಾಗಿದೆ.ತತ್ತೂರು ಕ್ಷೇತ್ರ ಪರಿಶಿಷ್ಟ ಜಾತಿಗೆ ಹಾಗೂ ಗುಡುವಿ ಹಿಂದುಳಿದ ವರ್ಗ ‘ಆ’ ಮಹಿಳೆಗೆ ಮೀಸಲಾಗಿದೆ. ಕುಪ್ಪಗಡ್ಡೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ, 9ನೇ ಕ್ರಮಸಂಖ್ಯೆಯ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, ಮಾವಲಿ ಹಾಗೂ 11ನೇ ಕ್ರಮಸಂಖ್ಯೆಯ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.ಇಂಡುವಳ್ಳಿ ಮತ್ತು ಉಳವಿ ಕ್ಷೇತ್ರಗಳನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲಿಡಲಾಗಿದೆ. ಹೊಸಬಾಳೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ, ಹೆಚ್ಚಿ ಸಾಮಾನ್ಯ ಮಹಿಳೆಗೆ, ಚಂದ್ರಗುತ್ತಿ ಸಾಮಾನ್ಯ ವರ್ಗಕ್ಕೆ ಹಾಗೂ 17ನೇ ಕ್ರಮಸಂಖ್ಯೆಯ ಕ್ಷೇತ್ರ ಹಿಂದುಳಿದ ವರ್ಗ ‘ಬ’ಗೆ ಮೀಸಲಾಗಿದೆ.
ಶಿಕಾರಿಪುರ ತಾಲೂಕು ಪಂಚಾಯಿತಿ ಮೀಸಲಾತಿ
ಶಿಕಾರಿಪುರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಈಸೂರು ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಹಾರೋಗೊಪ್ಪ ಪರಿಶಿಷ್ಟ ಜಾತಿಗೆ, ಹಿತ್ತಲ ಸಾಮಾನ್ಯ ಮಹಿಳೆಗೆ, ಸಾಲೂರು ಪರಿಶಿಷ್ಟ ಜಾತಿಗೆ, ಹೊಸೂರು ಸಾಮಾನ್ಯ ವರ್ಗಕ್ಕೆ, ಕಾಗಿನಲ್ಲಿ ಪರಿಶಿಷ್ಟ ಜಾತಿಗೆ ಹಾಗೂ ಮಾರವಳ್ಳಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.ಬೇಗೂರು ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, ಕಪ್ಪನಹಳ್ಳಿ ಹಿಂದುಳಿದ ವರ್ಗ ‘ಅ’ಗೆ ಹಾಗೂ ಅಂಬಾರಗೊಪ್ಪ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.ಉಡುಗಣಿ ಮತ್ತು ಹರಗುವಳ್ಳಿ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಸುಣ್ಣದಕೊಪ್ಪ ಹಾಗೂ ಚಿಕ್ಕಜಂಬೂರು ಸಾಮಾನ್ಯ ಮಹಿಳೆಯರಿಗೆ, ಮತ್ತಿಕೋಟಿ ಹಿಂದುಳಿದ ವರ್ಗ ‘ಆ’ ಮಹಿಳೆಗೆ ಮೀಸಲಾಗಿದೆ.ತಾಳಗುಂದ ಹಾಗೂ ಬಿಳಕಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಮಹಿಳೆಯರಿಗೆ ಮೀಸಲಿಡಲಾಗಿದ್ದು, ತೊಗರ್ಸಿ ಸಾಮಾನ್ಯ ಮಹಿಳೆಗೆ ಮತ್ತು ನರಸಾಪುರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ
ತೀರ್ಥಹಳ್ಳಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಆಗುಂಬೆ ಕ್ಷೇತ್ರ ಹಿಂದುಳಿದ ವರ್ಗ ‘ಆ’ ಮಹಿಳೆಗೆ, ಮೇಗರವಳ್ಳಿ ಪರಿಶಿಷ್ಟ ಪಂಗಡ ಮಹಿಳೆಗೆ ಹಾಗೂ ಆರಗ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.ಮುಳುಬಾಗಿಲು ಮತ್ತು ಮೇಲಿನಕುರುವಳ್ಳಿ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಕುಪ್ಪಳ್ಳಿ ಹಿಂದುಳಿದ ವರ್ಗ ‘ಆ’ ಮಹಿಳೆಗೆ, ಸಾಲ್ನಡಿ ಸಾಮಾನ್ಯ ವರ್ಗಕ್ಕೆ ಹಾಗೂ ಗುಡ್ಡೆಕೊಪ್ಪ ಹಿಂದುಳಿದ ವರ್ಗ ‘ಅ’ಗೆ ಮೀಸಲಾಗಿದೆ.ಹಾದಿಗಲ್ಲು ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, ಕನ್ನಂಗಿ ಸಾಮಾನ್ಯ ಮಹಿಳೆಗೆ, ಲಿಂಗಾಪುರ ಹಿಂದುಳಿದ ವರ್ಗ ‘ಬ’ಗೆ ಹಾಗೂ ಮಾಳೂರು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.ಹೋದಲ ಅರಳಾಪುರ ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
ಹೊಸನಗರ ತಾಲೂಕು ಪಂಚಾಯಿತಿ ಮೀಸಲಾತಿ
ಹೊಸನಗರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಳೂರು ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ಗೆ ಮೀಸಲಿಡಲಾಗಿದೆ. ಮೇಲಿನ ಬೆಸಿಗೆ ಸಾಮಾನ್ಯ ಮಹಿಳೆಗೆ, ಮಾರುತಿಪುರ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಕೋಡೂರು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.ರಿಪ್ಪನ್‌ಪೇಟೆ ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ, ಕೆಂಚನಾಲ ಮತ್ತು ಅರಸಾಳು ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.ಹೆದ್ದಾರಿಪುರ ಕ್ಷೇತ್ರ ಹಿಂದುಳಿದ ವರ್ಗ ‘ಆ’ ಮಹಿಳೆಗೆ, ಹುಂಚ ಹಿಂದುಳಿದ ವರ್ಗ ‘ಆ’ಗೆ ಹಾಗೂ 10ನೇ ಕ್ರಮಸಂಖ್ಯೆಯ ಕ್ಷೇತ್ರ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.ಖೈರುಗುಂದ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಹಾಗೂ ನಿಟೂರು ಹಿಂದುಳಿದ ವರ್ಗ ‘ಆ’ ಮಹಿಳೆಗೆ ಮೀಸಲಾಗಿವೆ.
ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಶುಕ್ರವಾರ ಪ್ರಕಟಿಸಿದೆ. ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಮೀಸಲಾತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19ರಂದು ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವವರು ತಮ್ಮ ಮನವಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಲಗತ್ತಿಸಿ ಖುದ್ದಾಗಿ ಅಥವಾ ಅಂಚೆಯ ಮೂಲಕ ಸಲ್ಲಿಸಬೇಕು.
ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ: ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇ ಹಂತ, 3ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು – 560001.
ನಿಗದಿತ ಕೊನೆಯ ದಿನಾಂಕದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಂಚೆಯ ಮೂಲಕ ಕಳುಹಿಸುವ ಆಕ್ಷೇಪಣೆಗಳು ಕಚೇರಿಗೆ ತಲುಪುವಲ್ಲಿ ವಿಳಂಬವಾದರೆ ಅದಕ್ಕೆ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
