soraba news today live | ಸಾಗರದಿಂದ ಬೈಕ್​ನಲ್ಲಿ ಹೋಗುತ್ತಿದ್ದ ನವವಿವಾಹಿತ! ಅಡ್ಡ ಬಂದ 1 ನಾಯಿ ಜೀವ ತೆಗೆಯಿತು!

ಹಂಚಿಕೊಳ್ಳಿ
WhatsApp Facebook X Telegram
Lightning Strike Trading advertisement Current shock : Rippon pete Dasara Sports cyber crimeThreat case
Lightning Strike Trading advertisement Rippon pete Dasara Sports cyber crime Threat case

soraba news today live ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ  ನವ ವಿವಾಹಿತರೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ  ಹರೂರು ಕೆರೆ ಏರಿ ಮೇಲೆ ಈ ಘಟನೆ ಕಳೆದ  ಸೋಮವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ರವಿ  ರಾಮಪ್ಪ ಎಂಬ ಹೆಸರಿನ 29 ವರ್ಷದ ಯುವಕ ಸಾವನ್ನಪ್ಪಿದ್ದಾರೆ.

soraba news today live / ಕಳೆದ ತಿಂಗಳಲ್ಲಿ ನಡೆದಿತ್ತು ಮದುವೆ

ಕೂಲಿ ಕೆಲಸ ಮಾಡುತ್ತಿದ್ದ  ರವಿಯವರು ತಮ್ಮ ಕೆಲಸ ಮುಗಿಸಿಕೊಂಡು ಸಾಗರದಿಂದ ಹರೂರು ಮಾರ್ಗವಾಗಿ ಕುಂಶಿಗೆ ತೆರಳುತ್ತಿದ್ದರು. ಈ ವೇಳೆ  ಮಾರ್ಗ ಮಧ್ಯೆ ರಸ್ತೆಯಲ್ಲಿ  ನಾಯಿಯೊಂದು ಬೈಕ್​ಗೆ ಅಡ್ಡ ಬಂದಿದೆ. ಅದನ್ನು  ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಪರಿಣಾಮ  ರವಿ ಕೂಡ ಕೆಳಕ್ಕೆ ಬಿದ್ದಿದ್ದು ಅವರಿಗೆ ತೀವ್ರ ಪೆಟ್ಟಾಗಿದೆ. ಅಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.

ಕಳೆದ ಏಪ್ರಿಲ್‌ 9ರಂದು ರವಿಯವರ ವಿವಾಹ ನಡೆದಿತ್ತು. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿಯೇ ರವಿಯವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ  ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor