ಶುಂಠಿ ಹೊಲದಲ್ಲಿ ಹಾವು ಕಚ್ಚಿ ಆರು ತಿಂಗಳ ಗರ್ಭಿಣಿ ದುರ್ಮರಣ

ಹಂಚಿಕೊಳ್ಳಿ
WhatsApp Facebook X Telegram
Snake Bite Tragedy 6-Month Pregnant Woman Dies
Snake Bite Tragedy 6-Month Pregnant Woman Dies

ಆನಂದಪುರ : ಶುಂಠಿ ಬೆಳೆಯುವ ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಆರು ತಿಂಗಳ ಗರ್ಭಿಣಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಆನಂದಪುರ ಸಮೀಪ ಶನಿವಾರ ಜರುಗಿದೆ.ಮೃತ ಮಹಿಳೆಯನ್ನು 26 ವರ್ಷದ ಸ್ವಾತಿ ಎಂದು ಗುರುತಿಸಲಾಗಿದೆ.

ಜೂನ್ ಮೊದಲ ವಾರದಲ್ಲಿ , ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್

 ಆನಂದಪುರ ಸಮೀಪದ ಸುಳಗೋಡು ಗ್ರಾಮದ ನಿವಾಸಿ ವೀರಭದ್ರ ಎಂಬುವವರೊಂದಿಗೆ ಸ್ವಾತಿ ಅವರ ವಿವಾಹ 3 ವರ್ಷಗಳ ಹಿಂದೆ ನೆರವೇರಿತ್ತು. ಅವರು ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿದ್ದರು. ಮೇ 2 ರಂದು ಮಧ್ಯಾಹ್ನದ ಸಮಯದಲ್ಲಿ ಸುಳಗೋಡು ಗ್ರಾಮದಲ್ಲಿರುವ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಸ್ವಾತಿ ಅವರು ತಮ್ಮ ಪತಿಯೊಂದಿಗೆ ತೆರಳಿದ್ದರು.ಜಮೀನಿನಲ್ಲಿ ಕೆಲಸ ಮುಗಿಸಿದ ಬಳಿಕ ಊಟ ಸವಿದು ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ, ಸ್ವಾತಿ ಅವರ ಬಲಗಾಲಿನ ಮಂಡಿ ಭಾಗಕ್ಕೆ ವಿಷಪೂರಿತ ಹಾವೊಂದು ಕಚ್ಚಿದೆ. 

ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಚಿಕಿತ್ಸೆಗಾಗಿ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷೆ ನಡೆಸಿದ ವೈದ್ಯರು ವೈದ್ಯರು ಮಹಿಳೆ ಆದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರ್ಘಟನೆ ಕುರಿತಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Snake Bite Tragedy 6-Month Pregnant Woman Dies

Snake Bite Tragedy 6-Month Pregnant Woman Dies
Snake Bite Tragedy 6-Month Pregnant Woman Dies

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor