ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಪೊಲೀಸರು ಎರಿಯಾ ಡಾಮಿನೇಷನ್ ಗಸ್ತನ್ನ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮೊನ್ನೆಯಷ್ಟೆ 66 ಮಂದಿ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು. ಇದೀಗ ಒಂದೇ ರಾತ್ರಿಯಲ್ಲಿ ಬರೋಬ್ಬರಿ 108 ಕೇಸ್​ಗಳನ್ನು ದಾಖಲಿಸಿದ್ದಾರೆ. 

ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

ದಿನಾಂಕ: 29-08-2023 ರಂದು ಸಂಜೆ ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ  ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿತ್ತು. 

ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

ಈ ವೇಳೆ  Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 96 ಲಘು ಪ್ರಕರಣಗಳನ್ನ ದಾಖಲಿಸಲಾಗಿದೆ. 

ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

ಅಲ್ಲದೆ 09 COTPA ಕಾಯ್ದೆ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ 03 ವ್ಯಕ್ತಿಗಳ ವಿರುದ್ಧ NDPS ಕಾಯ್ದೆ ಅಡಿಯಲ್ಲಿ 03 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor