ಆಯನೂರು : ಹಿಟ್​ ಆ್ಯಂಡ್​ ರನ್​​​, ಖಾಸಗಿ ಬಸ್​​ ಚಾಲಕ ಸಾವು

Published: 27 ಜುಲೈ 2026, 12:43 ಅಪರಾಹ್ನ • 1 min read
ಭಾಷೆ (Translate):
✨ AI ಓವರ್‌ವ್ಯೂ (ಮುಖ್ಯಾಂಶ)

Shivamogga Hit & Run ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಆಯನೂರು ಸಮೀಪ ಭೀಕರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.  ಶಿವಮೊಗ್ಗ ಕಾಂಗ್ರೆಸ್​​​ಗೆ ಯುವಕರ ಭವಿಷ್ಯಕ್ಕಿಂತ ರಾಜಕೀಯವೇ ಮುಖ್ಯ : ಬಿ,ವೈ ರಾಘವೇಂದ್ರ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರ…

Shivamogga Hit & Run ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಆಯನೂರು ಸಮೀಪ ಭೀಕರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಕಾಂಗ್ರೆಸ್​​​ಗೆ ಯುವಕರ ಭವಿಷ್ಯಕ್ಕಿಂತ ರಾಜಕೀಯವೇ ಮುಖ್ಯ : ಬಿ,ವೈ ರಾಘವೇಂದ್ರ

ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರ ಆಯನೂರು ಬಳಿಯ ವೀರಗಾರನ ಬೈರನಕೊಪ್ಪ ಸಮೀಪ ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶಿವಮೊಗ್ಗ ನಗರದ ಗಾಡಿಕೊಪ್ಪ ನಿವಾಸಿ ವಿರೇಶ್ (28) ಎಂದು ಗುರುತಿಸಲಾಗಿದೆ. ಖಾಸಗಿ ಬಸ್‌ ಒಂದರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್, ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 

ಘಟನೆ ನಡೆದ ತಕ್ಷಣವೇ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

END OF STORY

Prathapa thirthahalli

Senior Journalist | Malenadu Today
✓ Verified Journalist