ಶಿವಮೊಗ್ಗದ ಚಿನ್ನ ಬೆಳ್ಳಿ ವ್ಯಾಪಾರಿ ಗೌತಮ್ ಕಾಣೆ, ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

This Article Written by / Prathapa thirthahalli / ಫೆಬ್ರವರಿ 2, 2026

Shivamogga Gold Merchant Gautam Missing

ಶಿವಮೊಗ್ಗ: ನಗರದ ವಿದ್ಯಾನಗರದ ನಿವಾಸಿ, ಚಿನ್ನಬೆಳ್ಳಿ ವ್ಯಾಪಾರಿಯಾಗಿರುವ ಗೌತಮ್ (33) ಎಂಬುವವರು ನಾಪತ್ತೆಯಾಗಿದ್ದು,  ಈ ವ್ಯಕ್ತಿ ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

 ನಾಪತ್ತೆಯಾದ ಗೌತಮ್ ಅವರ ಚಹರೆ ಹೀಗಿದೆ

ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಇವರು ತೆಳುವಾದ ಗಡ್ಡ-ಮೀಸೆ ಬಿಟ್ಟಿದ್ದು, ಎಡಗೈ ಮೇಲೆ ‘SRG’ ಎಂಬ ಅಕ್ಷರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮನೆಯಿಂದ ಹೊರಡುವಾಗ ಇವರು ನೀಲಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು

ಈ ಚಹರೆಯ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಇವರ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ  ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯ ತಿಳಿಸಿದೆ. 

Shivamogga Gold Merchant Gautam Missing

Shivamogga Gold Merchant Gautam Missing
Shivamogga Gold Merchant Gautam Missing
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Doddapete police station,Malenadu Today News

ಮುಂದಿನ ಸುದ್ದಿ ಒದಿ