ಶಿವಮೊಗ್ಗ: ವಿಮಾನ ಟಿಕೆಟ್ ಕಾಯ್ದಿರಿಸುವ ನೆಪದಲ್ಲಿ ವ್ಯಕ್ತಿಗೆ ಬರೋಬ್ಬರಿ 11 ಲಕ್ಷ ರೂ. ವಂಚನೆ!

ಹಂಚಿಕೊಳ್ಳಿ
WhatsApp Facebook X Telegram
Shivamogga Cyber ScamThirthahalli Shivamogga Cyber Crime
Shivamogga Cyber ScamThirthahalli Shivamogga Cyber Crime

ಶಿವಮೊಗ್ಗ: ವಿಮಾನ ಟಿಕೆಟ್ ಬುಕ್ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ  ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶ್ರೀ ಭಾಗ್ಯವಂತಿ ಮಲ್ಟಿ ಬಿಸಿನೆಸ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿಗಳೆಂದು ನಟಿಸಿ ಈ ಕೃತ್ಯ ಎಸಗಿದ್ದಾರೆ.

ಶಿವಮೊಗ್ಗ: ಆನ್‌ಲೈನ್‌ನಲ್ಲಿ ಘರ್ ಸೋಪ್ ಬುಕ್ ಮಾಡಿದ ವ್ಯಕ್ತಿ: ಶಾಲೆಗೆ ಮಗನ ಫೀಸ್ ಕಟ್ಟಲು ಹೋದಾಗ ಕಾದಿತ್ತು ಶಾಕ್! 

Shivamogga Cyber Crime ಘಟನೆ ವಿವರ  

ಆರೋಪಿಗಳು ಆರಂಭದಲ್ಲಿ ದೂರುದಾರರನ್ನು ಸಂಪರ್ಕಿಸಿ ತಮ್ಮ ಕಂಪನಿಯ ಮೂಲಕ ಸುಲಭವಾಗಿ ವಿಮಾನ ಟಿಕೆಟ್ ಕಾಯ್ದಿರಿಸಬಹುದು ಎಂದು ನಂಬಿಸಿದ್ದರು. ನಂತರ ದೂರುದಾರರ ವೈಯಕ್ತಿಕ ಮಾಹಿತಿ ಪಡೆದು, ನೋಂದಣಿ ಶುಲ್ಕದ ಹೆಸರಿನಲ್ಲಿ 59,000 ರೂಪಾಯಿಗಳನ್ನು ಮೊದಲಿಗೆ ವರ್ಗಾಯಿಸಿಕೊಂಡಿದ್ದರು.

ಇದಾದ ಬಳಿಕ  ವಿವಿಧ ಹಂತಗಳಲ್ಲಿ ಹಣ ಪಡೆಯಲಾಗಿದೆ. ದೂರುದಾರರು, ಅವರ ಪತ್ನಿ ಹಾಗೂ ಮಗನ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 11,09,000 ರೂಪಾಯಿಗಳನ್ನು ಆರೋಪಿಗಳು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ಪಡೆದ ನಂತರ ಯಾವುದೇ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಕೊಡದೆ ವಂಚಿಸಿದ್ದಾರೆ. 

ಹಣ ಕಳೆದುಕೊಂಡ ದೂರುದಾರರು ತಮ್ಮ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ಹೆಚ್ಚುವರಿಯಾಗಿ 4,00,000 ರೂಪಾಯಿ ನೀಡಿದರೆ ಮಾತ್ರ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಿ ಮತ್ತಷ್ಟು ವಂಚಿಸಲು ಯತ್ನಿಸಿದ್ದಾರೆ. ಆದರೆ ಇಲ್ಲಿಯವರೆಗೆ ಪಾವತಿಸಿದ ಹಣವನ್ನಾಗಲಿ ಅಥವಾ ಟಿಕೆಟ್‌ನ್ನಾಗಲಿ ನೀಡದೇ ಸಂಪೂರ್ಣ ಯಾಮಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನಾ ಸಂಬಂಧ  ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor