ಶಿವಮೊಗ್ಗ : ನಿನ್ನತ್ರ ತುಂಬಾ ಹಣ ಇದೆ ಹಣ ಕೊಡು ಅಂದ, ಕೊಡಲ್ಲ ಅಂದಿದ್ದಕ್ಕೆ ಚಾ*ಕು ತೋರಿಸ್ದ? ಆಮೇಲೆ ಏನಾಯ್ತು

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್​, ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಹಣ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಬೆದರಿಸಿ, ಜೇಬಿನಲ್ಲಿದ್ದ ಹಣವನ್ನು  ಬಲವಂತವಾಗಿ ಕಿತ್ತುಕೊಂಡ ಘಟನೆ ಶಿವಮೊಗ್ಗದ ಸೂಳೆಬೈಲ್​ನಲ್ಲಿ ನಡೆದಿದೆ, ಈ ಸಂಬಂಧ ತಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ದೂರುದಾರರು ರಿಯಲ್ ಎಸ್ಟೇಟ್ ಹಾಗೂ ಸೆಕೆಂಡ್ ಹ್ಯಾಂಡ್ ವಾಹನಗಳ ಬ್ರೋಕರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪರಿಚಿತನಾಗಿದ್ದ ವ್ಯಕ್ತಿಯೊಬ್ಬ, ಇತ್ತೀಚೆಗೆ ದೂರುದಾರರ ಬಳಿ ಬಂದು ತನಗೆ ಹಣದ ತುರ್ತು ಅವಶ್ಯಕತೆಯಿದೆ ಎಂದು 10,000 ರೂಪಾಯಿ ಹಣ ಕೇಳಿದ್ದನು. ಆದರೆ ದೂರುದಾರರು ತಮಗೂ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದೆ ಎಂದು ಹೇಳಿ ಹಣ ನೀಡಲು ನಿರಾಕರಿಸಿದ್ದರು.

ಇದೇ ವಿಚಾರವಾಗಿ, ಆರೋಪಿ ಅಕ್ಟೋಬರ್ 24ರ ಸಂಜೆ ಮಾರ್ಕೆಟ್ ಪ್ರದೇಶದಲ್ಲಿ ದೂರುದಾರರು ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಮೂವರು ಹುಡುಗರೊಂದಿಗೆ ಪ್ಯಾಸೇಂಜರ್ ಆಟೋದಲ್ಲಿ ಬಂದಿದ್ದಾನೆ. ಏಕಾಏಕಿ ದೂರುದಾರರ ಬಳಿ ಬಂದ ಪ್ರಮುಖ ಆರೋಪಿ ಹಾಗೂ ಆತನ ಸಹಚರರು ಚಾಕುವನ್ನು ತೋರಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ, ಹಣ ಕೊಡು ಅಂದರೇ ಇಲ್ಲ ಅಂತೀಯಾ, ನಿನ್ನ ಬಳಿ ಇರುವ ಎಲ್ಲಾ ಹಣವನ್ನು ಕೊಡು, ಇಲ್ಲದಿದ್ದರೆ ಚಾಕುವಿನಿಂದ ಚುಚ್ಚಿಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. 

ಇದರಿಂದ ಭಯಗೊಂಡ ದೂರುದಾರರು ತಮ್ಮ ಬಳಿಯಿದ್ದ 17,200ರೂಪಾಯಿ. ಹಣವನ್ನು ಅವರಿಗೆ ನೀಡಿದ್ದಾರೆ. ಹಣ ಪಡೆದ ಆರೋಪಿಗಳು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಎಚ್ಚರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.ಘಟನೆ ಹಿನ್ನೆಲೆ ಶಿವಮೊಗ್ಗದ ತುಂಗಾನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor