ಶಿವಮೊಗ್ಗ: ಹೋರಿಹಬ್ಬ ಮುಗಿಸಿ ಬರುವಾಗ ಆಘಾತ!ಓರ್ವ ಸ್ಥಳದಲ್ಲಿಯೇ!? ಇನ್ನೊಬ್ಬ ಗಂಭೀರ

This Article Written by / ajjimane ganesh / ಅಕ್ಟೋಬರ್ 30, 2025

Shivamogga Breaking: One Dead, Another Critical in Shiralkoppa Hit-and-Run Accident

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ ಗ್ರಾಮದ ಬಳಿ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇದೇ ಘಟನೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. 

Shivamogga Breaking: One Dead, Another Critical in Shiralkoppa Hit-and-Run Accident
Shivamogga Breaking: One Dead, Another Critical in Shiralkoppa Hit-and-Run Accident

ಅಜ್ಜನನ್ನ ಕೊಂದ ಮೊಮ್ಮಗ! ಜೀವಾವಧಿ ಶಿಕ್ಷೆ ಕೊಟ್ಟ ಕೋರ್ಟ್​!

ಶಿರಾಳಕೊಪ್ಪದ ಸುಣ್ಣದಕೊಪ್ಪದ ಸಮೀಪ ಈ ದುರ್ಘಟನೆ ನಡೆದಿದೆ. ರಾಗಿಕೊಪ್ಪ ತಾಂಡಾದ ನಿವಾಸಿಗಳಾದ ಈ ಇಬ್ಬರು ಯುವಕರು ಬಸವನಂದಿಹಳ್ಳಿಯಲ್ಲಿ ನಡೆದಿದ್ದ ಹೋರಿ ಹಬ್ಬವನ್ನು ವೀಕ್ಷಿಸಿ ತಮ್ಮ ಊರಿಗೆ ವಾಪಸ್ ಆಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 

ವೇಗವಾಗಿ ಬಂದ ಲಾರಿ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು, ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.  ಪರಿಣಾಮ ಬೈಕ್‌ನಲ್ಲಿದ್ದ ಯುವಕರಲ್ಲಿ ಪುನೀತ್ (22) ಎಂಬ ದುರ್ದೈವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಯುವಕ ರಾಜೀವ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. 

ದುಡ್ಡು ಕಾಸು ವಿಚಾರದಲ್ಲಿ ಈ ದಿನದ ಭವಿಷ್ಯ ಬೇರೆಯಿದೆ? ದಿನಭವಿಷ್ಯ

ಈ ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga Breaking: One Dead, Another Critical in Shiralkoppa Hit-and-Run Accident
Shivamogga Breaking: One Dead, Another Critical in Shiralkoppa Hit-and-Run Accident

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga Breaking: One Dead, Another Critical in Shiralkoppa Hit-and-Run Accident

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ರಸ್ತೆ ಅಪಘಾತ,ಶಿಕಾರಿಪುರ,ಶಿವಮೊಗ್ಗ ಅಪಘಾತ

ಮುಂದಿನ ಸುದ್ದಿ ಒದಿ