ಸುದ್ದಿಯ ಸ್ಥಳ: Shikaripura, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಘಟನೆಗಳು ಸಂಭವಿಸಿವೆ. ಹುಣಸೇಕೊಪ್ಪ ಗ್ರಾಮದ ಸಮೀಪ ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಲು ತೆರಳಿದ್ದ ಅಶ್ರಫ್ (22) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಶಿಕಾರಿಪುರದಲ್ಲಿ ಯುವಕ ಸಾವು
ಶಿಕಾರಿಪುರ ತಾಲ್ಲೂಕಿನ ಹುಣಸೇಕೊಪ್ಪ ಗ್ರಾಮದ ಸಮೀಪ ಕಳೆದ ಬುಧವಾರ ಈ ದುರ್ಘಟನೆ ಸಂಭವಿಸಿದೆ. ಹಿರೇಲ ಗ್ರಾಮದಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಹೋರಿ ಬಿಡುವ ಹಬ್ಬಕ್ಕೆ ಬಂದಿದ್ದ ಹೋರಿಯೊಂದು ಕಾರ್ಯಕ್ರಮ ಮುಗಿದ ನಂತರ ವಾಪಸ್ ತೆರಳುವಾಗ ಕೆರೆಗೆ ಬಿದ್ದಿತ್ತು. ನೀರಿನಿಂದ ಹೊರಬರಲಾಗದೆ ಹೋರಿ ಒದ್ದಾಡುತ್ತಿರುವುದನ್ನು ಗಮನಿಸಿದ ಅಶ್ರಫ್ ಅದನ್ನು ರಕ್ಷಿಸಲು ಕೆರೆಗೆ ಇಳಿದಿದ್ದರು.
ಹೋರಿಯನ್ನು ರಕ್ಷಿಸುವ ಪ್ರಯತ್ನದಲ್ಲಿದ್ದಾಗ ಅಶ್ರಫ್ ಕಾಲು ಕೆರೆಯಲ್ಲಿ ಸಿಲುಕಿಕೊಂಡಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಶ್ರಫ್ ಅವರೊಂದಿಗೆ ಬಂದಿದ್ದ ಯುವಕರು ಹಾಗೂ ಸ್ಥಳದಲ್ಲಿದ್ದ ಹಲವರು ರಕ್ಷಣೆಗೆ ಮುಂದಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ, ಕೆರೆಯಲ್ಲಿ ಮುಳುಗುತ್ತಿದ್ದ ಹೋರಿ ಸುರಕ್ಷಿತವಾಗಿ ಹೊರಬಂದಿದೆ. ಮೃತ ಅಶ್ರಫ್ ಶಿಕಾರಿಪುರ ಪಟ್ಟಣದ ಕಾರ್ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದುಡಿಮೆಯ ಮೂಲಕ ಕುಟುಂಬದ ನಿರ್ವಹಣೆಗೆ ನೆರವಾಗುತ್ತಿದ್ದರು.
