ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಅಡಿಕೆ ದರದಲ್ಲಿ ಬದಲಾವಣೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇವತ್ತು ಕೂಡ ಅಡಿಕೆ ದರದಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಯಾವ ವೆರೈಟಿ ದರ ಹೇಗಿದೆ ನೋಡೋಣ ಬನ್ನಿ.
ನಿನ್ನೆಗೆ ಹೋಲಿಸಿದರೆ ಇವತ್ತು ರಾಶಿ ಇಡಿ ಗರಿಷ್ಠ ದರದಲ್ಲಿ ಸುಮಾರು 600 ರೂಪಾಯಿ ಹೆಚ್ಚಳವಾಗಿದ್ದು, ಇವತ್ತಿನ ದರ 49,600 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಗೊರಬಲುವಿನ ಗರಿಷ್ಠ ದರದಲ್ಲಿ ಎರಡು ಸಾವಿರ ರೂಪಾಯಿ ಹೆಚ್ಚಾಗಿದ್ದು, ಇಂದಿನ ದರ 39,000 ರೂಪಾಯಿಗೆ ತಲುಪಿದೆ. ಇನ್ನುಳಿದಂತೆ ಹಸಿ, ಬೆಟ್ಟಿ ಹಾಗೂ ಹೊಸ ರಾಶಿ ಇಡಿ ದರಗಳು ಈ ಕೆಳಗಿನಂತಿವೆ.
ಸರಕು / ಹಸ:
- ಕನಿಷ್ಠ: ₹50,029
- ಗರಿಷ್ಠ: ₹93,896
- ಮಾದರಿ: ₹79,339
ಬೆಟ್ಟೆ:
- ಕನಿಷ್ಠ: ₹49,619
- ಗರಿಷ್ಠ: ₹57,598
- ಮಾದರಿ: ₹56,598
ರಾಶಿಇಡಿ:
- ಕನಿಷ್ಠ: ₹42,619
- ಗರಿಷ್ಠ: ₹49,599
- ಮಾದರಿ: ₹48,099
ಗೊರಬಲು:
- ಕನಿಷ್ಠ: ₹19,000
- ಗರಿಷ್ಠ: ₹39,000
- ಮಾದರಿ: ₹36,899
ಹೊಸರಾಶಿಇಡಿ:
- ಕನಿಷ್ಠ: ₹42,366
- ಗರಿಷ್ಠ: ₹48,009
- ಮಾದರಿ: ₹47,099
