ಶಿವಮೊಗ್ಗ : ಒಂದು ವಾರದೊಳಗೆ ನೀರಿನ ಬಿಲ್​ ಕಟ್ಟಿಲ್ಲ ಅಂದ್ರೆ ಸಂಪರ್ಕ ಕಡಿತ

ಹಂಚಿಕೊಳ್ಳಿ
WhatsApp Facebook X Telegram
Drinking Water Supply to Be Disrupted in Shivamogga on September 6 and 7
Drinking Water Supply to Be Disrupted in Shivamogga on September 6 and 7

Shimoga Water Bill ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಪಾಲಿಕೆಯು ಮಹತ್ವದ ಸೂಚನೆಯೊಂದನ್ನು ನೀಡಿದೆ. ನೀರಿನ ಬಳಕೆದಾರರು ಅಥವಾ ಮಾಲೀಕರುಗಳು ತಮ್ಮ ನೀರಿನ ಕಂದಾಯದ ಬಾಕಿ ಹಣವನ್ನು ಉಳಿಸಿಕೊಂಡಿದ್ದಲ್ಲಿ, ಮುಂದಿನ 7 ದಿನಗಳ ಒಳಗಾಗಿ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಶಿವಮೊಗ್ಗ : KSRTC ಬಸ್​ ನಿಲ್ದಾಣದ ಶೌಚಾಲಯದ ಬಳಿ ವ್ಯಕ್ತಿ ಆತ್ಮ*ಹತ್ಯೆ

ಒಂದು ವೇಳೆ ನಿಗದಿತ ಅವಧಿಯೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ, ಅಂತಹ ಗ್ರಾಹಕರ ನೀರಿನ ಸಂಪರ್ಕವನ್ನುಯಾವುದೇ ಮುನ್ಸೂಚನೆ ಇಲ್ಲದೆ ಕಡಿತಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಧಿಕೃತ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor