ಹೊಸನಗರ: ಕೊಡಚಾದ್ರಿ ಸಮೀಪ ಹೃದಯಾಘಾತದಿಂದ ಪ್ರವಾಸಿಗ ಸಾವು

ಹಂಚಿಕೊಳ್ಳಿ
WhatsApp Facebook X Telegram
Kodachadri Bengaluru Youth Dies of Heart Attack
Kodachadri Bengaluru Youth Dies of Heart Attack

Kodachadri ಹೊಸನಗರ : ಪ್ರವಾಸಿಗನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ  ಸಂಭವಿಸಿದೆ. ಬೆಂಗಳೂರು ಮೂಲದ 28 ವರ್ಷದ ಶ್ರೀಕಾಂತ್ ಮೃತ ದುರ್ದೈವಿ.

ತಮ್ಮ ಸ್ನೇಹಿತರೊಂದಿಗೆ ಶುಕ್ರವಾರವಷ್ಟೇ ಕೊಡಚಾದ್ರಿ ಗಿರಿಶಿಖರ ವೀಕ್ಷಿಸಲು ಬಂದಿದ್ದ ಶ್ರೀಕಾಂತ್, ಸಂಪೇಕಟ್ಟೆ ಸಮೀಪವಿರುವ ಕಟ್ಟಿನಹೊಳೆ ಗ್ರಾಮದ ಗೆಳೆಯನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಠಾತ್ ಅಸ್ವಸ್ಥತೆ ಎದುರಾಗಿದ್ದು, ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಸದ್ಯ ಮೃತದೇಹವನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಕಾಯ್ದಿರಿಸಲಾಗಿದ್ದು, ಬೆಂಗಳೂರಿನಿಂದ ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಪ್ರಕ್ರಿಯೆಗಳು ಜರುಗಲಿವೆ. ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor