ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಅದ್ಧೂರಿ ವಿಜಯೋತ್ಸವ

ಹಂಚಿಕೊಳ್ಳಿ
WhatsApp Facebook X Telegram
Shimoga Yodhas Maharaja Trophy Victory
Shimoga Yodhas Maharaja Trophy Victory

Shimoga Yodhas ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಸಂಜೆ ಅದ್ಧೂರಿ ಸ್ವಾಗತ ಹಾಗೂ ವಿಜಯೋತ್ಸವ ಮೆರವಣಿಗೆ ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ವಲಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

ಶಿವಮೊಗ್ಗ: ಜುಲೈ 20 ರಿಂದ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಣಾಡಿದ ಅವರು ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್ ಸೇರಿದಂತೆ ಹಲವು ಬಲಿಷ್ಠ ತಂಡಗಳ ನಡುವೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಿವಮೊಗ್ಗ ಯೋಧಾಸ್ ತಂಡ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್, ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಸುಮಾರು 17 ವರ್ಷಗಳ ಬಳಿಕ ಶಿವಮೊಗ್ಗದ ತಂಡ ಟ್ರೋಫಿ ಗೆದ್ದಿರುವುದು ಜಿಲ್ಲೆಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು (Milestone) ಎಂದು ಡಿ.ಎಸ್. ಅರುಣ್ ಹೇಳಿದರು. ತಂಡದ ಸಿಇಒ ಮಿಥುನ್ ಅವರ ನೇತೃತ್ವದಲ್ಲಿ, ಉದ್ಯಮಿ ಅಭಿಷೇಕ್ ಅಗರ್ವಾಲ್ ಫ್ರಾಂಚೈಸಿ ಮೂಲಕ ತಂಡವನ್ನು ಖರೀದಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದು ಅವರು ತಿಳಿಸಿದರು.

ಮಹಾರಾಜ ಟ್ರೋಫಿ ವಿಜೇತ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಸಂಜೆ 6 ಗಂಟೆಗೆ ಬೆಕ್ಕಿನಕಲ್ಮಠದಿಂದ ಕೆಎಸ್‌ಸಿಎ ಮೈದಾನದವರೆಗೆ ಅದ್ಧೂರಿ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕ ಎಸ್.ಎನ್. ಚೆನ್ನಬಸಪ್ಪ ಸೇರಿದಂತೆ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

Shimoga Yodhas ಅಕ್ಷಯ್ ಕುಟುಂಬಕ್ಕೆ ₹5 ಲಕ್ಷ ನೆರವು

ಟ್ರೋಫಿಯ ಬಹುಮಾನ ಮೊತ್ತ ₹15 ಲಕ್ಷದಲ್ಲಿ ದಿವಂಗತ ಎಸ್.ಎಲ್. ಅಕ್ಷಯ್ ಅವರ ಕುಟುಂಬಕ್ಕೆ ₹5 ಲಕ್ಷ ಧನಸಹಾಯ ನೀಡಲಾಗುವುದು ಎಂದು ಘೋಷಿಸಲಾಯಿತು. ಅಲ್ಲದೆ, ಐಸಿಎಸ್ ಮೊಬೈಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಕ್ಷಯ್ ಅವರ ಮಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor