50% ರಿಯಾಯಿತಿ,46,06,500 ಸಂಗ್ರಹ! ನೀವು ದಂಡ ಕಟ್ಟೆಬೇಕೆ? ಓದಿ

ಹಂಚಿಕೊಳ್ಳಿ
WhatsApp Facebook X Telegram
50% Discount on Traffic Fines in Shivamogga judge pres meet malenadutoday image

Shimoga Traffic E Challan / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ 21.06.2026 ರಿಂದ 01.07.2026 ರ ಅವಧಿಯಲ್ಲಿ ಅಂದರೆ 50 ಪರ್ಸೆಂಟ್ ರಿಯಾಯಿತಿ ನೀಡಿದ ಬಳಿಕ ಒಟ್ಟು 10778 ಇ-ಚಲನ್ ಪ್ರಕರಣಗಳು ಇತ್ಯರ್ಥಗೊಂಡಿವೆ. ವಾಹನ ಸವಾರರು ಶೇಕಡ 50ರಷ್ಟು ರಿಯಾಯಿತಿಯ ಸೌಲಭ್ಯವನ್ನು ಬಳಸಿಕೊಂಡು ಒಟ್ಟು 4606500 ರೂಪಾಯಿಗಳ ದಂಡವನ್ನು ಪಾವತಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಅವರು ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ದಂಡದ ಮೊತ್ತ ಪಾವತಿಯ ಪ್ರಗತಿಯನ್ನು ಪರಿಶೀಲಿಸಿದರು.

ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ರಿಯಾಯಿತಿ ಆದೇಶದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ದಂಡ ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರು ತೋರಿರುವ ಕಾರ್ಯತತ್ಪರತೆ ಮೆಚ್ಚುವಂತದ್ದು

ಸಂತೋಷ್ ಎಂ ಎಸ್, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು

ಸರ್ಕಾರವು ರಿಯಾಯಿತಿ ಆದೇಶವನ್ನು ಹೊರಡಿಸುವ ವೇಳೆಗೆ ಶಿವಮೊಗ್ಗದಲ್ಲಿ ಒಟ್ಟು 299037 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳಿಂದ ಒಟ್ಟು 237118350 ರೂಪಾಯಿ ಪಾವತಿಗೆ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು 10.07.2026 ರ ಒಳಗಾಗಿ ತಮ್ಮ ದಂಡವನ್ನು ಪಾವತಿಸುವಂತೆ ನ್ಯಾ.ಸಂತೋಷ್ ಎಂ.ಎಸ್​ ಸೂಚಿಸಿದ್ದಾರೆ.

ವಾಹನ ಮಾಲೀಕರು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿ ಅಥವಾ ವಿವಿಧ ವೃತ್ತಗಳಲ್ಲಿ ಕರ್ತವ್ಯದಲ್ಲಿರುವ ಸಂಚಾರಿ ಪೊಲೀಸರಿಗೆ ತಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ದಂಡದ ವಿವರಗಳನ್ನು ಪಡೆದುಕೊಳ್ಳಬಹುದು.

ಇದರ ಜೊತೆಗೆ https://103.195.218.159/challan ಜಾಲತಾಣಕ್ಕೆ ಭೇಟಿ ನೀಡುವ ಮೂಲಕವೂ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬಹುದು. ಸಾರ್ವಜನಿಕರು ನಿಗದಿತ ದಿನಾಂಕದೊಳಗೆ ಶೇಕಡ 50ರಷ್ಟು ರಿಯಾಯಿತಿಯ ಲಾಭವನ್ನು ಪಡೆದು ದಂಡ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor