ರಾಷ್ಟ್ರ ಮಟ್ಟದ ಇನ್‍ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆ ಆದ ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ವಿದ್ಯಾರ್ಥಿನಿಯರು!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

2021-22 ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯಿಂದ ‘ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೆಳಕಂಡ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನವದೆಹಲಿಯಲ್ಲಿ ಅ.9 ರಿಂದ 11 ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಶಿವಮೊಗ್ಗ ತಾಲ್ಲೂಕಿನ ಆಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರ್ಥನ ಎಸ್ ಶೆಟ್ಟಿ, ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಪೇಕ್ಷ ಹೆಚ್.ಪಿ. ಹಾಗೂ ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚಂದ್ರಮ್ಮ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿನಿಯರನ್ನು ಡಯಟ್ ಪ್ರಾಂಶುಪಾಲರಾದ ಬಿ.ಆರ್.ಬಸವರಾಜಪ್ಪ, ಇನ್‍ಸ್ಪೈರ್ ಅವಾರ್ಡ್ ಜಿಲ್ಲಾ ನೋಡಲ್ ಅಧಿಕಾರಿ ನಾಗರಾಜ ಎಂ, ಇತರೆ ಉಪನ್ಯಾಸಕರು, ನೌಕರ ವೃಂದದವರು ಅಭಿನಂದಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor