ಶಿವಮೊಗ್ಗ | ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಈ ಬಾರಿ ಫೆಬ್ರವರಿ 24ರಿಂದ 28ರವರೆಗೆ ಅತ್ಯಂತ ಸಡಗರದಿಂದ ನಡೆಯಲಿದೆ.
ಜಾತ್ರೆಯ ಹಿನ್ನೆಲೆ ಇಂದು ಸಾರಾ ಹಾಕುವ ಅಥವಾ ಅಂಕೆ ಹಾಕುವ ಕಾರ್ಯಕ್ರಮವು ಜರುಗಿತು. ಸಮಿತಿಯ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಡೋಲು ಬಾರಿಸುವ ಮೂಲಕ ಈ ಧಾರ್ಮಿಕ ವಿಧಿಗೆ ಚಾಲನೆ ನೀಡಿದರು. ಈ ವೇಳೆ ಜಾತ್ರೆಯ ಪೋಸ್ಟರ್ನ್ನು ಆಟೋ ರಿಕ್ಷಾಗಳ ಮೇಲೆ ಅಂಟಿಸುವ ಮೂಲಕ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಾಯಿತು.
Shimoga Kote Marikamba Jathre ಏನಿದು ಸಾರಾ ಹಾಕುವ ಕಾರ್ಯಕ್ರಮ
ಸಾರಾ ಹಾಕುವುದು ಎಂದರೆ ಅದು ದೇವಿಯ ಹೆಸರಿನಲ್ಲಿ ಇಡೀ ನಗರಕ್ಕೆ ವಿಧಿಸಲಾಗುವ ಒಂದು ಪವಿತ್ರ ಆಜ್ಞೆಯಾಗಿದೆ. ಜಾತ್ರೆಯ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಮತ್ತು ಊರಿನ ಜನತೆಗೆ ಯಾವುದೇ ಸಂಕಷ್ಟಗಳು ಬರದಂತೆ ತಡೆಯಲು ಈ ಗಡಿ ನಿರ್ಣಯದ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಕೆಳದಿ ಅರಸರ ಕಾಲದಿಂದಲೂ ನಡೆದುಬಂದಿರುವ ಈ ಸಂಪ್ರದಾಯವು ಊರಿನ ರಕ್ಷಣೆಗಾಗಿ ಕೈಗೊಳ್ಳುವ ‘ಗಡಿ ಕಟ್ಟುವುದು’ ಎಂಬ ನಂಬಿಕೆಯ ಪ್ರತೀಕವಾಗಿದೆ. ಹಳೆಯ ಕಾಲದಲ್ಲಿ ಈ ಸಾರಾ ಹಾಕಿದ ನಂತರ ಗ್ರಾಮಸ್ಥರು ಊರು ಬಿಟ್ಟು ಹೋಗದಂತೆ ಮತ್ತು ಹೊರಗಿನವರು ಅಶುದ್ಧತೆಯಿಂದ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.
Shimoga Kote Marikamba Jathre 2026


