ಬಾಡಿಗೆ ರೂಮ್​ನಲ್ಲಿ ಅಪರಿಚಿತ ಶವ ಪತ್ತೆ, ವಾರಸುದಾರರ ಪತ್ತೆಗೆ ಮನವಿ

ಹಂಚಿಕೊಳ್ಳಿ
WhatsApp Facebook X Telegram
Shimoga Kin Sought Old Man Found Dead
Shimoga Kin Sought Old Man Found Dead

Shimoga ಶಿವಮೊಗ್ಗ :ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದ್ದು, ಮೃತರ ಸಂಬಂಧಿಕರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. 

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಹೊಸಮನೆ 2ನೇ ಕ್ರಾಸ್‌ನಲ್ಲಿರುವ ವೆಂಕಟೇಶ್ವರ ನಿಲಯದ ಬಾಡಿಗೆ ಮನೆಯಲ್ಲಿ ಕಳೆದ 13 ತಿಂಗಳುಗಳಿಂದ ವಾಸವಿದ್ದ ಸುಮಾರು 65 ವರ್ಷದ ರಾಮಚಂದ್ರ ರಾವ್ ಎಂಬುವವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ನಗರದ ಪಾರ್ಕ್ ಬಡಾವಣೆಯ ಕಾರ್ತಿಕ್ ಭವನ ಹಾಗೂ ಕುವೆಂಪು ರಸ್ತೆಯ ಪಾಕಶಾಲೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮೃತ ರಾಮಚಂದ್ರ ರಾವ್ ಅವರು ಸುಮಾರು 5.6 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು ಹಾಗೂ ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ದುಂಡುಮುಖದ ಈ ವ್ಯಕ್ತಿಯ ವಾರಸುದಾರರು ಯಾರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಬಗ್ಗೆ ಯಾವುದೇ ಮಾಹಿತಿ ಇರುವವರು ಅಥವಾ ಅವರ ಸಂಬಂಧಿಕರು ತಕ್ಷಣವೇ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಮನವಿ ಮಾಡಲಾಗಿದೆ.

ಸಾರ್ವಜನಿಕರು ದೂರವಾಣಿ ಸಂಖ್ಯೆ 08182-221414 ಅಥವಾ ಮೊಬೈಲ್ ಸಂಖ್ಯೆ 9916882544 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

Shimoga Kin Sought Old Man Found Dead

Shimoga Kin Sought Old Man Found Dead
Shimoga Kin Sought Old Man Found Dead
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor