SHIVAMOGGA NEWS TODAY

ಶಿವಮೊಗ್ಗ: ದೌಲತ್ತಲ್​​ ಮೆರೆದವರೆಲ್ಲ ಹಿಸ್ಟ್​​​ರೀಲಿ ಉಳಿದೇ ಇಲ್ಲ ಎಂದ ಟ್ರಾಫಿಕ್​ ಪೊಲೀಸರು, 6 ಜನ ಯುವಕರಿಗೆ ದಂಡ!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಗರದ ಆಲ್ಕೊಳದ ನಂದಿನಿ ಬಡಾವಣೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ಜಿಲ್ಲಾ ಸಂಚಾರಿ ಪೊಲೀಸರು ದಂಡ ಬಿಸಿ ಮುಟ್ಟಿಸಿದ್ದಾರೆ.

ಶಿವಮೊಗ್ಗದ ವಿವಿಧೆಡೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ! 

ಯುವಕರು ತಮ್ಮ ಬೈಕ್ ಹಾಗೂ ಮೋಪೆಡ್‌ಗಳಲ್ಲಿ ವೀಲಿಂಗ್ ಮಾಡುವುದು ಮತ್ತು ರ ಝೀರೋ ಕಟ್ ಹೊಡೆಯುವಂತಹ ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ, ಅಷ್ಟೇ ಅಲ್ಲದೆ, ಈ ಸಾಹಸಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಯುವಕರ ಈ ಪುಂಡಾಟಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಟ್ರಾಫಿಕ್ ಪೊಲೀಸರು, ಕಾರ್ಯಾಚರಣೆ ನಡೆಸಿ ಆರು ಮಂದಿ ಯುವಕರನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣವೇ ಅವರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ವಿಶೇಷವೆಂದರೆ, ಪೊಲೀಸರು ತಾವು ಮಾಡಿದ ಕಾರ್ಯಾಚರಣೆಯ ವಿಡಿಯೋವನ್ನು ವಿಶಿಷ್ಟವಾಗಿ ಎಡಿಟ್ ಮಾಡಿ ತಮ್ಮ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಯುವಕರ ವೀಲಿಂಗ್ ವಿಡಿಯೋಗೆ, ದೌಲತ್ತಲ್ಲಿ  ಮೆರೆದವರೆಲ್ಲಾ ಹಿಸ್ಟರೀಲಿ ಉಳಿದೇ ಇಲ್ಲ ಎಂಬ ಹಾಡನ್ನುಬಳಸಿ, ಕೊನೆಯಲ್ಲಿ ದಂಡ ವಿಧಿಸಿದ ಫೋಟೋ ಸೇರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಈ ನಡೆಯು ವೀಲಿಂಗ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಿದಂತಿದೆ.

Shivamogga Traffic Police Penalty on Wheelie Riders

Shivamogga Traffic Police Penalty on Wheelie Riders
Shivamogga Traffic Police Penalty on Wheelie Riders
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.