ಬಂಗಾರದ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ನಿನ್ನೆ ದಿನ ಅಂದರೆ ಬುಧವಾರದ ವಹಿವಾಟಿನಲ್ಲಿ ರಾಷ್ಟ್ರಮಟ್ಟದ್ದಲ್ಲಿ ಚಿನ್ನವೂ ಒಂದು ಸಾವಿರ ರೂಪಾಯಿ ಹೆಚ್ಚಳ ಕಂಡಿದೆ. ಶುದ್ಧ ಚಿನ್ನದ ದರ ₹1 ಸಾವಿರ ಹೆಚ್ಚಾಗಿದೆ. 10 ಗ್ರಾಂಗೆ ಒಟ್ಟು ದರ ₹1,00,750 ನಷ್ಟಿದೆ.
Shimoga Abharana
ಇನ್ನು ಆಭರಣ ಚಿನ್ನದ ದರ ₹1,050 ಏರಿಕೆ ಕಂಡಿದ್ದು 10 ಗ್ರಾಮಕ್ಕೆ ₹1,00,350 ನಷ್ಟಿದೆ. ಕಳೆದ ಏಪ್ರಿಲ್ 22ರಂದು 10 ಗ್ರಾಂ ಚಿನ್ನದ ದರ ₹1,01,600 ನಷ್ಟಿತ್ತು. ಇದೀಗ ಮತ್ತೊಮ್ಮೆ ಚಿನ್ನದ ದರ ಲಕ್ಷದ ಗಡಿ ದಾಟಿ ನಿಂತಿದೆ. ಇತ್ತ ಬೆಳ್ಳಿಯ ದರವೂ ಏರಿಕೆ ಕಂಡಿದ್ದು, ಪ್ರತಿ ಕೆ.ಜಿಗೆ ₹440 ರಷ್ಟು ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ ₹98,940 ನಷ್ಟಿದೆ.