ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್​ : ಓರ್ವ ಸಾವು

prathapa thirthahalli
Prathapa thirthahalli - content producer

ರಿಪ್ಪನ್‌ಪೇಟೆ : ಸವಾರನ ನಿಯಂತ್ರಣ ತಪ್ಪಿ ಬೈಕೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿ ಸವಾರ  ಸ್ಥಳದಲ್ಲಿಯೇ ಸಾವನ್ನಪ್ಪಿರುವ  ಘಟನೆ  ಭಾನುವಾರ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ರಿಗೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ripponpete Manjunath Dies in Bike Accident
Ripponpete Manjunath Dies in Bike Accident

ಮದ್ದೂರು ಗಲಾಟೆಗೆ ರಾಜ್ಯ ಸರ್ಕಾರದ ನೀತಿಗಳೇ ನೇರ ಕಾರಣ : ಡಿಎಸ್​ ಅರುಣ್​ 

ಮೃತಪಟ್ಟ ಯುವಕನನ್ನು ಗಿಣಸೆ ಗ್ರಾಮದ ಶಿವಪ್ಪ ಅವರ ಮಗ ಮಂಜುನಾಥ್ (35) ಎಂದು ಗುರುತಿಸಲಾಗಿದೆ. ಮಂಜುನಾಥ್ ಹೊಸನಗರ ತಾಲ್ಲೂಕಿನಲ್ಲಿ ಗ್ರಾಮ ಒನ್ ಕೇಂದ್ರವನ್ನು ನಡೆಸುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಯುವಕ  ಗಿಣಸೆ ಗ್ರಾಮದ ನಿವಾಸಿ ರೋಹಿತ್ (26) ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ರಿಪ್ಪನ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನವು ಚಾಲಕನ  ನಿಯಂತ್ನ ತಪ್ಪಿ ರಸ್ತೆಯ ಬದಿಗೆ ಬಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ  ರಭಸಕ್ಕೆ ಹಿಂಬದಿಯ ಸವಾರನಾಗಿದ್ದ ಮಂಜುನಾಥ್‌ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Ripponpete Manjunath Dies in Bike Accident

Ripponpete Manjunath Dies in Bike Accident
Ripponpete Manjunath Dies in Bike Accident
Share This Article