ತೀರ್ಥಹಳ್ಳಿ ತುಂಗಾ ಕಾಲೇಜು ಬಳಿ ಬೈಕ್​ ಹಾಗೂ ಬಸ್​ ನಡುವೆ ಅಪಘಾತ : ಸವಾರನ ಸ್ಥಿತಿ ಗಂಭೀರ

prathapa thirthahalli
Prathapa thirthahalli - content producer

ತೀರ್ಥಹಳ್ಳಿ :   ತೀರ್ಥಹಳ್ಳಿಯ ತುಂಗಾ ಕಾಲೇಜು ಬಳಿ  ಖಾಸಗಿ ಬಸ್​ ಹಾಗು ಬೈಕ್​​ ​ ನಡುವೆ  ಅಪಘಾತ ಸಂಬವಿಸಿದೆ. ಇದರ ಪರಿಣಾಮ ಬೈಕ್​ ಚಾಲಕನ ಸ್ಥಿತಿ ಗಂಭೀರವಾಗಿದೆ.

 ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

Private Bus vs Bike Accident Near Tunga College 
Private Bus vs Bike Accident Near Tunga College

ಇಂದು ಬೆಳಿಗ್ಗೆ ಕುಶಾವತಿ ರಸ್ತೆ ತಿರುವಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಯ ಹೊನ್ನಾಳಿಯ ಶಾಲಾ ಪ್ರವಾಸದ ವಿದ್ಯಾರ್ಥಿಗಳು ಪಯಣಿಸುತ್ತಿದ್ದ ಬಸ್​ಗೆ  ಸ್ಥಳೀಯ ಬಾನುಗೋಡಿನ ನಿವಾಸಿಯ ಬೈಕ್​​ ಎದುರಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಬಸ್ಸಿನ ಕೆಳಗೆ ನುಗ್ಗಿದ್ದು, ಬೈಕ್​ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.  ಕೂಡಲೇ ಅವರನ್ನು ಚಿಕಿತ್ಸೆಗೆಂದು ಮಣಿಪಾಲ್​ ಆಸ್ಪತ್ರೆಗೆ  ದಾಖಲಿಸಲಾಗಿದ್ದು, ಬಸ್​ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

Private Bus vs Bike Accident Near Tunga College 

 

Share This Article