SHIVAMOGGA NEWS TODAY

ಆಯನೂರು ಗೇಟ್​ನಲ್ಲಿ ಇನ್ಮೇಲೆ ನೋ ಎಂಟ್ರಿ! ಪೂರ್ತಿ ವಿಚಾರ ಓದಿ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

No Entry fo Vehicles near Ayanur Gate Signal ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಆಯನೂರು ಗೇಟ್ ಸಿಗ್ನಲ್ ಬಳಿ ಟ್ರಾಫಿಕ್​ ಕಂಟ್ರೋಲ್ ಮಾಡುವ ಉದ್ದೇಶಕ್ಕಾಗಿ ಒನ್​ ವೇ ಟ್ರಾಫಿಕ್ ನಿಯಮ ಜಾರಿ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆಲ್ಗೊಳ ವೃತ್ತದ ಕಡೆಯಿಂದ ಬಂದು ಹೆಲಿಪ್ಯಾಡ್ ವೃತ್ತದ ಕಡೆಗೆ ಸಂಚರಿಸುವ ವಾಹನಗಳಿಗೆ ಎದುರಾಗಿ, ಆಟೋ ಕಾಂಪ್ಲೆಕ್ಸ್ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಎಂಟ್ರಿ’ ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 08.06.2026 ರಂದು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

Ayanur Gate Signal : ಜಿಲ್ಲಾಡಳಿತ ಪ್ರಕಟಣೆಯಲ್ಲಿ ಏನಿದೆ ಗಮನಿಸಿ

  • ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆಯನೂರು ಗೇಟ್ ವೃತ್ತದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದ್ದು, ವಾಹನ ಹಾಗೂ ಸಂಚಾರ ದಟ್ಟಣೆ ವಿಪರೀತವಾಗಿ ಹೆಚ್ಚಾಗುತ್ತಿದೆ ಎಂದು ಶಿವಮೊಗ್ಗ ಪೊಲೀಸ್ ಅಧೀಕ್ಷಕರು 12.03.2026 ರಂದು ಬರೆದ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.
  • ಆಯನೂರು ಗೇಟ್ ಸರ್ಕಲ್ ಎಂಬುದು ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಸಾಗರ ಮಾರ್ಗಕ್ಕೆ, ಸಾಗರದಿಂದ ಹೆಲಿಪ್ಯಾಡ್ ವೃತ್ತಕ್ಕೆ, ಗೋಪಾಳ ಮತ್ತು ಶರಾವತಿ ನಗರದ ಕಡೆಗೆ ತೆರಳಲು ಸಂಪರ್ಕ ಕಲ್ಪಿಸುವ ಪ್ರಮುಖ 4 ರಸ್ತೆಗಳ ಕೂಡು ರಸ್ತೆಯಾಗಿದೆ.
  • ಇಲ್ಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಈಗಾಗಲೇ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ಈ ಆಯನೂರು ಗೇಟ್ ಸರ್ಕಲ್ ಸಮೀಪದಲ್ಲಿಯೇ ಆಟೋ ಕಾಂಪ್ಲೆಕ್ಸ್ ಇದ್ದು, ಅಲ್ಲಿ ಹಲವಾರು ವಾಹನ ದುರಸ್ತಿ ಮಳಿಗೆಗಳು ಹಾಗೂ ಗ್ಯಾರೇಜ್‌ಗಳು ಇರುವುದರಿಂದ ವಾಹನಗಳ ಓಡಾಟವು ಮಿತಿಮೀರಿರುತ್ತದೆ.
  • ನಿಯಮದ ಪ್ರಕಾರ, ಆಟೋ ಕಾಂಪ್ಲೆಕ್ಸ್‌ಗೆ ತೆರಳುವ ವಾಹನ ಚಾಲಕರು ಎಪಿಎಂಸಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ರಸ್ತೆ ವಿಭಜಕವನ್ನು ಬಳಸಿ ಹೋಗಬೇಕಾಗಿದೆ. ಆದಾಗ್ಯೂ, ವಾಹನ ಸವಾರರು ಆ ಮಾರ್ಗವನ್ನು ಬಳಸದೆ, ಆಯನೂರು ಗೇಟ್ ಸಿಗ್ನಲ್ ಬಳಿ ಆಲ್ಗೊಳ ಸರ್ಕಲ್ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುತ್ತಿರುವ ವಾಹನಗಳಿಗೆ ಮುಖಾಮುಖಿಯಾಗಿ ಆಟೋ ಕಾಂಪ್ಲೆಕ್ಸ್ ಕಡೆಗೆ ನುಗ್ಗುತ್ತಿದ್ದಾರೆ.
  • ಇದರಿಂದಾಗಿ ಆ ಭಾಗದಲ್ಲಿ ಅಪಘಾತಗಳು ಸಂಭವಿಸುವ ಅಪಾಯವು ಹೆಚ್ಚಾಗಿರುತ್ತದೆ ಎಂದು ಪೊಲೀಸ್ ಇಲಾಖೆಯು ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದ ಈ ಪ್ರಸ್ತಾವನೆಯನ್ನು ಪರಿಗಣಿಸಿದ ಜಿಲ್ಲಾಡಳಿತವು, ಸಾರ್ವಜನಿಕರ ಹಿತರಕ್ಷಣೆ ಹಾಗೂ ಸುಗಮ ವಾಹನ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿದೆ.
  • ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221(ಎ)(5) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಪ್ರಭುಲಿಂಗ ಕವಳಿಕಟ್ಟಿ (ಭಾ.ಆ.ಸೇ.) ಅವರು ಈ ವಾಹನ ಸಂಚಾರ ನಿಷೇಧ ಆದೇಶವನ್ನು ಜಾರಿಗೊಳಿಸಿದ್ದಾರೆ

Whatsapp https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ