SHIVAMOGGA NEWS TODAY

‘ವೆಜ್ ಬಿರಿಯಾನಿ’ ಹೆಸರಿಗೆ ವಿರೋಧ: ಮರುನಾಮಕರಣ ಮಾಡಲು ಸ್ವಾಮೀಜಿಗಳ ಅಭಿಯಾನ! ಏನಿದು ವಿಚಾರ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Veg Biryani ಮಲೆನಾಡು ಟುಡೆ ಸುದ್ದಿ / ಉತ್ತರಾಖಂಡ ರಾಜ್ಯದ ಪ್ರಸಿದ್ಧ ಪವಿತ್ರ ಪುಣ್ಯಕ್ಷೇತ್ರವಾಗಿರುವ ಹರಿದ್ವಾರದಲ್ಲಿ ವೆಜ್ ಬಿರಿಯಾನಿ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ವಿಶಿಷ್ಟವಾದ ಅಭಿಯಾನವೊಂದು ಆರಂಭಗೊಂಡಿದೆ. ಅಖಂಡ ಪರಶುರಾಮ ಅಖಾಡದ ನೇತೃತ್ವದಲ್ಲಿ ಒಗ್ಗೂಡಿರುವ ಸ್ವಾಮೀಜಿಗಳ ಗುಂಪೊಂದು ಈ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದು, ಹೋಟೆಲ್ ಹಾಗೂ ಉಪಹಾರ ದರ್ಶಿನಿಗಳಲ್ಲಿ ಸಸ್ಯಾಹಾರಿ ಆಹಾರಕ್ಕೆ ಬಿರಿಯಾನಿ ಎಂಬ ಪದವನ್ನು ಬಳಸದಂತೆ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬದಲಾಗಿ ವೆಜ್ ಪಲಾವ್ ಎಂದು ಕರೆಯುವಂತೆ ಅಗ್ರಹಿಸ್ತಿದ್ದಾರೆ. ಸದ್ಯ ಈ ಅಭಿಯಾನ ಸದ್ದು ಮಾಡುತ್ತಿದೆ.

ಬಿರಿಯಾನಿ ಎಂಬ ಪದ ಮೂಲತಃ ಮಾಂಸಾಹಾರಿ ಖಾದ್ಯವನ್ನು ಪ್ರತಿನಿಧಿಸುತ್ತದೆ . ಇದನ್ನ ತಯಾರಿಸುವಾಗ ಯಾವುದೇ ರೀತಿಯ ಮಾಂಸ ಬಳಸದೇ ಇದ್ದರೂ ಸಹ, ಕೇವಲ ‘ಬಿರಿಯಾನಿ’ ಎಂಬ ಪದದ ಬಳಕೆಯು ಶುದ್ಧ ಸಸ್ಯಾಹಾರಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ ಎಂಬುದು ಸ್ವಾಮೀಜಿಗಳ ವಾದ. ಅಲ್ಲದೆ ಈ ಕಾರಣಕ್ಕಾಗಿ ಬಿರಿಯಾನಿ ಎನ್ನುವ ಬದಲಾಗಿ ವೆಜ್ ಪಲಾವ್ ಎಂದೇ ಹೆಸರಿಸಬೇಕು ಎಂದು ಸ್ವಾಮೀಜಿಗಳು ಆಗ್ರಹಿಸ್ತಿದ್ದಾರೆ.. ಈ ಅಭಿಯಾನದ ಭಾಗವಾಗಿ ಅಖಂಡ ಪರಶುರಾಮ ಅಖಾಡದ ಸ್ವಯಂಸೇವಕರು ಹರಿದ್ವಾರ ನಗರದಾದ್ಯಂತ ಕಾರ್ಯಾಚರಣೆಗಿಳಿದಿದ್ದಾರೆ.

Whatsapp https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ