ತುಂಗಾ ನದಿ ತೀರದ ಟ್ರೈಯಲ್ ಬ್ಲಾಸ್ಟ್ ಕೇಸ್ ಶಿವಮೊಗ್ಗಕ್ಕೆ ಎನ್.ಐ.ಎ ತಂಡ ಭೇಟಿ !

ಹಂಚಿಕೊಳ್ಳಿ
WhatsApp Facebook X Telegram
Maaz, Yaasin, Shivamogga

ಶಿವಮೊಗ್ಗ ಹೊರ ವಲಯದ ಗುರುಪುರ ಬಳಿಯ ತುಂಗಾನದಿ ತೀರದಲ್ಲಿ ಇತ್ತಿಚ್ಚೆಗೆ ನಡೆದ ಟ್ರೈಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.. ತಂಡ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದೆ. ರಾಷ್ಟ್ರಧ್ವಜ ಸುಟ್ಟ ಪ್ರಕರಣ ಹಾಗು ಟ್ರೈಯಲ್ ಬ್ಲಾಸ್ಟ್ ನಂತ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಂಕಿತ ಮಾಜ್ ಮತ್ತು ಯಾಸಿನ್ ಆರೋಪಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಎನ್.. ತಂಡ ಇಂದು ಹೆಚ್ಚಿನ ತನಿಖೆಗಾಗಿ ಶಿವಮೊಗ್ಗದ ಗ್ರಾಮಾಂತರ ಠಾಣೆಗೆ ಭೇಟಿ ನೀಡಿದೆ.

ಎನ್​​ಐಎ ವಶಕ್ಕೆ ಪಡೆದಿರೋ ಇಬ್ಬರು ಆರೋಪಿಗಳು ಐಸಿಸ್​ ಉಗ್ರರ ಜೊತೆಗೂ ನಂಟು ಹೊಂದಿರೋ ಆರೋಪ ಕೇಳಿ ಬಂದಿದೆ. ಸದ್ಯ ಕಸ್ಟಡಿಗೆ ಪಡೆದು ತೀವ್ರ ತನಿಖೆ ನಡೆಸ್ತಿರೋ ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಶಂಕಿತರಿಂದ ಈಗಾಗಲೇ ಮೊಬೈಲ್​, ಪೆನ್​ ಡ್ರೈವ್​ ಮತ್ತು ಲ್ಯಾಪ್​ಟಾಪ್​​ ವಶಕ್ಕೆ ಪಡೆದು ಹೆಚ್ಚಿನ ಸಾಕ್ಷಿ ಸಂಗ್ರಹಿಸಲಾಗ್ತಿದೆ. ಸುಮಾರು ಎರಡು ಟಿಬಿಯಷ್ಟಿರುವ ಮಾಹಿತಿ ಪಿಡಿಎಫ್ ಫಾರ್ಮಾಟ್​​ನಲ್ಲಿ ಮಾಹಿತಿ ಇದೆ.  ಐಸಿಸ್ ಚಟುವಟಿಕೆ, ಬಾಂಬ್​ ತಯಾರಿ, ಖಲೀಫ್​ ಸ್ಟೇಟ್​ ಸೇರಿ ಹಲವು ವಿಷಯಗಳನ್ನು ಗ್ಯಾಜೆಟ್ಸ್ ಒಳಗೊಂಡಿದೆ. ಹಿನ್ನೆಲೆಯಲ್ಲಿ ಆರೋಪಿಗಳ ಕಸ್ಟಡಿ ವಿಸ್ತರಣೆಯಾಗೋ ಸಾಧ್ಯತೆ ಇದೆ.

 

ಲಾಡ್ಜ್​ನಲ್ಲಿ ಮೂವರು ಶಂಕಿತ ಉಗ್ರರು ಭೇಟಿಯಾಗುತ್ತಿದ್ರು ಅಂತ ತನಿಖೆ ವೇಳೆ ಗೊತ್ತಾಗಿದೆ. ಪಕ್ಕದ ಜಿಲ್ಲೆ ಲಾಡ್ಜ್​ನಲ್ಲಿ ಮೊಹಮ್ಮದ್ ಶಾರೀಖ್ ತಂಗುತ್ತಿದ್ದ. ಶಾರೀಖ್​​ ಭೇಟಿಗೆ ಅಂತ ಮಾಜ್​ ಹಾಗೂ ಯಾಸಿನ್​​ ಬರ್ತಿದ್ರು. ಆಗ ಲಾಡ್ಜ್​ನಲ್ಲಿ ಮತೀನ್​ಗೆ ಶಾರೀಖ್ ವಿಡಿಯೋ ಕಾಲ್ ಮಾಡ್ತಿದ್ದ. ಮತೀನ್ ಜೊತೆ ಶಂಕಿತರನ್ನ ಶಾರೀಖ್ ಮಾತನಾಡಿಸ್ತಿದ್ದಂತೆ. ಸದ್ಯ ಶಂಕಿತರು ತಂಗುತ್ತಿದ್ದ ಲಾಡ್ಜ್​ಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಳ ಮಹಜರಿಗೆ ತಯಾರಿ ನಡೆಸಲಾಗ್ತಿದೆ.

Malenadu Today Shivamogga

ಇಷ್ಟೆಲ್ಲದರ ಮಧ್ಯೆ, ಶಾರೀಖ್​ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾಜ್ ಮತ್ತು ಯಾಸಿನ್ ಇಬ್ಬರು ಶಂಕಿತ ಉಗ್ರರನ್ನ ಇದೇ ಶಾರೀಖ್ ಕಂಟ್ರೋಲ್ ಮಾಡ್ತಿದ್ದ. NIA ಮೋಸ್ಟ್ ವಾಂಟೆಡ್ಲಿಸ್ಟ್​ನಲ್ಲಿರೋ ಮತೀನ್ ಜೊತೆ ಶಾರೀಖ್ನೇರ ಸಂಪರ್ಕ ಹೊಂದಿದ್ದ. ಈಗ ಮತೀನ್ ಹೊರತು ಪಡಿಸಿ ಉಳಿದೆಲ್ಲಾ ಆರೋಪಿಗಳು ಬಂಧನವಾಗಿದ್ದು, ಎನ್.. ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

 

ಶಿವಮೊಗ್ಗ ಪೊಲೀಸ್ ತನಿಖೆಯಲ್ಲಿ ಏನಿದೆ ?

ಶಿವಮೊಗ್ಗದಲ್ಲಿ ಬಂಧಿಸಲ್ಪಟ್ಟಿದ್ದ  ಶಂಕಿತ ಮಾಜ್ ಮತ್ತು ಯಾಸಿನ್ ಬಗ್ಗೆ ಪೊಲೀಸರು ಆಳವಾಗಿ ತನಿಖೆ ನಡೆಸಿದ್ದಾರೆ. ಹಿಂದಿನ ಎಸ್ಪಿ  ಲಕ್ಷ್ಮೀಪ್ರಸಾದ್​ ಶ್ರಮದಿಂದ ಇಂದು ಕರ್ನಾಟಕದಲ್ಲಿ ಸಂಭಿಸಬಹುದಾಗಿದ್ದ ದೊಡ್ಡ ದುರಂತಗಳು ಕೈ ತಪ್ಪಿ ಹೋಗಿದೆ.ತನಿಖೆಯ ವಿವರ ಹೀಗಿದೆ.

ಶಿವಮೊಗ್ಗ 25/22 ಯುಎಪಿಎ ಅಡಿಯಲ್ಲಿ ಕೇಸ್ ದಾಖಲಾಗಿತ್ತು..ಕಳೆದ ಆಗಸ್ಟ್​ 15 ರಂದು ಸಂಭವಿಸಿದ ಸ್ಟಾಬಿಂಗ್ ಕೇಸ್​ನಲ್ಲಿ ನಾಲ್ಕು ಆರೋಪಿಗಳನ್ನು ಬಂದಿಸಿದ್ದೆವು. ಪೈಕಿ ಓರ್ವ ಆರೋಪಿ ಜಬಿವುಲ್ಲಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದೆವು. ಆತನಿಂದ ಸಿಕ್ಕ ಹೆಚ್ಚಿನ ಮಾಹಿತಿಯಡಿಯಲ್ಲಿ ದೊಡ್ಡಪೇಟೆ ಠಾಣೆಯಲ್ಲಿ 334/22 ಅಡಿಯಲ್ಲಿ ಉಪ ಕಾಯ್ದೆಯನ್ನು ಆಡ್ ಮಾಡಿದ್ದೆವು. ನಿಟ್ಟಿನಲ್ಲಿ ತನಿಖೆ ಮುಂದುವರಿಸಿದಾಗ ಶಾರೀಖ್ ಎಂಬ ವ್ಯಕ್ತಿ ಜಬಿವುಲ್ಲಾನಿಗೆ ಪ್ರಚೋದನೆ ನೀಡಿದ್ದ ಎಂಬುದು ತಿಳಿದು ಬಂತು

 

ಆನಂತರ ಶಾರೀಖ್​ನ ಬಗ್ಗೆ ತನಿಖೆ ಕೈಗೊಂಡಾಗ ಆತನಿಗೆ ಮಾಜ್ ಹಾಗೂ ಯಾಸೀನ್ ಸಹಚರರಾಗಿದ್ದರು ಎಂಬುದು ಗೊತ್ತಾಯ್ತು

ಇದರ ಅನ್ವಯದಲ್ಲಿ ಯಾಸಿನ್​ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಇದರ ಅನ್ವಯ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ, 325/22 ಕೇಸ್​ನಂಬರ್​ನಲ್ಲಿ ಮತ್ತೊಂದು ಕೇಸ್​ ರಿಜಿಸ್ಟರ್​ ಮಾಡಿದ್ದೆವು. ಡಿವೈಎಸ್​ಪಿ ಶಾಂತವೀರ್​ ರವರು ತನಿಖೆಯ ನೇತ್ವತ್ವವನ್ನು ವಹಿಸಿಕೊಂಡು ಯಾಸಿನ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆವು. ಆತನಿಂದ ವ್ಯಾಲಂಟರಿ ಸ್ಟೇಟ್​ಮೆಂಟ್​ನ್ನು ಕೂಡ ರೆಕಾರ್ಡ್​ ಮಾಡಿಕೊಂಡು ತೀವ್ರ ತನಿಖೆಗೆ ಪ್ರಕರಣವನ್ನು ಒಳಪಡಿಸಲಾಯಿತು.

Malenadu Today Shivamogga

ಪ್ರಕರಣದಲ್ಲಿ ಶಾರೀಕ್​ ಎನ್​ ಆರೋಪಿಯಾಗಿದ್ದು, ಮಾಜ್​ ಎಂಬ ಇನ್ನೊಬ್ಬ ಆರೋಪಿಯನ್ನು ನಾವು ಬಂಧಿಸಿದ್ದೇವೆ. ಪ್ರಕರಣದಲ್ಲಿ ತನಿಖೆ ಸಂದರ್ಭದಲ್ಲಿ ನಮಗೆ ಕಂಡು ಬಂದ ಅಂಶಗಳು ಬಹಳಷ್ಟಿವೆ. ಮಾಜ್​ ಹಾಗೂ ಯಾಸೀನ್​ ಪಿಯುಸಿ ಓದುವ ಸಂದರ್ಭದಲ್ಲಿಯೇ ಇಬ್ಬರು ಪರಿಚಯವಾಗಿದ್ದರು, ಸಂದರ್ಭದಲ್ಲಿ ಇಬ್ಬರು ಸಹ ಮಂಗಳೂರಿಗೆ ಹೋಗಿದ್ದರು.

 

ಇವರಿಬ್ಬರು ಐಸಿಸ್​ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದ ಶಾರೀಖ್​, ಮಾಜ್ ಹಾಗೂ ಯಾಸಿನ್ ಜೊತೆ ಮಾತನಾಡಿ ಅವರಿಗೆ ನಿಷೇಧಿತ ಸಂಘಟನೆಯ ಬಗ್ಗೆ ಹೇಳುತ್ತಾನೆ. ಐಸಿಸ್​ನ ಅಲ್​ಹೈಕ್​ನ ಮೀಡಿಯಾ ಸೆಂಟರ್​ನ ಯೂಟ್ಯೂಬ್​, ಟೆಲಿಗ್ರಾಂನ ಸದಸ್ಯನಾಗಿದ್ದ ಯಾಸಿನ್​. ಹಿನ್ನೆಲೆಯಲ್ಲಿ ಐಸಿಸ್​ ನಿಂದ ಸಪ್ಲೆಯಾಗುತ್ತಿದ್ದ ಮೆಟಿರಿಯಲ್​ಗಳು ಯಾಸಿನ್ ಹಾಗೂ ಮಾಜ್​ನ್ನ ತಲುಪುತ್ತಿರುತ್ತದೆ.

 

ಶಾರೀಖ್​ನಿಂದ ಲಿಂಕ್​ ಹೊಂದಿದ್ದಾರೆ ಎಂಬ ಕಾರಣಕ್ಕೆ ಯಾಸಿನ್ ಹಾಗೂ ಮಾಜ್​ಗೆ ಮೆಟಿರಿಯಲ್​ಗಳು ಸಪ್ಲೆಯಾಗುತ್ತಿರುತ್ತದೆ.

ಮೂವರು ಆರೋಪಿ ಐಸಿಸ್ ಐಡಿಯಾಲಜಿಯನ್ನೇ ಫಾಲೋ ಮಾಡುತ್ತಿರುತ್ತಾರೆ. ಭಾರತ ದೇಶಕ್ಕೆ ಬ್ರಿಟಿಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾಗಲು ಸ್ವಾತಂತ್ರ್ಯ ಸಿಕ್ಕಿಲ್ಲ. ನಿಜವಾಗಲೂ ಸ್ವಾತಂತ್ರ್ಯ ಸಿಗಬೇಕು ಎಂದರೇ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವಕ್ಕೆ ಬರಬೇಕು , ಷರಿಯಾ ಕಾನೂನು ಇಲ್ಲಿ ಅನುಷ್ಟಾನ ಆಗಬೇಕು ಎಂಬ ವಿಚಾರ ಹೊಂದಿರುತ್ತಾರೆ.

 

ಐಸಿಸ್​ ಇದೇ ವಿಚಾರದಲ್ಲಿ ನಡೆಸಿದ ಕೃತ್ಯವನ್ನು ಗಮನಿಸಿ, ಅದೇ ರೀತಿ ನಾವು ಕೂಡ ಇದೇ ರೀತಿಯಲ್ಲಿ ಮಾಡಬೇಕು ಎಂದು ಷಡ್ಯಂತ್ರ ಮಾಡುತ್ತಾರೆ. ಸ್ಫೋಟಕಗಳ ತಯಾರಿ ವಿಡಿಯೋ, ತಲೆ ಕಡಿಯವ ವಿಡಿಯೋಗಳಂ ಉದ್ರಿಕ್ತ ವಿಡಿಯೋಗಳನ್ನು ನೋಡಿ ಅದೇ ರೀತಿಯಲ್ಲಿ ನಾವು ಮಾಡಬೇಕು ಎಂದು ಪ್ರಚೋದನೆಗೆ ಒಳಗಾಗಿ ಕೃತ್ಯಕ್ಕೆ ಇಳಿಯುತ್ತಾರೆ.

Malenadu Today Shivamogga

ಬಾಂಬ್​ ತಯಾರಿ ಹೇಗಿತ್ತು ಗೊತ್ತಾ?

ಐಸಿಸ್​ನಿಂದ ಪ್ರಚೋದನೆಗೆ ಒಳಗಾದ ಶಂಕಿತರು ಬಾಂಬ್​ ತಯಾರಿಗೆ ಮುಂದಾಗುತ್ತಾರೆ. ಇದಕ್ಕಾಗಿ ಯಾಸಿನ್​ನನ್ನು ನಿಯೋಜಿಸುತ್ತಾರೆ. ಯಾಸಿನ್​ಗೆ ಟೈಮರ್​ ರಿಲೇ ಸರ್ಕಿಟ್​ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರುತ್ತದೆ.

 

ಈತ ಎಲೆಕ್ಟ್ರಿಲ್ ಇಂಜಿನಿಯರ್ ಆಗಿದ್ದ ಕಾರಣಕ್ಕೆ ಬಾಂಬ್ ತಯಾರಿ ಈತನನ್ನು ನಿಯೋಜಿಸುತ್ತಾರೆ. ಅಲ್ಲದೆ ಆತ ಅಮೇಜಾನ್​ನಿಂದ ಸರ್ಕಿಟ್​ನ್ನು ಖರೀದಿ ಮಾಡುತ್ತಾನೆ.

 

ಲೋಕಲ್​ನಲ್ಲಿಯೇ ಸ್ಫೋಟಕಕ್ಕೆ ಬೇಕಾಗುವ ವಸ್ತುಗಳನ್ನು ಕಚ್ಚಾವಸ್ತುಗಳನ್ನು ಸಂಗ್ರಹಿಸಿದ್ದರು ಆರೋಪಿಗಳು

ಬ್ಯಾಟರಿ, ಸ್ವಿಚ್​, ವಯರ್, ಮ್ಯಾಚ್ ವಾಕ್ಸ್​ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಬಾಂಬ್ ತಯಾರಿಗೆ ಮುಂದಾಗುತ್ತಾರೆ.

ನಡುವೆ ಅಲ್ಯೂಮಿನಿಯಂ ಪೌಡರ್​ಗಾಗಿ ಹುಡುಕಾಡುತ್ತಾರೆ. ಆದರೆ ಅವರಿಗೆ ಅದು ಎಲ್ಲಿಯು ಸಿಗುವುದಿಲ್ಲ. ಹೀಗಾಗಿ ಲೋಕಲ್​ನಲ್ಲಿ ಸಿಕ್ಕವಸ್ತುಗಳಿಂದಲೇ ಬಾಂಬ್​ ತಯಾರಿಗೆ ಮುಂದಾಗುತ್ತಾರೆ. ನಂತರ ಸ್ಥಳೀಯ ವಸ್ತುಗಳಿಂದಲೇ ಸ್ಫೋಟಕ ಸಿದ್ದಪಡಿಸಿಕೊಂಡು ಗುರುಪುರದ ಬಳಿಯಲ್ಲಿ ಯಾಸೀನ್​ ಮನೆಗೆ ಹತ್ತಿರವಾದ ಪ್ರದೇಶದಲ್ಲಿ ಟ್ರಯಲ್​ಗೆ ಸಿದ್ಧವಾಗುತ್ತಾರೆ. ಸ್ಥಳವನ್ನು ಸ್ಥಳೀಯರು ಕೆಮ್ಮಣ್ಣು ಗುಂಡಿ ಎಂದು ಕರೆಯುತ್ತಾರೆ. ಅಲ್ಲಿ ಟ್ರಯಲ್ ಬ್ಲಾಸ್ಟ್​ಗೆ ಮುಂದಾಗಿದ್ದರು

 

ಕಳೆದ ಆಗಸ್ಟ್ ತಿಂಗಳಿನಲ್ಲಿ (ಸ್ಪಷ್ಟ ದಿನಾಂಕವಿನ್ನು ಲಭ್ಯವಾಗಿಲ್ಲ) ಟ್ರಯಲ್​ ಬ್ಲಾಸ್ಟ್​ನ್ನು ಯಶಸ್ವಿಯಾಗಿ ಮಾಡುತ್ತಾರೆ.

ಇದೇ ರೀತಿಯಲ್ಲಿ ಹಲವು ರೀತಿಯಲ್ಲಿ ಟ್ರಯಲ್​ ಬ್ಲಾಸ್ಟ್​ ಮಾಡಲು ಸಿದ್ಧತೆ ಮಾಡಿಕೊಂಡು ಮೆಟಿರಿಯಲ್​ ಸಂಗ್ರಹಿಸಲು ಮುಂದಾಗಿದ್ದಾರೆ.

ಮಂಗಳೂರಿನ ಒಂದು ಪ್ರದೇಶ ಹಾಗೂ ಗುರುಪುರದ ಒಂದು ಪ್ರದೇಶದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದ ಆರೋಪಿಗಳು ಸರ್ಕಿಟ್​ಗಾಗಿ ಕಾಯುತ್ತಿರುತ್ತಾರೆ. ಆದರೆ ಅದು ಬರುವುದು ವಿಳಂಬವಾಗಿರುತ್ತದೆ.

 

ಇದೆಲ್ಲದರ ನಡುವೆ ತಮ್ಮ ಸಿದ್ಧಾಂತವನ್ನು ಒಪ್ಪದ ಖಾಪೀರರ ಜೀವ ಹಾನಿ ಮಾಡಬೇಕು ಎಂಬ ಕಾರಣಕ್ಕೆ ದೊಡ್ಡದೊಂದು ಸ್ಫೋಟಕ ತಯಾರಿಸಿ, ಸ್ಪೋಟಿಸಬೇಕು ಎಂದು ಚಿಂತಿಸುತ್ತಿರುತ್ತಾರೆ. ಸಮಯದಲ್ಲಿ ನಾವು ಅವರನ್ನು ತನಿಖೆಗೆ ಒಳಪಡಿಸುತ್ತೇವೆ. ಅಲ್ಲದೆ 11 ಕಡೆಗಳಲ್ಲಿ ಆರೋಪಿಗಳ ಮನೆ, ಸಂಬಂಧಿಕರ ಮನೆ, ಅವರು ಕೃತ್ಯವೆಸಗಲು ಬಳಸುತ್ತಿದ್ದ ಜಾಗಗಳ ಮೇಲೆ ದಾಳಿ ಮಾಡುತ್ತೇವೆ,.

 

ಸಂದರ್ಭದಲ್ಲಿ

ಒಟ್ಟು 14 ಮೊಬೈಲ್ಗಳು ಮತ್ತು 1 ಡಾಂಗಲ್

2 ಲ್ಯಾಪ್ಟಾಪ್ಗಳು, | ಪೆನ್ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ಗ್ಯಾಡ್ಟ್ಸ್ಗಳು I

ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್ ಅವಶೇಷಗಳು

ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು ರಿಲೆ ಸರ್ಕಿಟ್, ಬಲ್ಬಗಳು, ಮ್ಯಾಚ್ ಬಾಕ್ಸ್ಗಳು, ವೈರ್ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಇತ್ಯಾದಿ

 

ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ಧ್ವಜ

ಪ್ರಮುಖ ದಸ್ತಾವೇಜುಗಳು ಮತ್ತು ದಾಖಲಾತಿಗಳು

ಆರೋಪಿತ ಶಾರೀಕ್ ಈತನು ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಡ್ಜ್ ಕಾರನ್ನು ವಶಕ್ಕೆ ಪಡೆಯಲಾಗುತ್ತದೆ.

ಇವರು ಕಾರಿನಲ್ಲಿ ಹೋಗಿ ಕಾರಿನಲ್ಲಿ ಹೋಗಿ ಜಿಪಿಎಸ್​ ಟ್ರ್ಯಾಕ್ ಮಾಡುತ್ತಿದ್ರು. ಹಾಗೊಂದು ವೇಳೆ ಎನಾದರೂ ಆದರೆ ಎಲ್ಲಿ ಹೋಗಿ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಜಿಪಿಎಸ್​ ಟ್ರ್ಯಾಕ್ ಮಾಡುತ್ತಿದ್ರು. ಅದನ್ನು ಕೂಡ ವಶಕ್ಕೆ ಪಡೆದಿದ್ದೇವೆ.

 

ಗುರುಪುರದಲ್ಲಿ ಪ್ರಯೋಗಾರ್ಥವಾಗಿ ಬ್ಲಾಸ್ಟ್ ಮಾಡಿದ ಸ್ಥಳ ಹಾಗೂ ಸಂಗ್ರಹಿಸಿದ ಕಚ್ಚಾವಸ್ತುಗಳು, ನಟ್​, ಬೋಲ್ಟ್​, ಮ್ಯಾಚ್​ಬಾಕ್ಸ್, ಕಚ್ಚಾವಸ್ತುಗಳು ಲಭ್ಯವಾಗಿದೆ. ತಮ್ಮ ಸಿದ್ಧಾಂತವನ್ನು ಎಲ್ಲೆಡೆ ಹರಡಲು ರಾಷ್ಟ್ರೀಯ ಧ್ವಜವನ್ನು ಸುಟ್ಟಿದ್ದಾರೆ. ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಇನ್ನಷ್ಟು ತನಿಖೆ ನಡೆಸಬೇಕಿದೆ. ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ.

 

ಆಪರೇಷನ್​ ಟೀಂನಲ್ಲಿ ಶಿವಮೊಗ್ಗ ಉಪವಿಭಾಗದ ಡಿವೈಎಸ್​ಪಿ ಬಾಲರಾಜ್ ಟೀಂ ಹಾಗೂ ತೀರ್ಥಹಳ್ಳಿ ಡಿವೈಎಸ್​ಪಿ ಶಾಂತವೀರ್ ಹಾಗೂ ಎಎಸ್​ಪಿ ಭದ್ರಾವತಿಯವರ ಟೀಂ ಕೆಲಸ ಮಾಡಿದೆ. ಹಾಗೂ ಪ್ರಕರಣ ಸಂಬಂಧ ಶಿವಮೊಗ್ಗ ಅಡಿಷನಲ್ ಎಸ್​ಪಿ ಗಂಭೀರವಾಗಿ ಮೇಲ್ವಿಚಾರಣೆ ನಡೆಸಿದ್ದಾರೆ. ನಿಟ್ಟಿನಲ್ಲಿ ಶಾರೀಖ್ ಅರೆಸ್ಟ್ ಆದರೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ.

 

ಆರೋಪಿಗಳು ಪರಸ್ಪರ ಸಂಪರ್ಕ ಸಾದಿಸಲು ವಾಟ್ಸ್ಯಾಪ್​ ಬಳಸುತ್ತಿರಲಿಲ್ಲ. ಸಿಗ್ನಲ್​, ವೈರ್, ಹಾಗೂ ಟೆಲಿಗ್ರಾಂ ನಂತರ ಮೆಸೆಂಜರ್ ಆಪ್​ಗಳನ್ನು ಬಳಸುತ್ತಿದ್ದರು. ಸಲ್ಪರ್​, ಪಾಸ್ಪರಸ್​ ನಮಗೆ ಲಭ್ಯವಾಗಿದೆ. ಮ್ಯಾಚ್​​ ಬಾಕ್ಸ್​ನಲ್ಲಿರುವ ತುದಿಯನ್ನು ಪುಡಿ ಮಾಡಿ ಬಳಸಲು ಸಿದ್ಧವಾಗಿದ್ರು. ಇವರೆಗೂ ಬೆಂಗಳೂರು, ಬಾಂಬೆ, ಗೋವಾಕ್ಕೆ ಆರೋಪಿಗಳು ಹೋಗಿಬಂದಿದ್ದಾರೆ. ಆದರೆ ಯಾವ ಕಾರಣಕ್ಕೆ ಹೋಗಿ ಬಂದಿದ್ದಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

 

ಶಾರೀಖ್​ ಎಲ್ಲಿದ್ದಾನೆ ಎಂಬುದು ನಮಗೆ ಇನ್ನೂ ಸಹ ಗೊತ್ತಾಗಿಲ್ಲ. ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಆರೋಪಿಗಳು ಇದುವರೆಗೂ ಮಾಡಿದ್ದು ಕೇವಲ ಒಂದೆ ಒಂದು ಬ್ಲಾಸ್ಟ್ ಆಗಿದೆ. ಅದು ಕೂಡ ಆಗಸ್ಟ್​ನಲ್ಲಿ ಮಾತ್ರವಾಗಿದೆ.

 

ಟೆಲಿಗ್ರಾಂನಲ್ಲಿ ಪುಸ್ತಕ ಹಾಗೂ ವಸ್ತುಗಳು ಸಪ್ಲೆಯಾಗುತ್ತಿತ್ತು. ಆದರೆ ಇದುವರೆಗೆ ಅರೋಪಿಗಳು ಶಿವಮೊಗ್ಗದಲ್ಲಿ ಆಗಲಿ ಅಥವಾ ಬೇರೆ ಎಲ್ಲೆ ಆಗಲಿ ಯಾವ ಕಡೆ ಸ್ಫೋಟ ಮಾಡಬೇಕು ಎಂಬುದನ್ನು ಇವರು ತೀರ್ಮಾನಿಸಿರಲಿಲ್ಲ.

 

ಆರೋಪಿಗಳು ಮುಂದೇನು ಮಾಡಬೇಕು ಎಂಬುದು ಇವರಿಗೆ ಗೊತ್ತಿರಲಿಲ್ಲ. ಮೇಲಾಗಿ ಇವರು ಪಿಎಫ್​ಐ ಆಗಲಿ ಎಸ್​ಡಿಪಿಐ ಗಳ ಜೊತೆ ಲಿಂಕ್ ಹೊಂದಿಲ್ಲ. ಮೇಲೆ ಐಸಿಸ್​ ಗ್ರೂಪ್​ನ ಜೊತೆ ನೇರವಾಗಿಯು ಲಿಂಕ್​ ಹೊಂದಿಲ್ಲ. ಕೇವಲ ಅವರ ಚಾನಲ್​ಗಳಲ್ಲಿ ಸಬ್​ಸ್ಕ್ರಿಬ್ಶನ್​ ಹೊಂದಿದ್ದ. ತನಿಖೆ ಕಂಪ್ಲೀಟ್​ ಶಿವಮೊಗ್ಗ ಪೊಲೀಸರ ತನಿಖೆಯಾಗಿದ್ದು, ಇದರಲ್ಲಿ ಇನ್ಯಾವ ತನಿಖೆ ಸಂಸ್ಥೆಗಳು ಇದರಲ್ಲಿ ಪಾತ್ರವಹಿಸಿಲ್ಲ

 

ಈಗ ಶಾರಿಕ್ ಬಂಧನವಾಗಿದೆ. ಆತ ಆಟೋದಲ್ಲಿ ಸಾಗುವಾಗ ಕುಕ್ಕರ್ ಬ್ಲಾಸ್ಟ್ ಆಗಿ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಎನ್.. ತನಿಖೆ ಕೈಗೆತ್ತಿಕೊಂಡಿದೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor