ಏಪ್ರಿಲ್ 1ರಿಂದ ಹೊಸ ಆರ್ಥಿಕ ನಿಯಮಗಳ ಜಾರಿ: ಈ ಬದಲಾವಣೆ ಬಗ್ಗೆ ಗಮನಿಸಿ

ಶಿವಮೊಗ್ಗ  : ಬರುವ ಏಪ್ರಿಲ್ 1ರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಆದಾಯ ತೆರಿಗೆಯಿಂದ ಹಿಡಿದು ದೈನಂದಿನ ಬ್ಯಾಂಕಿಂಗ್ ವಹಿವಾಟಿನವರೆಗೆ ಹಲವು ಹೊಸ ನಿಯಮಗಳು ಜಾರಿಯಾಗಲಿದ್ದು, ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಲಿವೆ. 

ಶಿವಮೊಗ್ಗ ಏರ್​ಪೋರ್ಟ್ ಸಮಾಚಾರ! ತುಂಗಾ ಸ್ಟೇಷನ್​ನಲ್ಲಿ ಕೊಲೆಯತ್ನದ FIR!

ಆದಾಯ ತೆರಿಗೆಯಲ್ಲಿ ಮಹತ್ತರ ಬದಲಾವಣೆ

2025ರ ಆದಾಯ ತೆರಿಗೆ ಕಾಯ್ದೆಯ ಹೊಸ ನಿಯಮಗಳ ಪ್ರಕಾರ, ವಾರ್ಷಿಕ 12.75 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ರಿಯಾಯಿತಿ ಸಿಗಲಿದೆ. ಮನೆ ಬಾಡಿಗೆ ಮತ್ತು ಮಕ್ಕಳ ಶಿಕ್ಷಣದ ಮೇಲಿನ ವಿನಾಯಿತಿಗಳು ಮುಂದುವರಿಯಲಿವೆ. ಪ್ರಮುಖವಾಗಿ, ಇನ್ಮುಂದೆ ‘ಫಿನಾನ್ಸಿಯಲ್ ಇಯರ್’ ಮತ್ತು ‘ಅಸೆಸ್‌ಮೆಂಟ್ ಇಯರ್’ ಎಂಬ ಗೊಂದಲಕಾರಿ ಪದಗಳ ಬದಲಿಗೆ ‘ಟ್ಯಾಕ್ಸ್ ಇಯರ್’ ಎಂಬ ಏಕರೂಪದ ಪದವನ್ನು ಬಳಸಲಾಗುವುದು.

ಉದ್ಯೋಗಿಗಳಿಗೆ ಸಿಹಿ ಸುದ್ದಿ: ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ

ವೇತನ ಪಡೆಯುವ ಉದ್ಯೋಗಿಗಳಿಗೆ ನೀಡಲಾಗುವ ಪ್ರಮಾಣಿತ ಕಡಿತದ) ಮಿತಿಯನ್ನು 50,000 ರೂ.ಗಳಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ತೆರಿಗೆದಾರರ ಕೈಯಲ್ಲಿ ಹೆಚ್ಚಿನ ಹಣ ಉಳಿಯಲಿದೆ. ಇನ್ನು ಐಟಿಆರ್ ಸಲ್ಲಿಕೆಯ ಅಂತಿಮ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿರುವುದು ತೆರಿಗೆದಾರರಿಗೆ ನಿರಾಳ ತಂದಿದೆ. ಆದರೆ, ಹೆಚ್‌ಆರ್‌ಎ ನಿಯಮಗಳು ಇನ್ಮುಂದೆ ಹೆಚ್ಚು ಕಟ್ಟುನಿಟ್ಟಾಗಿರಲಿವೆ. 

ಬ್ಯಾಂಕಿಂಗ್ ಮತ್ತು ಎಟಿಎಂ ವ್ಯವಹಾರದ ಹೊಸ ಮಿತಿ

ಬ್ಯಾಂಕಿಂಗ್ ವಲಯದಲ್ಲಿಯೂ ಕೆಲವು ಬದಲಾವಣೆಗಳಾಗಿದ್ದು, ತಿಂಗಳಿಗೆ ಗರಿಷ್ಠ 5 ಬಾರಿ ಮಾತ್ರ ಉಚಿತವಾಗಿ ಎಟಿಎಂನಿಂದ ಹಣ ಪಡೆಯಬಹುದು. ನಿಗದಿತ ಮಿತಿಗಿಂತ ಹೆಚ್ಚಿನ ಬಾರಿ ಹಣ ಡ್ರಾ ಮಾಡಿದರೆ ಪ್ರತಿ ವಹಿವಾಟಿಗೆ 23 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ನಿಮ್ಮ ಡೆಬಿಟ್ ಕಾರ್ಡ್‌ನ ಮಾದರಿಗೆ ಅನುಗುಣವಾಗಿ ಪ್ರತಿದಿನದ ಹಣ ವಿತ್‌ಡ್ರಾ ಮಿತಿಯಲ್ಲಿ ವ್ಯತ್ಯಾಸವಿರಲಿದೆ. 

ಡಿಜಿಟಲ್ ಪಾವತಿ ಇನ್ಮುಂದೆ ಇನ್ನಷ್ಟು ಸುರಕ್ಷಿತ

ಆನ್‌ಲೈನ್ ವಹಿವಾಟುಗಳನ್ನು ಹೆಚ್ಚು ಭದ್ರಪಡಿಸಲು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯಗೊಳಿಸಲಾಗಿದೆ. ಸಣ್ಣ ಮೊತ್ತದ ಪಾವತಿಗಳಿಗೂ ಇನ್ಮುಂದೆ ಒಟಿಪಿ ಅಥವಾ ಬಯೋಮೆಟ್ರಿಕ್ ದೃಢೀಕರಣ ಅನಿವಾರ್ಯವಾಗಲಿದೆ. ಇದು ಸೈಬರ್ ವಂಚನೆಗಳನ್ನು ತಡೆಯಲು ಸಹಕಾರಿಯಾಗಲಿದೆ. 

New Income Tax Rules ಹೂಡಿಕೆ ಮತ್ತು ದೈನಂದಿನ ವೆಚ್ಚಗಳ ಬದಲಾವಣೆ

ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಅವಧಿಗೆ ಮುನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ತೆರಿಗೆ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಪೆನ್ಷನ್ ಯೋಜನೆ (NPS) ನಿಯಮಗಳಲ್ಲೂ ಬದಲಾವಣೆ ತರಲಾಗಿದೆ. ಇನ್ನು ದೈನಂದಿನ ವೆಚ್ಚಗಳ ವಿಚಾರಕ್ಕೆ ಬಂದರೆ, ಫಾಸ್ಟ್‌ಟ್ಯಾಗ್ ವಾರ್ಷಿಕ ಶುಲ್ಕ 3075 ರೂ.ಗೆ ಏರಿಕೆಯಾಗಿದೆ. ರೈಲ್ವೇ ಟಿಕೆಟ್ ರದ್ದು ಮಾಡುವ ನಿಯಮ ಕಠಿಣವಾಗಿದ್ದು, ಪ್ರಯಾಣಕ್ಕೆ ಒಂದು ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹಣ ವಾಪಸ್ ಸಿಗುವುದಿಲ್ಲ. 

New Income Tax Rules ಪ್ಯಾನ್ ಮತ್ತು ಆಧಾರ್ ಜೋಡಣೆ ಕಡ್ಡಾಯ

ಪ್ಯಾನ್ ಕಾರ್ಡ್ ಪಡೆಯಲು ಈಗ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ಪ್ಯಾನ್ ಕಾರ್ಡ್‌ನಲ್ಲಿರುವ ವಿವರಗಳು ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಇರಬೇಕು. ಈ ಹೊಂದಾಣಿಕೆ ಇಲ್ಲದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ.

New Income Tax Rules & Banking Changes from April 1

New Income Tax Rules  Financial Changes From April 1 Karnataka Police Shimoga Kote Marikamba Jatre 2026Shivamogga Health Dept Shimoga-Thirthahalli Road Traffic Diversion Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ
New Income Tax Rules