SHIVAMOGGA NEWS TODAY

ಶಿವಮೊಗ್ಗ :  ಹಂಪ್ಸ್​ಗಳಲ್ಲಿ  ಮಿಂಚಲಿವೆ ಸೋಲಾರ್ ಸ್ಟಡ್ಸ್​​​​, ಅಪಘಾತ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಮಾಸ್ಟರ್ ಪ್ಲಾನ್! 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

shimoga ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಪ್ರಮುಖ ರಸ್ತೆ ಹಾಗೂ ಹಂಪ್‌ಗಳಿಗೆ ಹೊಸ ಕಳೆ ನೀಡಿದೆ. 

ಶಿವಮೊಗ್ಗ: ರೈಲ್ವೆ ಸ್ಟೇಷನ್ ಬಳಿ ನಿಂತಿದ್ದ ಗೂಡ್ಸ್ ಲಾರಿ ಬೆಂಕಿಗೆ ಭಸ್ಮ; ತಪ್ಪಿದ ಭೀಕರ ದುರಂತ!

ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ರಸ್ತೆ ಹಂಪ್‌ಗಳು ಸರಿಯಾಗಿ ಕಾಣಿಸದೆ ಸವಾರರು ಆಯತಪ್ಪಿ ಬೀಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ನಗರದ 14 ಪ್ರಮುಖ ಟ್ರಾಫಿಕ್ ಸಿಗ್ನಲ್ ವೃತ್ತಗಳು ಹಾಗೂ ಹಂಪ್‌ಗಳ ಮೇಲೆ ರಿಫ್ಲೆಕ್ಟರ್ ಕ್ಯಾಟ್ ಐಸ್ ಮತ್ತು ಸೋಲಾರ್ ರೋಡ್ ಸ್ಟಡ್‌ಗಳನ್ನುಅಳವಡಿಸಿದೆ. ಇವು ಕತ್ತಲಲ್ಲಿ ಪ್ರಕಾಶಮಾನವಾಗಿ ಹೊಳೆಯುವುದರಿಂದ ದೂರದಿಂದಲೇ ಸವಾರರಿಗೆ ರಸ್ತೆಯ ತಿರುವು ಹಾಗೂ ಹಂಪ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. 

ಹಿಂದೆ ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ಹಂಪ್‌ನಿಂದಾಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಘಟನೆಯ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ, ಹಳೆಯ ಹಂಪ್‌ಗಳನ್ನು ತೆರವುಗೊಳಿಸಿ ಈಗ ವೈಜ್ಞಾನಿಕ ಹಾಗೂ ಸುರಕ್ಷಿತ ಮಾದರಿಯನ್ನು ಅಳವಡಿಸಲು ಮುಂದಾಗಿದೆ.ಈ ಸೋಲಾರ್ ಸ್ಟಡ್‌ಗಳ ಅಳವಡಿಕೆ ಸಾರ್ವಜನಿಕರ ಹಾಗೂ ವಾಹನ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ. 

Shimoga Solar Road Studs to Curb Accidents

shivamogga car decor sun control house
shivamogga car decor sun control house

Shimoga Solar Road Studs to Curb Accidents
Shimoga Solar Road Studs to Curb Accidents

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.