SHIVAMOGGA NEWS TODAY

ಕೆಲಸಕ್ಕೆಂದು ತೆರಳಿದ್ದ ನಜೀರ್ ಅಹ್ಮದ್​ ರುಸ್ತುಂ ಪಾಷ ನಾಪತ್ತೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Missing alert  ಶಿವಮೊಗ್ಗ : ಕೆಲಸದ ನಿಮಿತ್ತ ತೆರಳಿದ್ದ ಇಬ್ಬರು ವ್ಯಕ್ತಿಗಳು ಮರಳಿ ಬಾರದೆ ನಾಪತ್ತೆಯಾಗಿರುವ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

ಸೂಳೆಬೈಲು ನಿವಾಸಿ 38 ವರ್ಷದ ನಜೀರ್ ಅಹಮ್ಮದ್ ಅವರು 2025ರ ಆಗಸ್ಟ್ 21ರಂದು ಕಾರ್ಕಳಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ಈವರೆಗೂ ವಾಪಸ್ಸಾಗಿಲ್ಲ. ಇವರು 5 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ಕೋಲು ಮುಖದ ಚಹರೆ ಹೊಂದಿದ್ದಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುವ ಇವರು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಜರ್ಕಿನ್ ಧರಿಸಿದ್ದರು. 

ಮತ್ತೊಂದು ಪ್ರಕರಣದಲ್ಲಿ 31 ವರ್ಷದ ರುಸ್ತುಂ ಪಾಷ ಎಂಬುವವರು 2024ರ ಡಿಸೆಂಬರ್ 12ರಂದು ಅಡುಗೆ ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರದ ಇವರು ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉರ್ದು ಮಾತನಾಡುತ್ತಾರೆ. ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ಇವರ ಬಗ್ಗೆ ಅಥವಾ ನಜೀರ್ ಅಹಮ್ಮದ್ ಅವರ ಬಗ್ಗೆ ಯಾವುದೇ ಸುಳಿವು ದೊರೆತರೆ ಸಾರ್ವಜನಿಕರು ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08182-2611414 ಅಥವಾ ಮೊಬೈಲ್ ಸಂಖ್ಯೆ 9480803345ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.\

Missing alert  two persons missing in shivamogga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.