marriage stopped in hassan district : ತಾಳಿ ಕಟ್ಟುವ ಶುಭವೇಳೆ, ಪ್ರಿಯಕರನ ಕರೆ! ನಿಂತಿತು ಮದುವೆ!

ಹಂಚಿಕೊಳ್ಳಿ
WhatsApp Facebook X Telegram
Shivamogga finance harassment Road accident
Shivamogga finance harassment Road accident

marriage stopped in hassan district ಮದುವೆ ಮಂಟಪದಲ್ಲಿ ಇನ್ನೇನು ತಾಳಿಕಟ್ಟುವ ಸಂದರ್ಬದಲ್ಲಿ ವಧು ಕೈಗೊಂಡ ನಿರ್ಧಾರದಿಂದಾಗಿ ವಿವಾಹ ಸಮಾರಂಭವೊಂದು ಅನಿರೀಕ್ಷಿತವಾಗಿ ನಿಂತಿದೆ. ಹಾಸನದಲ್ಲಿ ಈ ಘಟನೆ ನಡೆದಿದೆ. ತಾಳಿ ಕಟ್ಟುವ ಸಂಧರ್ಭದಲ್ಲಿ ವಧು ತಾನು ಯುವಕನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿ ಮದುವೆ ಬೇಡ ಎಂದಿದ್ದಾಳೆ. ಈ ವೆಳೆ ವರದ ಆಘಾತಕ್ಕೊಳಗಾದರೂ ಬಳಿಕ ತಾಳಿ ಕಟ್ಟದೇ ಹಿಂದೇಟು ಹಾಕಿದ್ದಾನೆ.

marriage stopped in hassan district

ನಂತರ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಮದುವೆ ಮುರಿದುಬಿದ್ದಿದೆ. ಇಲ್ಲಿನ ಕುಟುಂಬವೊಂದು ತಮ್ಮ ಮಗ ಹಾಗು ಮಗಳ ಮದುವೆಗೆ ಅದ್ದೂರಿಯಾಗಿ ವ್ಯವಸ್ಥೆ ಮಾಡಿತ್ತು. ಅದೆರೀತಿ ಶಾಸ್ತ್ರೋಕ್ತ ವಾಗಿ ಮದುವೆಯು ನಡೆಯುತ್ತಿತ್ತು. ಇನ್ನೆನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧುವಿಗೆ ಒಂದು ಫೋನ್ ಕರೆ ಬಂದಿದೆ. ಆ ಕರೆ ಬಂದ ಬಳಿಕ ವಧು ಮದುವೆ ಬೇಡ, ತಾನು ಇನ್ನೊಬ್ಬನನ್ನ ಪ್ರೀತಿಸುತ್ತಿದ್ದೇನೆ ಎಂದಿದ್ದಾಳೆ. ಇದನ್ನ ಕೇಳಿದ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ. ನಂತರ ಆಕೆಗೆ ಬಂದಿದ್ದು, ಅವಳ ಪ್ರೇಮಿಯ ಫೊನ್ ಕಾಲ್ ಎಂದು ಗೊತ್ತಾಗಿದೆ. ಅಂತಿಮವಾಗಿ ಸ್ಟೇಷನ್ ಮೆಟ್ಟಿಲೇರಿದ ಪ್ರಕರಣದಲ್ಲಿ ಎರಡು ಕಡೆಯವರು ತಮ್ಮ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳಲು ತೀರ್ಮಾನಿಸಿ ಮದುವೆಯನ್ನು ಮುರಿದುಕೊಂಡಿತು 

marriage stopped in hassan district

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor