ಬೈಕ್ ಆಕ್ಸಿಡೆಂಟ್ ತಪ್ಪಿಸುವಾಗ, ಹೊಂಡಕ್ಕೆ ಉರುಳಿದ ಲಾರಿ!

ಹಂಚಿಕೊಳ್ಳಿ
WhatsApp Facebook X Telegram
Lorry Plunges into Ditch Near Arasalu in Ripponpet
Lorry Plunges into Ditch Near Arasalu in Ripponpet

Ripponpete / ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಮಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದ 10 ವೀಲ್​ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ನಿನ್ನೆದಿನ ವರದಿಯಾಗಿದೆ. ರಿಪ್ಪನ್​ ಪೇಟೆ ಹತ್ರ ಅರಸಾಳು ಕೆರೆ ಏರಿ ಸಮೀಪ ಘಟನೆ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಡ್ರೈವರ್ ಪಾರಾಗಿದ್ದಾರೆ.

ಲಾರಿಯು ಅರಸಾಳು ಕೆರೆ ಏರಿ ಮೇಲೆ ಸಾಗುತ್ತಿದ್ದಾಗೆ ಎದುರಿಗೆ ಬೈಕ್​ ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸಲು ಡ್ರೈವರ್​ ರೈಟಿಗೆ ಎಳೆದಿದ್ದಾನೆ. ಆ ಬಳಿಕ ಕಂಟ್ರೋಲ್​ಗೆ ಸಿಗದ ಲಾರಿ ಸೀದಾ, ರಸ್ತೆಬದಿಗೆ ಇಳಿದು ಹೊಂಡಕ್ಕೆ ಜಾರಿದೆ. ಘಟನೆ ನಂತರ ಪೊಲೀಸ್ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಗಾಡಿ ಮೇಲೆಕ್ಕೆ ಎತ್ತಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor