ಮಧು ಬಂಗಾರಪ್ಪಗೆ ಸಚಿವ ಸ್ಥಾನ, ಸಹೋದರ ಕುಮಾರ್ ಬಂಗಾರಪ್ಪರ ಮಹತ್ವದ ಸ್ಟೇಟ್ಮೆಂಟ್

ಹಂಚಿಕೊಳ್ಳಿ
WhatsApp Facebook X Telegram
Kumar Bangarappa Expresses Joy Over Brother Madhu Bangarappa Getting Cabinet Berth
Kumar Bangarappa Expresses Joy Over Brother Madhu Bangarappa Getting Cabinet Berth

Kumar Bangarappa / ಮಲೆನಾಡು ಟುಡೆ ಸುದ್ದಿ / ಧಾರವಾಡ / ಸೊರಬ ಶಾಸಕ ಮಧು ಬಂಗಾರಪ್ಪ ರಿಗೆ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸ್ಥಾನ ಲಭಿಸಿರುವುದಕ್ಕೆ ಅವರ ಸಹೋದರ ಹಾಗೂ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬದ ಪರವಾಗಿ, ಶಿವಮೊಗ್ಗ ಜಿಲ್ಲೆ ಹಾಗೂ ಸಮುದಾಯದ ಪರವಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ನಾಡಿಗೆ ನೀಡಿದ ಕೊಡುಗೆಯ ಆಧಾರದ ಮೇಲೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಸಂತೋಷವಾಗುತ್ತದೆ ಎಂದರು.

ಇದೇ ವೇಳೆ ಮಧು ಬಂಗಾರಪ್ಪ ಅವರು ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಲಿದ್ದಾರೆ ಎಂಬ ಭರವಸೆಯಿದೆ ಅಂತಾ ಭರವಸೆ ವ್ಯಕ್ತಪಡಿಸಿದ್ರು. ಸೊರಬ ಕ್ಷೇತ್ರ, ಶಿವಮೊಗ್ಗ ಜಿಲ್ಲೆ ಹಾಗೂ ಇಡೀ ಕರ್ನಾಟಕಕ್ಕೆ ಉತ್ತಮ ಸೇವೆ ಸಲ್ಲಿಸುವ ಸೌಭಾಗ್ಯ ಅವರಿಗೆ ಸಿಕ್ಕಿದೆ. ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲಿ ಅಂತಾ ಆಶಿಸಿದರು.

ತಮ್ಮ ಮಾತುಗಳನ್ನ ಮುಂದುವರಿಸಿದ ಅವರು, ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಮೇಲಾಗುವ ಪರಿಣಾಮದ ಬಗ್ಗೆ ಕೇಳದ ಪ್ರಶ್ನೆಗೆ, ಪ್ರತಿಯಾಗಿ, ಅದರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ ಸ್ವಾಭಾವಿಕವಾಗಿ ಸರ್ಕಾರವು ತನ್ನ ಕೊನೆಯ ಹಂತದಲ್ಲಿದ್ದು, ಇನ್ನು ಒಂದೂವರೆ ಅಥವಾ ಎರಡು ವರ್ಷಗಳ ಅವಧಿ ಮಾತ್ರ ಬಾಕಿಯಿದೆ ಅಂತಾ ಅಭಿಪ್ರಾಯಪಟ್ಟರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor