ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಗ್ಗೆ ಮತ್ತೊಂದು ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ

Kodi Mutt Seer Makes Another Prediction About Siddaramaiah And DK Shivakumar

ಹಂಚಿಕೊಳ್ಳಿ
WhatsApp Facebook X Telegram
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಗ್ಗೆ ಮತ್ತೊಂದು ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ
ಸುದ್ದಿ ಸಾರಾಂಶ

Kodi Mutt Seer Makes Another Prediction About Siddaramaiah And DK Shivakumar

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಬೆಂಗಳೂರು/ ರಾಜ್ಯದಲ್ಲಿ ಬಹುಮತದ ಸರ್ಕಾರ ಬರುತ್ತದೆ ಸಮ್ರಿಶ್ರ ಸರ್ಕಾರ ಬರುವುದಿಲ್ಲೆ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಸ್ವಾಮೀಜಿಯವರು ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. 

ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಐದು ವರ್ಷ ಪೂರ್ಣಗೊಳಿಸಲಿದೆ ಎಂದಿರುವ ಟಅವರು. ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ರಾಜಯೋಗವಿದೆ ಎಂದಿದ್ಧಾರೆ. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು,  ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶ್ರೀಗಳು ಸಂಪುಟದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದ್ಧಾರಂತೆ. ಅಲ್ಲದೆ, ಲೋಕಸಭಾ ಚುನಾವಣೆ ಬಳಿಕ ಸಣ್ಣಪುಟ್ಟ ಸಮಸ್ಯೆಗಳು ಸರ್ಕಾರಕ್ಕೆ ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.  

ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ: ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

ಪುತ್ತೂರು/ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ನಿನ್ನೆ ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಹಾಗೂ ಅವರ ತಾಯಿ ಭೇಟಿಕೊಟ್ಟಿದ್ಧಾರೆ.  ಪೊಲೀಸ್ ಸ್ಟೇಷನ್​ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಘಟನೆಯನ್ನು ಅವರು ಖಂಡಿಸಿದ್ದಾರೆ. 

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಂದ ಏಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ  ಅಶ್ವಿನಿ  ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ ಎಂದಿದ್ಧಾರೆ. 

ಹಿಂದೂ ಕಾರ್ಯಕರ್ತರು‌ ಸಮಾಜಕ್ಕೆ ದ್ರೋಹ ಮಾಡುತ್ತಿಲ್ಲ. ಈ ರೀತಿಯ ದೌರ್ಜನ್ಯ ಮಾಡೋದು ಸರಿಯಲ್ಲೆ ಎಂದು ಅಭಿಪ್ರಾಯ ಪಟ್ಟರು. ಈ ರೀತಿ ಹಲ್ಲೆ ಮಾಡಿದವರಿಗೂ ಮಕ್ಕಳು ಇರುತ್ತಾರೆ, ಹಲ್ಲೆ ಮಾಡಿಸಲು‌ ಕುಮ್ಮಕ್ಕು ಕೊಟ್ಟವರಿಗೂ ಮಕ್ಕಳು ಇದ್ದಾರೆ ಎಂಬುದು ನೆನಪಿರಲಿ. ಇನ್ಮುಂದೆಯಾದರೂ ಅರ್ಥಮಾಡಿಕೊಳ್ಳಲಿ ಎಂಧರ ಅವರು, ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ, ಅದನ್ನ‌ ಬುದ್ಧಿಯಲ್ಲಿಟ್ಟುಕೊಂಡು  ಹಿಂದುತ್ವಕ್ಕಾಗಿ  ಕೆಲಸ ಮಾಡಿ ಎಂದಿದ್ಧಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor