ಕೆಡಿ ಚಿತ್ರದ ಹಾಡಿನ ಸಾಹಿತ್ಯಕ್ಕೆ ವ್ಯಾಪಕ ವಿರೋಧ, ಮಹಿಳಾ ಆಯೋಗದಿಂದ ದೂರು ದಾಖಲು

ಹಂಚಿಕೊಳ್ಳಿ
WhatsApp Facebook X Telegram
KD Song Controversy Womens Commission Files Case
KD Song Controversy Womens Commission Files Case

KD Song Controversy ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾದ ಕೆಡಿ ಚಿತ್ರದ ಸಸ್ರೆ ಸೆರಗ ಹಾಡು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಈ ಚಿತ್ರದ ಹಾಡಿಗೆ ನಿರ್ದೇಶಕ ಪ್ರೇಮ್ ಬರೆದಿರುವ ಸಾಹಿತ್ಯ.

ಶಿವಮೊಗ್ಗ: ರೈಲ್ವೇ ಟಿಕೆಟ್​​ ಬುಕ್ಕಿಂಗ್​ ಕೌಂಟರ್ ಸೇರಿದಂತೆ ಹಲವೆಡೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ತಪಾಸಣೆ

ಹೌದು, ಬರುವ ಏಪ್ರಿಲ್ 30ರಂದು ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಆ ಎರಡೂ ಹಾಡುಗಳು ಸಖತ್ ವೈರಲ್ ಆಗಿದ್ದವು. ಇದೀಗ ಚಿತ್ರತಂಡ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದು, ಈ ಹಾಡು ವೈರಲ್ ಆಗುವುದರೊಂದಿಗೆ ಸಾಕಷ್ಟು ಟೀಕೆಗಳನ್ನೂ ಎದುರಿಸುತ್ತಿದೆ. ಅಷ್ಟೇ ಅಲ್ಲದೆ, ಈ ಹಾಡಿನ ಹಿಂದಿ ಅವತರಣಿಕೆಯನ್ನುಈಗಾಗಲೇ ಡಿಲೀಟ್ ಮಾಡಲಾಗಿದೆ.

ಈ ವಿರೋಧಕ್ಕೆ ಕಾರಣವಾಗಿದ್ದು ಹಾಡಿನ ಸಾಹಿತ್ಯ. ಈ ಹಾಡಿನ ಸಾಹಿತ್ಯದಲ್ಲಿ ಹೆಣ್ಣುಮಕ್ಕಳಿಗೆ ಅಗೌರವ ನೀಡುವಂತಹ ಹಾಗೂ ಕುಟುಂಬದವರೊಂದಿಗೆ ಕುಳಿತು ನೋಡಲು ಸಾಧ್ಯವಾಗದಂತಹ ಪದಗಳನ್ನು ಬಳಕೆ ಮಾಡಲಾಗಿದೆ ಎಂದು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗವು ದೂರು ದಾಖಲಿಸಿಕೊಂಡಿದೆ. ಹಾಗೆಯೇ ನಿರ್ದೇಶಕ ಪ್ರೇಮ್ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಜೋಗಿ’ ಚಿತ್ರದ ಬೇಡವೆನು ವರವನ್ನು ಕೊಡೆ ತಾಯೇ ಜನ್ಮವನು ಎಂಬಂತಹ ಅದ್ಭುತ ಹಾಡನ್ನು ಬರೆದಿದ್ದ ಪ್ರೇಮ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರಾ ಎಂದು ಜನರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಪ್ರೇಮ್ ಅವರ ಚಿತ್ರಗಳು ಚೆನ್ನಾಗಿಲ್ಲದಿದ್ದರೂ ಪರವಾಗಿಲ್ಲ, ಹಾಡುಗಳು ಮಾತ್ರ ಸೂಪರ್ ಹಿಟ್ ಇರುತ್ತಿದ್ದವು ಆದರೆ ಈಗ ಆ ಭರವಸೆಯೂ ಸುಳ್ಳಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಮಟ್ಟಿಗೆ ಈ ರೀತಿಯ ಅಶ್ಲೀಲತೆಯ ಹಾಡು ಬೇಕಿರಲಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದು, ವಿವಾದದ ಹಿನ್ನೆಲೆಯಲ್ಲಿ ಚಿತ್ರತಂಡ ಆ ಹಾಡನ್ನು ಪೂರ್ತಿಯಾಗಿ ತೆಗೆದುಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.

KD Song Controversy Womens Commission Files Case

KD Song Controversy Womens Commission Files Case
KD Song Controversy Womens Commission Files Case
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor