jogfalls news today / ಜೋಗ ಜಲಪಾತಕ್ಕೆ ಬಲೇ…ನೀರು! / ರಾಜ, ರಾಣಿ, ರೋರರ್ , ರಾಕೆಟ್ ವೈಭವ/ ಜನರ ರಶ್​!

ಹಂಚಿಕೊಳ್ಳಿ
WhatsApp Facebook X Telegram
jogfalls news today
jogfalls news today

jogfalls news today  ಮಳೆಗಾಲದ ಕಳೆ ಹೆಚ್ಚಿಸಿಕೊಂಡ ಜೋಗ: ಪ್ರವಾಸಿಗರ ದಂಡು, ಲಿಂಗನಮಕ್ಕಿ ಡ್ಯಾಂನಲ್ಲೂ ನೀರಿನ ಮಟ್ಟ ಏರಿಕೆ

Jogfalls news : ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ರಾಜ್ಯದ ಹೆಮ್ಮೆಯ ಜೋಗ ಜಲಪಾತ ಮರು ಜೀವ ಪಡೆದು ಮೈದುಂಬಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿದೆಡೆಯಿಂದ ಮತ್ತು ಹೊರರಾಜ್ಯಗಳಿಂದ ಪ್ರವಾಸಿಗರ ದಂಡು ದೌಡಾಯಿಸುತ್ತಿದ್ದು, ಮಳೆಯ ಹಿತ ಅನುಭವವನ್ನು ಸವಿಯುತ್ತಿದ್ದಾರೆ. ಜಲಪಾತ ಧುಮ್ಮಿಕ್ಕಿ ಹರಿಯುತ್ತಿರುವುದು ಪ್ರವಾಸಿಗರಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

jogfalls news today
jogfalls news today

ಜೋಗದ ಸೌಂದರ್ಯಕ್ಕೆ ಕಾರಣವಾಗಿರುವ ಶರಾವತಿ ನದಿಯ ಪ್ರದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ 138.0 ಮಿ.ಮೀ. ಮಳೆ ಬಿದ್ದಿರುವುದು ಜಲಪಾತ ಹಾಗೂ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಹರಿವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಹಾಲ್ನೋರೆಯ ಜಲಧಾರೆಯ ಜೊತೆಗೆ ಮಂಜಿನ ಕಣ್ಣಾಮುಚ್ಚಾಲೆಯ ಆಟವನ್ನು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ವಿಭಾಗಗಳಲ್ಲಿ ಹರಿಯುವ ಜಲಪಾತದ ಭವ್ಯ ನೋಟವನ್ನು ಆಸ್ವಾದಿಸುತ್ತಿದ್ದಾರೆ. 

Jog Falls view in rainfall season
Jog Falls view in rainfall season

jogfalls news today ಬೆಂಗಳೂರಿನಿಂದ ಜೋಗಕ್ಕೆ ಪ್ರಯಾಣಿಸುವ ಮಾರ್ಗ:  

ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಪ್ರಯಾಣಿಸಲು ಹಲವು ಮಾರ್ಗಗಳಿವೆ, ಆದರೆ ಸಾಮಾನ್ಯವಾಗಿ ಬಳಸುವ ಮತ್ತು ಉತ್ತಮ ರಸ್ತೆಯುಳ್ಳ ಮಾರ್ಗವೆಂದರೆ: ಬೆಂಗಳೂರಿನಿಂದ ಶಿವಮೊಗ್ಗ (ಸುಮಾರು 270 ಕಿ.ಮೀ.) ತಲುಪಬೇಕು. ಶಿವಮೊಗ್ಗದಿಂದ ಸಾಗರ (ಸುಮಾರು 70 ಕಿ.ಮೀ.) ಮೂಲಕ ಹಾದು ಹೋಗಿ, ಅಲ್ಲಿಂದ ಜೋಗ (ಸುಮಾರು 30 ಕಿ.ಮೀ.) ತಲುಪಬಹುದು. ಒಟ್ಟಾರೆ, ಬೆಂಗಳೂರಿನಿಂದ ಜೋಗಕ್ಕೆ ಸುಮಾರು 370-400 ಕಿ.ಮೀ. ದೂರವಿದೆ. ಸಾರಿಗೆ ಬಸ್ಸುಗಳು, ಖಾಸಗಿ ವಾಹನಗಳು ಅಥವಾ ಬಾಡಿಗೆ ಕಾರುಗಳ ಮೂಲಕವೂ ಜೋಗವನ್ನು ತಲುಪಬಹುದು.

Jog Falls view in rainfall season
Jog Falls view in rainfall season

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿನೋಡಿ

jogfalls news today

Jog Falls view in rainfall season
Jog Falls view in rainfall season

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor