ಮಲ್ನಾಡ್​ ಶಿವಮೊಗ್ಗದಲ್ಲಿ ಮತ್ತೆ ತಲೆ ಎತ್ತಿತಾ ಸೆಕ್ಸ್​ ಸ್ಕ್ಯಾಂಡಲ್ ಕ್ರೈಂ​ ? ಆನ್​ಲೈನ್​ನಲ್ಲಿ ಯುವತಿಯರೇ ಎಚ್ಚರ? ಇದು ನಿಜನಾ?

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS

ಮಲೆನಾಡು ಅಗಾಧ ಸಂಗತಿಗಳ ಒಡಲು. ಕಾಡಿಗೆ ಮಾತು ಬಂದಿದ್ದರೇ , ಮಲ್ನಾಡ್​ನ ಸೀಕ್ರೆಟ್​ ಲಾಕರ್​ ಬಿಚ್ಚಿಟ್ಟು, ನಡೆವ ಘನಘೋರ ಅಪರಾಧಗಳನ್ನು ಜಗತ್ತಿನ ಮುಂದಿಡುತ್ತಿತ್ತು.ಅಷ್ಟರಮಟ್ಟಿಗೆ ಶಿವಮೊಗ್ಗದ ಮೋಸ್ಟ್  ಟೆರಿಬಲ್​ ಕ್ರೈಂಗಳಿಗೆ,  ಜಿಲ್ಲೆಯ ಅಭಯಾರಣ್ಯಗಳು ಸಾಕ್ಷ್ಯಗಳಾಗಿವೆ! ಅದರಲ್ಲಿಯು ಮಲ್ನಾಡಿನ ಸೆಕ್ಸ್​ ಸ್ಕ್ಯಾಂಡಲ್​ಗಳಿಗೆ ಕಾಡು ಹಲವು ಸಹ ಮೇಜರ್​ ಐ ವಿಟ್ನೆಸ್​  

ಹೊಸನಗರದಲ್ಲಿ ನಡೆದಿತ್ತು ವಿಕೃತ ಕೃತ್ಯ

ಈ ಹಿಂದೆ ಹೊಸನಗರದ ಶರಾವತಿ ಹಿನ್ನೀರಿನಲ್ಲಿ ನಡೆದಿದ್ದ ಸೆಕ್ಸ್​ ರಿಲೆಟೆಡ್ ಕ್ರೈಂ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು. ಪರಿಸರದ ತೆಕ್ಕೆಯಲ್ಲಿ ಪರಸ್ಪರ ಒಂದಾಗಲು ಬರುವ ಪ್ರೇಮಿಗಳನ್ನ ಅಡ್ಡಗಟ್ಟಿ, ಅವರ ಬೆತ್ತಲೆ ವಿಡಿಯೋಗಳನ್ನ ಶೂಟ್ ಮಾಡಿ, ಮಾರುತ್ತಿದ್ದ ಗ್ಯಾಂಗ್​ವೊಂದನ್ನ ಶಿವಮೊಗ್ಗ ಪೊಲೀಸರು ಹಿಡಿದಿದ್ದ ಪ್ರಕರಣ, ಇವತ್ತಿಗೂ ಪೊಲೀಸ್ ಕ್ರೈಂ ಫೈಲ್​ಗಳಲ್ಲಿಯೇ ಸ್ಪೆಷಲ್​ ಕೇಸ್​ ​

ಮತ್ತೆ ಹೊರಬಿತ್ತು ಅಂತಹ ವಿಡಿಯೋ?

ಅಂದಹಾಗೆ ಈ ಪೀಠಿಕೆ ಹಾಕೋದಕ್ಕೂ ಕಾರಣವಿದೆ. ಸದ್ಯ ಮಲ್ನಾಡ್ ನಲ್ಲಿ​ ಇಂತಹುದ್ದೆ ಸೆಕ್ಸ್​ ಸ್ಕ್ಯಾಂಡಲ್​ನ ಸುದ್ದಿ ಹೊರಬಿದ್ದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಲೀಕ್ ಆಗಿವೆ. ಇಲ್ಲಿವರೆಗೂ ತಿಳಿದ ಮಟ್ಟಿಗೆ ಪೊಲೀಸ್ ಇಲಾಖೆಗೂ ಈ ಬಗ್ಗೆ ಮಾಹಿತಿಯಿದೆ. ತನಿಖೆ ನಡೆಯುತ್ತಿದ್ಯಾ? ಕೇಸ್ ಆಗ್ತಿದ್ಯಾ? ಆರೋಪಿಗಳು ಸಿಕ್ಕಿಬಿದ್ದಿದ್ದಾರಾ? ವಗೈರೆ ವಗೈರೆ ಸಂಗತಿಗಳು ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬಿಟ್ಟು, ನಡೆಯುತ್ತಿರುವ ಸಂಗತಿಗಳನ್ನು ತಿಳಿಯಾಗಿ ಹೇಳುವ ಪ್ರಯತ್ನ ಮಾಡುತ್ತೇವೆ.. 

ವಿನೋಬನಗರ ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ! ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?

ಯುವತಿಯರೇ ಹುಷಾರ್!

ಪೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಳ್ಳುವುದು, ಆನಂತರ ಆನ್ಲೈನ್ ಸೆಕ್ಸ್ ಚಾಟಿಂಗ್​ ಮಾಡುವುದು, ಅದರ ವಿಡಿಯೊ ಮಾಡಿಕೊಂಡು ಹುಡುಗಿಯರನ್ನ ಬ್ಲ್ಯಾಕ್​ ಮೇಲ್​​ ಮಾಡಿಕೊಂಡು ತನಗಿಷ್ಟ ಬಂದ ಕಡೆಗಳಲ್ಲಿ ಕರೆದುಕೊಂಡು ಹೋಗಿ, ತನಗಿಷ್ಟ ಬಂದ ಹಾಗೆ ಬಳಸಿಕೊಳ್ಳುವಂತಹ ಅಪರಾಧದ ಬಗೆಗಿನ ಆರೋಪವೊಂದು ಜಿಲ್ಲೆಯ ಪ್ರಮುಖ ತಾಲ್ಲೂಕಿನಲ್ಲಿ ಕೇಳಿಬಂದಿದೆ. 

ಆತ ಯಾರು? ಪೊಲೀಸರಿಗೂ ಗೊತ್ತಿದ್ಯಾ?

ಆತ, ಯುವ ಮುಖಂಡ ಎಂದು ಹೇಳಿಕೊಂಡವನಂತೆ. ಯಾವುದೋ ರಾಜಕೀಯ ಪಕ್ಷದಲ್ಲಿ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡವನಂತೆ.  ಹರೆಯದ ಹೆಣ್ಣುಮಕ್ಕಳು ಆತನ ಟಾರ್ಗೆಟ್ ಅಂತೆ..ಹೀಗೆ ಹಲವು ಆರೋಪಗಳನ್ನ ಹೊರಿಸುತ್ತಿರುವ ಪೋಸ್ಟರ್​ಗಳು ಸದ್ಯ ಮಲ್ನಾಡ್​ ಜನರ ವಾಟ್ಸ್ಯಾಪ್​ಗಳಲ್ಲಿ ಹರಿದಾಡುತ್ತಿದೆ. ಅಷ್ಟೆಅಲ್ಲದೆ ಸಾಕ್ಷ್ಯ ತೋರಿಸುವ ವಿಡಿಯೋಗಳು ಸಹ ಲೀಕ್ ಆಗಿದೆ.  

ಮೊಬೈಲ್​ನಿಂದ ಬದುಕು ಹಾಳು

ಮೊಬೈಲ್ ಯುವಕ ಯುವತಿಯರ ಕೈಗೆ ಸೇರಿದ ನಂತರ..ಕೇಳಬಾರದ ಸಂಗತಿಗಳನ್ನೆಲ್ಲಾ ಮಲ್ನಾಡ್​ನಲ್ಲಿ  ಕೇಳುವಂತಾಗಿದೆ. ಪೇಸ್ ಬುಕ್ ವಾಟ್ಸಾಪ್ ಇನ್ ಸ್ಟ್ರಾ ಗ್ರಾಂಗಳಲ್ಲಿ ಪರಿಚಯವಾಗುವ ಯುವಕ ಯುವತಿಯರ ಭವಿಷ್ಯವನ್ನು ಮೊಬೈಲ್​ಗಳು ಬರೆಯುತ್ತಿವೆ. ಅದರಲ್ಲಿಯು ಆನ್ ಲೈನ್ ಸೆಕ್ಸ್ ಡೇಟಿಂಗ್ ಆಪ್ ಗಳಲ್ಲಿ ಮಲೆನಾಡಿನ ಕೆಲವು ಯುವತಿಯರ ವಿಡಿಯೋಗಳು ಕಾಣಿಸಿಕೊಳ್ತಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. 

ಅಮಾಯಕತೆಯಿಂದಲೇ ಎಲ್ಲಾ ?

ಏನೂ ಆಗಲ್ಲ! ಹಾಗೆಲ್ಲಾ ಮಾಡಲ್ಲ ಎನ್ನುವ ಕೆಟ್ಟ ಅಮಾಯಕತೆ ಹಲವು ಯುವತಿಯರನ್ನ ಇಂತಹ ಸೆಕ್ಸ್​ ಬಲೆಗೆ ಬೀಳಿಸುತ್ತಿದೆ. ಯುವತಿಯರ ಖಾಸಗಿ ವಿಡಿಯೋ ರೆಕಾರ್ಡ್​​ ಮಾಡಿ ಅದನ್ನ ಹರಿಬಿಡುವ , ಬ್ಲಾಕ್ ಮೇಲ್​ ಮಾಡುವ ವಿಕೃತಿ ಹೆಚ್ಚಾಗುತ್ತಿದೆ. ಸದ್ಯ ಪಡ್ಡೆ ಹುಡುಗರ ಮೊಬೈಲ್​ನಲ್ಲಿ ಹರಿದಾಡ್ತಿರುವ ವಿಡಿಯೋ ಕೂಡ ಬ್ಲ್ಯಾಕ್​ ಮೇಲ್ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. 

ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಿಡಿದ ಕೆ.ಎಸ್​.ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್! ಬ್ರಾಹ್ಮಣರು ಯಹೂದಿಗಳಾಗಬೇಕು ಎಂದ್ರು ರೋಹಿತ್ ಚಕ್ರತೀರ್ಥ TODAY @ Short News

ಶಿವಮೊಗ್ಗ ಪೊಲೀಸರ ಗಮನಕ್ಕೆ

ಮಲ್ನಾಡ್​ನಲ್ಲಿ ಸಿಗುವ ಸಣ್ಣ ಸುಳಿವು ದೊಡ್ಡ ದೊಡ್ಡ ಕ್ರೈಂ ರಾಕೆಟ್​ಗಳನ್ನು ಬಟಾಬಯಲು ಮಾಡಿವೆ. ಶಿವಮೊಗ್ಗದಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳ ಸಾಧನೆಯೇ ಇದಕ್ಕೆ ದೊಡ್ಡ ಸಾಕ್ಷಿ. ಸದ್ಯ ಅಂತಹುದ್ದೇ ದೊಡ್ಡ ಸೆಕ್ಸ್​ ಸ್ಕ್ಯಾಂಡಲ್​ನ ಸುಳಿವನ್ನ ನೀಡುವಂತಿದೆ ಮೊಬೈಲ್​ಗಳಲ್ಲಿ ಹರಿದಾಡುತ್ತಿರುವ ಎರಡು ವಿಡಿಯೋಗಳು. ಅದರ ಹಿನ್ನೆಲೆ ಏನು? ಕೇಳಿಬರುತ್ತಿರುವ ಆರೋಪ ನಿಜನಾ? ಇಷ್ಟಕ್ಕೂ ಯಾರು ಅದು? ಅಲ್ಲಿ ದೌರ್ಜನ್ಯಕ್ಕೆ ಒಳಗಾದವರು ಯಾರು? ಎಂಬಿತ್ಯಾದಿ ಸಂಗತಿಗಳು ಪೊಲೀಸ್ ಇಲಾಖೆಯ ಗಮನದಲ್ಲಿಯು ಇದೆ ಎನ್ನಲಾಗುತ್ತಿದೆ? ಮುಂದಿನ ಕ್ರಮವೂ ಇಲಾಖೆಯ ವ್ಯಾಪ್ತಿಯಲ್ಲಿದೆ… 


ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಥಳಿಸಿದ್ದಕ್ಕೆ ಯುವಕನ ಆತ್ಮಹತ್ಯೆ!? ಹೊಳೆಹೊನ್ನೂರು PS ನಲ್ಲಿ ನಿಜಕ್ಕೂ ನಡೆದಿದ್ದೇನು? ದೂರಿನಲ್ಲಿ ಏನಿದೆ!?

ಶಿವಮೊಗ್ಗ ಪೊಲೀಸರ ಹಲ್ಲೆಯಿಂದಾಗಿ ಓರ್ವ ವ್ಯಕ್ತಿ ಜೀವ ಕಳೆದುಕೊಂಡನೇ? ಸದ್ಯ ಈ ಪ್ರಶ್ನೆಯೊಂದನ್ನ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ನಲ್ಲಿ ಸಲ್ಲಿಕೆಯಾಗಿರುವ ದೂರು ಕೇಳುತ್ತಿದೆ. ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿಯೇ ಥಳಿಸಿದ್ದಾರೆ ಎನ್ನಲಾಗಿದೆ. ಅದೇ ಘಟನೆಯಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಈ ಸಂಬಂಧ ಮೃತನ ಪತ್ನಿ ದೂರು ನೀಡಿದ್ದು, ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಪ್ರಕರಣವನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ಏನಿದು ಪ್ರಕರಣ?

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಹೋಬಳಿಯ ಒಂದು ಗ್ರಾಮದ ನಿವಾಸಿ ಮಂಜುನಾಥ್​. ಅವರು ಮೊನ್ನೆ 15 ನೇ ತಾರೀಖು ಮನೆಯ ಹಾಲ್​ನಲ್ಲಿದ್ದ ಅಡಿಕೆ ದಬ್ಬೆಗೆ ಸೀರೆ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತ್ನಿ ದೂರು ನೀಡಿದ್ದು ಪೊಲೀಸ್ ಸಿಬ್ಬಂಧಿ ನಡೆಸಿದೆ ಹಲ್ಲೆ ಕಾರಣಕ್ಕೆ ನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಹಲ್ಲೆ ಪ್ರಕರಣ

ಕಳೆದ 11 ನೇ ತಾರೀಖು ಮಂಜುನಾಥ್ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ನಿಂತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ಮಂಜುನಾಥ್​ರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬುದು ಆರೋಪ. ಯಾವ ಕಾರಣಕ್ಕೆ ಥಳಿಸಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ,  ಕೈ, ಕಾಲು, ಕಪಾಳ, ಬೆನ್ನಿಗೆ ಥಳಿಸಿದ ಸಿಬ್ಬಂದಿ ಆನಂತರ ಮಂಜುನಾಥ್​ನನ್ನ ಸ್ಟೇಷನ್​ಗೆ ಕರೆದೊಯ್ದಿದ್ದಾರೆ. ಸಂಜೆ ಹೊತ್ತಿಗೆ ಆತನನ್ನ ಸಹೋದರ ಬಿಡಿಸಿಕೊಂಡು ಮನೆಗೆ ಬಂದಿದ್ದಾರೆ. ಆದರೆ ಈ ಘಟನೆ ನಂತರ ಮಂಜುನಾಥ್​ ಖಿನ್ನತೆಗೆ ಜಾರಿದ್ದ, ಯಾರೊಂದಿಗೂ ಮಾತನಾಡದೇ ಮೌನಿಯಾಗಿದ್ದ ಮಂಜುನಾಥ್​ 15 ರ ರಾತ್ರಿ ತನ್ನ ಪತ್ನಿಗೆ ಮನೆಮುಂದಿನ  ಕೋಣೆಯಲ್ಲಿ ಮಲಗಲು ತಿಳಿಸಿದ್ದಾನೆ. ಆನಂತರ ಹಾಲ್​ನಲ್ಲಿ ನೇಣುಬಿಗಿದುಕೊಂಡಿದ್ದಾನೆ. 16 ರ ಬೆಳಗ್ಗೆ ಪತ್ನಿ ಕೋಣೆಯಿಂದ ಹೊರಬಂದಾಗ ವಿಚಾರ ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ಹೊಳೆಹೊನ್ನೂರು ಇನ್​ಸ್ಪೆಕ್ಟರ್​ಗೆ ದೂರು ಸಲ್ಲಿಕೆಯಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ


 

 

Leave a Comment