ಜಾಹೀರಾತು ನೋಡಿ 25 ಲಕ್ಷದ ಆಸೆಗೆ ಭದ್ರಾವತಿಯ ವ್ಯಕ್ತಿ ಕಳೆದುಕೊಂಡ ಹಣವೆಷ್ಟು ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Lightning Strike Trading advertisement Current shock : Rippon pete Dasara Sports cyber crimeThreat case
Lightning Strike Trading advertisement Rippon pete Dasara Sports cyber crime Threat case

Investment scam ಜಾಹೀರಾತು ನೋಡಿ 25 ಲಕ್ಷದ ಆಸೆಗೆ ಭದ್ರಾವತಿ ವ್ಯಕ್ತಿ ಕಳೆದುಕೊಂಡ ಹಣವೆಷ್ಟು ಗೊತ್ತಾ

ಇತ್ತೀಚೆಗೆ ಸಾಮಾಜಿಕ ಜಾತತಾಣಗಳಲ್ಲಿ ಹಣ ಹೂಡಿಕೆ ಮಾಡುವ ಜಾಹೀರಾತುಗಳನ್ನು ನಂಬಿ ಎಷ್ಟೋ ಜನರು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲಿಯೂ ಸಹ ಭದ್ರಾವತಿಯ ಹೊಸಮನೆ ನಿವಾಸಿಯೊಬ್ಬರು ಫೇಸ್​ಬುಕ್​​ ​ನಲ್ಲಿ ಬಂದಿದ್ದ ಮೇಸೇಜ್​ನ್ನು ನಂಬಿ 6,83,137 ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಇದೀಗ ಠಾಣೆಯ ಮೆಟ್ಟಿಲೇರಿದ್ದಾರೆ

Investment scam  ಹೇಗಾಯ್ತು ಘಟನೆ

ಭದ್ರಾವತಿಯ ಹೊಸಮನೆ ನಿವಾಸಿಯೊಬ್ಬರು ಫೆಸ್​ ಬುಕ್​ ನೋಡುತ್ತಿದ್ದಾಗ ಅದರಲ್ಲಿ ಹಣಗಳಿಸುವ ಜಾಹೀರಾತು ಬಂದಿದೆ. ಆ ಜಾಹೀರಾತಿನಲ್ಲಿ ಹಣ ಹೂಡಿಕೆ ಮಾಡಿ ಷೇರುಗಳನ್ನು ಖರೀದಿ ಮಾಡಿದರೆ ಹೆಚ್ಚಿನ ಲಾಬ ಬರುತ್ತದೆ ಎಂದು ಹಾಕಲಾಗಿತ್ತು. ವಂಚಕರ ವಂಚನೆಯ ಬಗ್ಗೆ ಅರಿಯದೇ ಇದನ್ನು  ನಂಬಿದ ವ್ಯಕ್ತಿ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಆ ಅ್ಯಪ್​ನ್ನು ಇನ್ಸ್ಟಾಲ್​ ಮಾಡಿಕೊಂಡು ಹಂತ ಹಂತವಾಗಿ  6,83,137 ಹಣವನ್ನು ಹೂಡಿಕೆ ಮಾಡಿದ್ದಾರೆ. 

ಕೆಲದಿನಗಳ ನಂತರ ವಂಚಕರು ನಿಮಗೆ ಇದರಲ್ಲಿ ಒಟ್ಟು 25,00,602 ರೂಪಾಯಿ ಲಾಭಾಂಶ ಬಂದಿದೆ ವಿತ್​ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಆ್ಯಪ್​ನಲ್ಲಿ ವಿತ್​ ಡ್ರಾ ಮಾಡಿಕೊಳ್ಳುವಾಗ ಆ ಆ್ಯಪ್​ ಲಾಕ್​ ಆಗಿದೆ. ಇದರಿಂದ ವಂಚಕರ ಮೋಸದ ಬಗ್ಗೆ ಅರಿತ ವ್ಯಕ್ತಿ ಶಿವಮೊಗ್ಗ ಸಿಇಎನ್​​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ   

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor