STATE NEWS

ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ದಿನ ಭವಿಷ್ಯದ ವಿವರ  ಇಂದು ಅದೃಷ್ಟ?

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು , ವೈಶಾಖ ಮಾಸ, ಶುಕ್ಲ ಪಕ್ಷದ ಚತುರ್ದಶಿ ತಿಥಿಯು ರಾತ್ರಿ 8.21 ರವರೆಗೆ ಇರಲಿದ್ದು, ತದನಂತರ ಪೌರ್ಣಮಿ ಆರಂಭವಾಗಲಿದೆ. ಚಿತ್ತಾ ನಕ್ಷತ್ರ ರಾತ್ರಿ 1.36 ರವರೆಗೆ ಇದ್ದು, ಬಳಿಕ ಸ್ವಾತಿ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆಯು ಸಂಜೆ 6.50 ರಿಂದ 8.30 ರವರೆಗೆ, ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ , ಯಮಗಂಡ ಕಾಲವು ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ಸಂಪೂರ್ಣ ದಿನ ಭವಿಷ್ಯ

ಮೇಷ / ಮಹತ್ವದ ಸಂದೇಶ ಲಭ್ಯವಾಗುವ ನಿರೀಕ್ಷೆಯಿದೆ. ಬೆಲೆಬಾಳುವ ವಸ್ತು ಖರೀದಿಸುವ ಅವಕಾಶವಿದ್ದು, ಸಮಾಜದಲ್ಲಿ ಗೌರವ ಸಿಗಲಿದೆ. ವಾಹನ ಖರೀದಿ ಯೋಗವಿದ್ದು, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ ವ್ಯಾಪಾರ ಹಾಗೂ ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

ವೃಷಭ / ಮನಸ್ಸಿನಲ್ಲಿ ಸ್ಥಿರವಾದ ಆಲೋಚನೆಗಳು ಇರುವುದಿಲ್ಲ. ಭಿನ್ನಾಭಿಪ್ರಾಯ. ಅನಾರೋಗ್ಯ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಬದಲಾವಣೆ ಎದುರಾಗಬಹುದು.

ಮಿಥುನ / ವ್ಯವಹಾರ ಸಾಂಗವಾಗಿ ಪೂರ್ಣಗೊಳ್ಳಲಿವೆ. ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಬಾಕಿ ಹಣ ಕೈಸೇರಲಿದೆ. ಔತಣಕೂಟಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಆಶಾಭಾವನೆ ಮೂಡಲಿದೆ.

ಕರ್ಕಾಟಕ / ನೂತನ ಉದ್ಯೋಗ ಯೋಗವಿದೆ. ಆರಂಭಿಸಿದ ಕೆಲಸ ಯಶಸ್ವಿಯಾಗಿ ಸಾಗಲಿವೆ. ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥಗೊಳ್ಳಲಿದ್ದು, ಶುಭ ಕಾರ್ಯ ನಡೆಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಾವುದೇ ವಿರೋಧಗಳಿಲ್ಲದೆ ಮುನ್ನಡೆಯಲಿದ್ದೀರಿ

ಸಿಂಹ / ಅಡೆತಡೆ ಎದುರಾಗುವ ಸಾಧ್ಯತೆಯಿದೆ. ಸಾಲದ ಪ್ರಯತ್ನ, ಆಲೋಚನೆಗಳಲ್ಲಿ ಅಸ್ಥಿರತೆ . ಮಾನಸಿಕ ಒತ್ತಡ ಹೆಚ್ಚಾಗಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರುತ್ಸಾಹ.

ಕನ್ಯಾ / ಪ್ರಮುಖ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ತಕ್ಕ ಪ್ರತಿಫಲ ದೊರೆಯುವುದಿಲ್ಲ. ಆಸ್ತಿ ವಿವಾದ ,ಜವಾಬ್ದಾರಿ ಹೆಚ್ಚಾಗಲಿದ್ದು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಿಸಬೇಕಾಗುತ್ತದೆ.

ತುಲಾ / ಶುಭ ಕಾರ್ಯ, ಹೆಚ್ಚುವರಿ ಆದಾಯ ಬರುವ ಮಾರ್ಗಗಳು ತೆರೆದುಕೊಳ್ಳಲಿದ್ದು, ಔತಣಕೂಟಗಳಲ್ಲಿ ಪಾಲ್ಗೊಳ್ಳುವಿರಿ. ವಹಿಸಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದು, ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ವಾತಾವರಣ ಇರಲಿದೆ.

ವೃಶ್ಚಿಕ / ಉತ್ತಮ ಬಾಂಧವ್ಯ, ಮನೆಯಲ್ಲಿ ಶುಭ ಕಾರ್ಯ .ಅನಿರೀಕ್ಷಿತ ಧನ ಲಾಭವಾಗಲಿದೆ. ವ್ಯಾಪಾರ ವಿಸ್ತರಿಸಲು ಅವಕಾಶವಿದ್ದು, ಉದ್ಯೋಗದಲ್ಲಿನ ಮಾನಸಿಕ ಒತ್ತಡ ನಿವಾರಣೆಯಾಗಲಿವೆ.

ಧನುಸ್ಸು / ಈ ದಿನ ಮಂದಗತಿಯಲ್ಲಿ ಸಾಗಲಿದೆ. ದೂರ ಪ್ರಯಾಣ , ಕೌಟುಂಬಿಕ ಸಮಸ್ಯೆಗಳು ಮಾನಸಿಕ ಕಿರಿಕಿರಿ ಉಂಟುಮಾಡಬಹುದು. ವ್ಯಾಪಾರ ವ್ಯವಹಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಧಾರಣ.

ಮಕರ / ಒತ್ತಡದ ದಿನ, ಪ್ರಮುಖ ಕೆಲಸಗಳಲ್ಲಿ ವಿಳಂಬವಾಗಲಿದ್ದು, ಅನಾರೋಗ್ಯ ಕಾಡಬಹುದು. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಕಿರಿಕಿರಿ ಎದುರಾಗಲಿವೆ.

ಕುಂಭ /ಹಳೆಯ ಸ್ನೇಹಿತರ ಭೇಟಿ, ಔತಣಕೂಟಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಲಭಿಸಲಿದ್ದು, ಶುಭ ಕಾರ್ಯ. ವಾಹನ ಹಾಗೂ ಗೃಹ ಯೋಗ,ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ.

ಮೀನ / ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ದಿಢೀರ್ ಪ್ರಯಾಣ, ಆರ್ಥಿಕವಾಗಿ ಹೆಚ್ಚಿನ ಹಣ ವ್ಯಯವಾಗಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದ ಕಿರಿಕಿರಿ . ಕೆಲಸದ ಮಧ್ಯೆ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಗೊಂದಲಮಯ ಪರಿಸ್ಥಿತಿ

How will the day unfold for all 12 zodiac signs  ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ದಿನ ಭವಿಷ್ಯದ ವಿವರ  ಇಂದು ಅದೃಷ್ಟ?
How will the day unfold for all 12 zodiac signs  ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ದಿನ ಭವಿಷ್ಯದ ವಿವರ  ಇಂದು ಅದೃಷ್ಟ?

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ