ಬಿಕ್ಕೋನಹಳ್ಳಿಯಲ್ಲಿ ಸಿಕ್ಕಿದ್ದು ನರಭಕ್ಷಕ ಚಿರತೆ ಎಂದು ಗೊತ್ತಾಗಿದ್ದು ಹೇಗೆ? MAN EATER ಸಿಕ್ಕಿಬಿದ್ದಿದ್ದೇಗೆ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ಬಿಕ್ಕೋನಹಳ್ಳಿಯಲ್ಲಿ ಮಹಿಳೆಯೊಬ್ಬರನ್ನ ಸಾಯಿಸಿದ್ದ ಚಿರತೆಯನ್ನ ಅರಣ್ಯ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ರೈತ ಮಹಿಳೆಯನ್ನು ಕೊಂದು ತಿಂದಿದ್ದ ನರ ಭಕ್ಷಕ ಚಿರತೆಯನ್ನ ಹಿಡಿಯುವುದು ಅನಿವಾರ್ಯವಾಗಿತ್ತು. 

ನರಭಕ್ಷಕನನ್ನ ಹಿಡಿದ ಇಲಾಖೆ

ಮ್ಯಾನ್​ ಈಟರ್​ ವನ್ಯಜೀವಿಯನ್ನು ಹಿಡಿಯುವುದಕ್ಕೆ ಕಾನೂನಿನ ಅಡೆತಡೆಯು ಇರಲಿಲ್ಲ. ಈ ನಿಟ್ಟಿನಲ್ಲಿ ಚಿರತೆ ಸೆರೆ ಹಿಡಿಯುವ ಸಂಬಂಧ  ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಕಾರ್ಯಾಚರಣೆಗಾಗಿ ಮೈಸೂರಿನಿಂದ ಚಿರತೆ ಟಾಸ್ಕ್ ಪೂರ್ಸ್ ತಂಡ ಕರೆಯಿಸಲಾಗಿತ್ತು.ಕಳೆದ ಆಗಸ್ಟ್ 8 ರಂದು ಬಿಕ್ಕೋನಹಳ್ಳಿ ಗ್ರಾಮದ ರೈತ ಮಹಿಳೆ ಯಶೋಧಮ್ಮರನ್ನು ಕೊಂದಿದ್ದ ಚಿರತೆ ಈ ಭಾಗದಲ್ಲಿ ಆತಂಕ ಮೂಡಿಸಿತ್ತು.  

10 ಕ್ಕೂ ಹೆಚ್ಚು ಬೋನ್​

ಚಿರತೆಯು ಓಡಾಡುವ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಿದ್ದ ಅರಣ್ಯ ಸಿಬ್ಬಂದಿ ಒಟ್ಟಾರೆ,  7 ಟ್ರ್ಯಾಕ್​ ಕ್ಯಾಮರಾಗಳನ್ನು ಅಳವಡಿಸಿದ್ದರು. ಜೊತೆಯಲ್ಲಿ 10 ಕ್ಕೂ ಹೆಚ್ಚು ಬೋನ್​ಗಳನ್ನ ಇಟ್ಟು ಚಿರತೆಗಾಗಿ ಹುಡುಕಾಟ ನಡೆಸಲಾಗಿತ್ತು.  ಈ ಮಧ್ಯೆ ಸ್ಥಳೀಯವಾಗಿ ಮತ್ತೆ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಕಾರ್ಯಾಚರಣೆ ಯಶಸ್ವಿಗೊಂಡಿದೆ. 

ಅದೇ ಅಂತಾ ಹೇಗೆ ಗೊತ್ತು ?

ಸಿಕ್ಕಿಬಿದ್ದ ಚಿರತೆಯ ಪಾದ, ಹಾಗೂ ಅದರ ಮೈಕೂದಲು ಸೇರಿದಂತೆ ಇತರೇ ಗುರುತುಗಳು ಯಶೋಧಮ್ಮರವರ ಸಾವನ್ನಪ್ಪಿದ ಸ್ಥಳದಲ್ಲಿ ಕಾಣ ಸಿಕ್ಕ ಗುರುತುಗಳಿಗೆ ಹೋಲಿಕೆಯಾದ್ದರಿಂದ ಈ ಚಿರತೆಯೇ ಯಶೋದಮ್ಮರರವರನ್ನ ಕೊಂದಿದೆ ಎಂದು ಅರಣ್ಯ ಸಿಬ್ಬಂದಿ ಅಂದಾಜಿಸಿದ್ದಾರೆ. ಯಶೋದಮ್ಮರವರು ಸಾವನ್ನಪ್ಪಿದ ಸ್ಥಳದಿಂದ ತುಸು ದೂರದಲ್ಲಿಯೇ ಚಿರತೆ ಸೆರೆಯಾಗಿದೆ.  

ಬನ್ನೇರುಘಟ್ಟಕ್ಕೆ ಶಿಫ್ಟ್

ಇನ್ನೂ  ನರಭಕ್ಷಕ ಚಿರತೆಯನ್ನು ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಪ್ರಾಥಮಿಕ ಹಂತದಲ್ಲಿ ಶಿಫ್ಟ್ ಮಾಡಲಾಯ್ತಾದರೂ, ಆನಂತರ ಚಿರತೆಯನ್ನು  ಬೆಂಗಳೂರಿನ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡಲಾಗುತ್ತಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor