HOSANAGARA

ಸ್ಕೀಂ ಹೆಸರಿನಲ್ಲಿ 1960 ಕ್ಕೂ ಹೆಚ್ಚು ಜನರಿಗೆ ಮೋಸ, ವಂಚನೆ ಮಾಡಿದ್ದೆಷ್ಟು ಕೋಟಿ ಗೊತ್ತಾ..

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಹೊಸನಗರ: ಆಕರ್ಷಕ ಬಹುಮಾನ ಹಾಗೂ ಸ್ಕೀಮ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಆರೋಪದಡಿ  ಉದ್ಯಮಿ ಅಬ್ದುಲ್ ರಜಾಕ್‌ ಎಂಬುವವರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ . 

ಶಿವಮೊಗ್ಗ: ಮನೆಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನ : ಕಳ್ಳರು ಕದ್ದಿದ್ದೇನು ಗೊತ್ತಾ, 

Hosanagara ಘಟನೆ ವಿವರ

ಹೊಸನಗರದ ನಿಖಿಲ್ ಎಂಬುವವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಅವರು 13, 16, ಮತ್ತು 21 ತಿಂಗಳ ವಿವಿಧ ಸ್ಕೀಮ್‌ಗಳನ್ನು ಪರಿಚಯಿಸಿದ್ದರು . ಪ್ರತಿ ತಿಂಗಳು 1,000 ರೂ. ಪಾವತಿಸಿದರೆ ಸ್ಕೀಮ್ ಮುಕ್ತಾಯದ ನಂತರ ಗೃಹೋಪಯೋಗಿ ವಸ್ತುಗಳು ಹಾಗೂ ಆಕರ್ಷಕ ಬಹುಮಾನ ನೀಡುವುದಾಗಿ ಜನರನ್ನು ನಂಬಿಸಿದ್ದರು .

ದೂರುದಾರ ನಿಖಿಲ್ ಅವರು ಸುಮಾರು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಿದ 24 ಲಕ್ಷ ರೂಪಾಯಿಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದರು. ಆದರೆ, ಮೇ 2025ಕ್ಕೆ ಸ್ಕೀಮ್ ಮುಕ್ತಾಯವಾದರೂ ಭರವಸೆ ನೀಡಿದಂತೆ ಯಾವುದೇ ವಸ್ತುಗಳನ್ನಾಗಲೀ ಅಥವಾ ಹಣವನ್ನಾಗಲೀ ಹಿಂತಿರುಗಿಸದೆ ಆರೋಪಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಇವರಂತೆಯೇ ಸುಮಾರು 7-8 ಜನ ಏಜೆಂಟರುಗಳು 1960ಕ್ಕೂ ಹೆಚ್ಚು ಜನರಿಂದ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಪಾವತಿಸಿದ್ದರು. ಆದರೆ ಅವರ್ಯಾರಿಗೂ ಸಹ ಯಾವುದೇ ಬಹುಮಾನವನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ. 

 ಈ ಹಿನ್ನೆಲೆ ತಕ್ಷಣ ಹೊಸನಗರ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಕಾರ್ಯಪ್ರವೃತ್ತರಾಗಿ ಉಡುಪಿ ಮೂಲದ ಅಬ್ದುಲ್ ರಜಾಕ್‌ನನ್ನು ವಶಕ್ಕೆ ಪಡೆದಿದೆ.

Hosanagara 3 Crore Fraud Group Owner Jailed 

Hosanagara 3 Crore Fraud Group Owner Jailed
Hosanagara 3 Crore Fraud Group Owner Jailed
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.