Gold Coin Scam ಶಿವಮೊಗ್ಗ: ಕಡಿಮೆ ಬೆಲೆಗೆ ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಂದ 4 ಲಕ್ಷ ರೂಪಾಯಿ ಪಡೆದು ನಕಲಿ ನಾಣ್ಯ ನೀಡಿ ವಂಚಿಸಿರುವ ಘಟನೆಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು
ಪ್ರಕರಣದ ವಿವರ
ಹುಬ್ಬಳ್ಳಿಯ ದೂರುದಾರ ವ್ಯಕ್ತಿಯೊಬ್ಬರಿಗೆ ಸುಮಾರು 6 ತಿಂಗಳ ಹಿಂದೆ ಅಶೋಕ್ ಎಂಬ ವ್ಯಕ್ತಿ ಫೋನ್ ಮಾಡಿದ್ದನು. ತಾನು ಮೈಸೂರು ಮೂಲದವನೆಂದು ಪರಿಚಯಿಸಿಕೊಂಡ ಆತ, ಮನೆಯ ಪಾಯ ತೆಗೆಯುವಾಗ ಹಳೆಯ ಕಾಲದ ಬಂಗಾರದ ನಾಣ್ಯಗಳು ಸಿಕ್ಕಿವೆ, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಆಮಿಷ ಒಡ್ಡಿದ್ದನು. ಈ ಮಾತನ್ನು ನಂಬಿದ ದೂರುದಾರರು ನಾಣ್ಯ ಖರೀದಿಸಲು ಒಪ್ಪಿಕೊಂಡಿದ್ದರು.
ಮಾರ್ಚ್ 10 ರಂದು ಶಿವಮೊಗ್ಗದ ಸಾಗರ ರಸ್ತೆಯ ಶ್ರೀರಾಂಪುರ ಹತ್ತಿರದ ಹೈವೇ ಪಕ್ಕದಲ್ಲಿ ದೂರುದಾರರನ್ನು ಭೇಟಿಯಾದ ಇಬ್ಬರು ವ್ಯಕ್ತಿಗಳು, ಸ್ಯಾಂಪಲ್ ಎಂದು ಒಂದು ಅಸಲಿ ಬಂಗಾರದ ನಾಣ್ಯ ನೀಡಿ 101 ರೂ. ಪಡೆದಿದ್ದರು. ದೂರುದಾರರು ಹುಬ್ಬಳ್ಳಿಗೆ ವಾಪಸ್ಸಾಗಿ ಆ ನಾಣ್ಯವನ್ನು ಪರಿಶೀಲಿಸಿದಾಗ ಅದು ಅಸಲಿ ಬಂಗಾರ ಎಂದು ದೃಢಪಟ್ಟಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, 200 ಗ್ರಾಂ ನಾಣ್ಯ ನೀಡುವುದಾಗಿ ನಂಬಿಸಿ 4 ಲಕ್ಷ ರೂಪಾಯಿಗೆ ಡೀಲ್ ಕುದುರಿಸಿದ್ದರು.
ನಂತರ ಮಾರ್ಚ್ 13 ರಂದು ದೂರುದಾರರು ಪುನಃ ಶಿವಮೊಗ್ಗಕ್ಕೆ ಬಂದು 4 ಲಕ್ಷ ರೂಪಾಯಿ ನಗದು ನೀಡಿ 200 ಗ್ರಾಂ ತೂಕದ ನಾಣ್ಯಗಳನ್ನು ಪಡೆದಿದ್ದರು. ಆದರೆ, ಹುಬ್ಬಳ್ಳಿಗೆ ತೆರಳಿ ಪರಿಶೀಲಿಸಿದಾಗ ಆ ಎಲ್ಲಾ ನಾಣ್ಯಗಳು ನಕಲಿ ಎಂದು ತಿಳಿದುಬಂದಿದೆ. ತಕ್ಷಣವೇ ಆರೋಪಿಗಳಿಗೆ ಫೋನ್ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆ ಶಿವಮೊಗ್ಗದ ತುಂಗಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Gold Coin Scam Hubli Man Cheated of 4 Lakh
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
