SHIVAMOGGA NEWS TODAY

ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga ಶಿವಮೊಗ್ಗ, : ನಗರದ ಗೋಪಾಲಗೌಡ ಬಡಾವಣೆಯಲ್ಲಿ ನಡೆದ ಅಪಘಾತವೊಂದರಲ್ಲಿ ಶಾಲಾ ಬಸ್ ಹರಿದು ಒಂದೂವರೆ ವರ್ಷದ ಹಸುಗೂಸು ಸ್ಥಳದಲ್ಲೇ ಸಾವನ್ನಪ್ಪಿದೆ.

ಏಪ್ರಿಲ್ 1ರಿಂದ ಹೊಸ ಆರ್ಥಿಕ ನಿಯಮಗಳ ಜಾರಿ: ಈ ಬದಲಾವಣೆ ಬಗ್ಗೆ ಗಮನಿಸಿ

ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಿವಾಸಿ ಮಂಜುನಾಥ್ ಎಂಬುವವರ ಪುತ್ರ ಆರ್ಯನ್ (1 ವರ್ಷ 6 ತಿಂಗಳು) ಮೃತಪಟ್ಟ ದುರ್ದೈವಿ. ಬಡಾವಣೆಯ ಚಂದನ ಪಾರ್ಕ್ ಸಮೀಪ ಈ ಘಟನೆ ಸಂಭವಿಸಿದೆ.

ಘಟನೆಯ ವಿವರ

ಆರ್ಯನ್‌ನ ಅಣ್ಣನನ್ನು ಶಾಲಾ ಬಸ್‌ನಿಂದ ಇಳಿಸಿಕೊಳ್ಳಲು ಮನೆಕೆಲಸದಾಕೆ ಬಸ್ ಬಳಿ ಹೋಗಿದ್ದರು. ಈ ವೇಳೆ ಯಾರಿಗೂ ತಿಳಿಯದಂತೆ ಪುಟ್ಟ ಮಗು ಆರ್ಯನ್ ಕೂಡ ಅವರ ಹಿಂದೆಯೇ ಓಡಿ ಬಂದಿದೆ. ಸಹೋದರನನ್ನು ಬಸ್‌ನಿಂದ ಇಳಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಬಸ್‌ನ ಮುಂಭಾಗದಲ್ಲಿದ್ದ ಮಗುವನ್ನು ಗಮನಿಸದ ಚಾಲಕ ಬಸ್ ಚಲಾಯಿಸಿದ್ದಾನೆ. ಪರಿಣಾಮ ಚಕ್ರ ಮಗುವಿನ ಮೇಲೆ ಹರಿದಿದೆ. 

ಘಟನೆ ನಡೆದ ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಪಶ್ಚಿಮ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Shivamogga Shivamogga Bike Rider Dies in Vidyanagar Flyover Accident

Shivamogga Baby Dies in School Bus Accident

Dandavati River  Kannada  Horoscope car decor new

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.