SHIVAMOGGA NEWS TODAY

ಘಾನಾದಲ್ಲಿ ನಾಟಿ ಔಷಧಿ ಮಾರಲು ಹೋದ ಶಿವಮೊಗ್ಗದ 24 ಮಂದಿಗೆ ಆಘಾತ. ಏನಿದು ಘಟನೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಸಾಂಪ್ರದಾಯಿಕ ಗಿಡಮೂಲಿಕೆ ತೈಲ ಹಾಗೂ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕಾಗಿ ಆಫ್ರಿಕಾ ರಾಷ್ಟ್ರ ಘಾನಾಕ್ಕೆ ತೆರಳಿದ್ದ ಶಿವಮೊಗ್ಗ ತಾಲೂಕಿನ ಸದಾಶಿವಪುರ ಹಾಗೂ ದಾವಣಗೆರೆಯ ಗೋಪನಾಳದ ಒಟ್ಟು 26 ಮಂದಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರನ್ನು ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

Ghana Detains ಘಟನೆಯ ಹಿನ್ನೆಲೆ

ಕಳೆದ 6 ತಿಂಗಳಿನಿಂದ ಘಾನಾದಲ್ಲಿ ಗಿಡಮೂಲಿಕೆ ಉತ್ಪನ್ನ ಮಾರಾಟ ಮಾಡುತ್ತಿದ್ದ ಲಕ್ಕನ್, ಮಿಲ್ಲಿ, ಶಿರೀಶ್ ಸೇರಿದಂತೆ 26 ಮಂದಿಯನ್ನು ಸಿಸ್ಸಲಾ ಪೂರ್ವ ಪುರಸಭೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಆಹಾರ ಮತ್ತು ಔಷಧ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ನೋಂದಾಯಿತವಲ್ಲದ ಔಷಧೀಯ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪ ಇವರ ಮೇಲಿದೆ. 

ವೃದ್ಧೆ ಗುಂಡ್ಸಲಾ ಅಳಲು

ಸದಾಶಿವಪುರದ ವೃದ್ಧೆ ಗುಂಡ್ಸಲಾ ಅವರು ತಮ್ಮ ಮಗ ಮತ್ತು ಸೊಸೆಯಂದಿರ ಬಂಧನದ ಸುದ್ದಿಯಿಂದ ಕಂಗಾಲಾಗಿದ್ದಾರೆ. ನನ್ನ ಮಕ್ಕಳು ವಿದೇಶಕ್ಕೆ ಹೋಗಿ ಗಿಡಮೂಲಿಕೆ ಎಣ್ಣೆ ಮಾರಿ ಮಸಾಜ್ ಸೇವೆ ನೀಡುತ್ತಾರೆ. ಈಗ ಅವರ ಬಂಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ನಾಲ್ವರು ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಅವರು ಕಣ್ಣೀರಿಟ್ಟಿದ್ದಾರೆ. 

Ghana Detains 26 Hakki Pikki Tribals  Shimoga

Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
shivamogga car decor sun control house
shivamogga car decor sun control house
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.