SHIVAMOGGA NEWS TODAY

ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ! ಒಂದು ಚಿನ್ನದ ಸರದ ಕಳ್ತನ ಮತ್ತು ಲೇಡಿ ಕಥೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಬಂಗಾರದ ಅಂಗಡಿಗಳಿಗೆ ಹೈಪೈ ಗ್ರಾಹಕರಂತೆ ಹೋಗಿ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದಿಯುತ್ತಿದ್ದ ಮಹಿಳೆಯೊಬ್ಬರನ್ನ ಹಾವೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀದೇವಿ ಕಟ್ಟೆಕಾರ (30) ಎಂಬಾಕೆ ಬಂದಿತ ಮಹಿಳೆ.

ಮೂಲತಃ ಹುಬ್ಬಳ್ಳಿ  ನಿವಾಸಿಯಾದ ಮಹಿಳೆ ಶಿವಮೊಗ್ಗದ ಬೀಮಾ ಜ್ಯುವೆಲರ್ಸ್​​ನಲ್ಲಿ ಕದ್ದ ಚಿನ್ನವನ್ನು ಹಾವೇರಿಯ ಅಂಗಡಿಯೊಂದರಲ್ಲಿ ಮಾರಲು ತೆರಳಿದ್ದ ವೇಳೆ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. 

Shimoga Gold Swap Case ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ

ಶ್ರೀ ದೇವಿ ಐಷಾರಾಮಿ ಕಾರಿನಲ್ಲಿ ತನ್ನ ಮಗುವಿನೊಂದಿಗೆ ಗ್ರಾಹಕಳ ಸೋಗಿನಲ್ಲಿ ಬ್ರಾಂಡೆಡ್ ಆಭರಣದ ಅಂಗಡಿಗೆ ಬರುತ್ತಿದ್ದಳು. ಮೈತುಂಬಾ ಚಿನ್ನ ಧರಿಸಿ ಬರುತ್ತಿದ್ದ ಈಕೆ, ಅಂಗಡಿಯವರನ್ನ ಯಾಮಾರಿಸಿ ಚಿನ್ನ ಕದಿಯುತ್ತಿದ್ದಳು, ಅಲ್ಲದೆ ಕದ್ದ ದಿನವೇ ಇನ್ನೊಂದು ಅಂಗಡಿಯಲ್ಲಿ ಆಭರಣಗಳನ್ನು ಮಾರುತ್ತಿದ್ದಳು.

Shimoga Gold Swap Case ಚಿನ್ನ ದೋಚುತ್ತಿದ್ದ ಪ್ಲಾನ್​ ಹೇಗಿತ್ತು ಗೊತ್ತಾ

ಚಿನ್ನದ ಅಂಗಡಿಗೆ ಬರುವಾಗ ನಕಲಿ ಚಿನ್ನಾಭರಣನ್ನ ತೆಗೆದುಕೊಂಡು ಬರುತ್ತಿದ್ದ ಶ್ರೀದೇವಿ ನಂತರ ಅಂಗಡಿಯ ಸಿಬ್ಬಂದಿಯ ಬಳಿ ವಿವಿಧ ರೀತಿ ಆಭರಣಗಳನ್ನು ತೋರಿಸುವಂತೆ ಕಳುತ್ತಿದ್ದಳು, ನಂತರ ಸಮಯ ನೋಡಿ, ತನ್ನ ಬಳಿ ಇರುವ ಆರ್ಟಿಫಿಷಿಯಲ್​ ಸರಕ್ಕೆ ಯಾವ ಸರ ಹೊಂದಿಕೆಯಾಗುತ್ತೋ ಆ ಸರವನ್ನು ಒರಿಜಿನಲ್​ ಸರದ ಬಾಕ್ಸ್​ಗೆ ಹಾಗಿ ಅಸಲಿ ಸರವನ್ನು ಕ್ಷಣ ಮಾತ್ರದಲ್ಲಿ ಬದಲಿಸುತ್ತಿದ್ದಳು.ಕೊನೆಗೆ ಯಾವ ಸರವೂ ಬೇಡ ಎಂದು ವಾಪಾಸು ತೆರಳುತ್ತಿದ್ದಳು. ನಂತರ ಬೇರೊಂದು ಬಂಗಾರದ ಅಂಗಡಿಗೆ ತೆರಳಿ ಆ ಸರವನ್ನು ಮಾರಾಟ ಮಾಡುತ್ತಿದ್ದಳು

ಸಿಕ್ಕಿಬಿದ್ದಿದ್ದು ಹೇಗೆ   

ಹೀಗೆ ಕದ್ದ ಸರವನ್ನು ಹಾವೇರಿಯ ಬೆನಕ ಗೋಲ್ಡ್​ ಕಂಪನಿಯಲ್ಲಿ ಮಾರಾಟ ಮಾಡಲು ಬಂದಿದ್ದಳು. ಯಾವುದೇ ದಾಖಲೆ ಇಲ್ಲದೆ ದುಬಾರಿ ಮೊತ್ತದ ಚಿನ್ನವನ್ನು ಮಾರಲು ಬಂದಿರುವುದನ್ನ ಅನುಮಾನಸ್ಪದಾಗಿ ನೋಡಿದ ಸಿಬ್ಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಿನ್ನವನ್ನು ಜಪ್ತಿಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆ ಶಿವಮೊಗ್ಗದ ಬೀಮಾ ಜ್ಯುವೆಲ್ಲರ್ಸ್​ ನಿಂದ  ಕದ್ದ ಚಿನ್ನವನ್ನು ಮಾರಾಟಕ್ಕೆ ತಂದಿದ್ದಳು ಎಂದು ಗೊತ್ತಾಗಿದೆ. ಈ ಕುರಿತು ಪೊಲೀಸರು ಇನ್ನಷ್ಟು ವಿಚಾರಣೆ ನಡೆಸ್ತಿದ್ದಾರೆ.ರಾಣೆಬೆನ್ನೂರು ಶಹರ ಪೊಲೀಸ್‌ ಠಾಣೆಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Shimoga Gold Swap Case
Shimoga Gold Swap Case

Shimoga Gold Swap Case Woman Thief Caught

shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.