ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಕೊಡಲು ತಿಂಡಿ ಹಾಗೂ ಬ್ಲಾಂಕೇಟ್​ ತಂದಿದ್ರು, ಚೆಕ್​ ಮಾಡಿದಾಗ ಅದರಲ್ಲಿ ಇದ್ದಿದ್ದೇ ಬೇರೆ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ :  ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಸುವ ಕಿಡಿಗೇಡಿಗಳ ಪ್ರಯತ್ನ ಮುಂದುವರಿಯುತ್ತಲೇ ಇದೆ. ಈ ಹಿಂದೆ ಬಾಳೆ ಹಣ್ಣಿನ ದಿಂಡು ಗಮ್​ ಟೇಪ್​​ ಅಷ್ಟೇ ಅಲ್ಲದೆ ಪ್ಯಾಂಟ್​ ಜಿಪ್ನಲ್ಲಿ  ಗಾಂಜಾ ಕಳುಹಿಸಲು ಹವಣಿಸಿದ್ದ ಜಾಲ, ಇದೀಗ ಬ್ಲಾಂಕೆಟ್​ನಲ್ಲಿ  ಗಾಂಜಾ ಅಡಗಿಸಿಟ್ಟು ಜೈಲಿನೊಳಗೆ ತಲುಪಿಸಲು ಪ್ಲಾನ್ ಮಾಡಿತ್ತು. ಆದರೆ, ಪೊಲೀಸರು ಸಮಯ ಪ್ರಜ್ಙ್ನೆಯಿಂದಾಗ ಆರೋಪಿಗಳ ಪ್ರಯತ್ನ ಇದೀಗ ವಿಫಲವಾಗಿದೆ.

ಜೂನ್ ಮೊದಲ ವಾರದಲ್ಲಿ , ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್

ಘಟನೆಯ ವಿವರ 

ಮೇ 2ರಂದು ಸಂಜೆ ಸರಿಸುಮಾರು 4:35ಕ್ಕೆ ಟಿಪ್ಪುನಗರದ ನಿವಾಸಿಯಾದ ಕಲೀಂ ಎಂಬ ವ್ಯಕ್ತಿ, ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಮಹಮ್ಮದ್ ಶೋಹೆಬ್‌ನನ್ನು ಭೇಟಿಯಾಗಲು ಬಂದಿದ್ದನು. ಕೈದಿಯ ಉಪಯೊಗಕ್ಕಾಗಿ ಬೇಕರಿ ತಿಂಡಿಗಳು, ಬಟ್ಟೆಬರೆ ಹಾಗೂ ಒಂದು ಬ್ಲಾಂಕೆಟ್ ಅನ್ನು ಆತ ತಂದಿದ್ದನು. ಈ ಸಂದರ್ಭದಲ್ಲಿ ಕಾರಾಗೃಹದ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್‌ನಲ್ಲಿ ಕರ್ತವ್ಯದಲ್ಲಿದ್ದ ಕೆ.ಎಸ್.ಐ.ಎಸ್.ಎಫ್ (KSISF) ಅಧಿಕಾರಿ ಇಮ್ರಾನ್ ಖಾನ್ ಮತ್ತು ಅವರ ತಂಡವು ತಪಾಸಣೆ ನಡೆಸುವಾಗ ಬ್ಲಾಂಕೆಟ್‌ನ ಪಟ್ಟಿಯು ದಪ್ಪಗಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಆ ಪಟ್ಟಿಯನ್ನು ಪರಿಶೀಲಿಸಿದಾಗ, ಅದರೊಳಗೆ ಬಚ್ಚಿಟ್ಟಿದ್ದ ನಿಷೇಧಿತ ಗಾಂಜಾ ಪತ್ತೆಯಾಗಿದೆ. 

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆರೋಪಿ ಕಲೀಂನನ್ನು ವಶಕ್ಕೆ ಪಡೆದಿದ್ದಾರೆ. ಜೈಲು ಅಧೀಕ್ಷಕ ಪರಮೇಶ್ ಅವರ ಮಾರ್ಗದರ್ಶನದಂತೆ, ಸಹಾಯಕ ಜೈಲರ್ ರಮೇಶ್ ಎಸ್.ಸಿ. ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಗಾಂಜಾ ತಂದಿದ್ದ ಕಲೀಂ ಹಾಗೂ ಅದಕ್ಕಾಗಿ ಬೇಡಿಕೆ ಇಟ್ಟಿದ್ದ ಕೈದಿ ಮಹಮ್ಮದ್ ಶೋಹೆಬ್ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Ganja Seized in Shimoga Central Jail

Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Ganja Seized

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor