SHIVAMOGGA NEWS TODAY

ಶಿವಮೊಗ್ಗ, ಅವೈಜ್ಞಾನಿಕ ಹಂಪ್​​ನಿಂದ ಭೀಕರ ಅಪಘಾತ, ಬೈಕ್​ ಸವಾರ ಸಾವು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Fatal Accident ಶಿವಮೊಗ್ಗ | ಮಲೆನಾಡು ಟುಡೆ ನ್ಯೂಸ್ಶಿವಮೊಗ್ಗ: ನಗರದ ಎಲ್‌ಬಿಎಸ್ ನಗರದ ಪ್ಲೇವರ್ ಬಳಿ ಹೊಸದಾಗಿ ನಿರ್ಮಿಸಲಾದ ರೋಡ್ ಹಂಪ್ ಕಾಣದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಶಿವಮೊಗ್ಗದ ವಾದಿಯ ಉದಾ ನಿವಾಸಿ ಉಲ್ಲಾ (35) ಮೃತ ದುರ್ದೈವಿ. 

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

ಫೆಬ್ರವರಿ 12ರಂದು ತಡರಾತ್ರಿ ಸುಮಾರು 11:30 ಗಂಟೆಗೆ ಈ ಘಟನೆ ನಡೆದಿದೆ. ಉಲ್ಲಾ ಅವರು ಬೈಕ್‌ನಲ್ಲಿ ಬರುತ್ತಿದ್ದಾಗ ರಸ್ತೆಯಲ್ಲಿ ಹೊಸದಾಗಿ ಹಾಕಲಾಗಿದ್ದ ಹಂಪ್ ಗಮನಕ್ಕೆ ಬಂದಿಲ್ಲ. ವೇಗವಾಗಿ ಬಂದ ಬೈಕ್ ಹಂಪ್ ಮೇಲೆ ಹಾರಿದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿರುವಂತೆ, ಸವಾರ ಬಿದ್ದ ವೇಗಕ್ಕೆ ರಸ್ತೆಯಲ್ಲಿ ಸುಮಾರು 50 ಮೀಟರ್‌ಗಳಷ್ಟು ದೂರ ಉಜ್ಜಿಕೊಂಡು ಹೋಗಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಆತನನ್ನು ಉಪಚರಿಸಿದರಾದರೂ, ಗಂಭೀರ ಗಾಯಗೊಂಡಿದ್ದ ಉಲ್ಲಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಮಹಾನಗರ ಪಾಲಿಕೆ ನಿರ್ಮಿಸಿರುವ ಈ ಹಂಪ್ ಅತ್ಯಂತ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಹಂಪ್ ಅಳವಡಿಸಿದ ನಂತರ ಅಲ್ಲಿ ಯಾವುದೇ ಸೂಚನಾ ಫಲಕಗಳಾಗಲಿ ಅಥವಾ ಬಣ್ಣದ ಪಟ್ಟಿಗಳನ್ನಾಗಲಿ ಹಾಕಿರಲಿಲ್ಲ. ಕಳೆದ 15-20 ದಿನಗಳಿಂದ ಶಿವಮೊಗ್ಗದ ಹಲವೆಡೆ ದಿಢೀರ್ ಎಂದು ಬೃಹತ್ ಗಾತ್ರದ ಹಂಪ್‌ಗಳನ್ನು ಹಾಕಲಾಗುತ್ತಿದೆ. ಇವುಗಳಿಗೆ ಕನಿಷ್ಠ ಪಕ್ಷ ರೇಡಿಯಂ ಸ್ಟಿಕ್ಕರ್ ಅಥವಾ ಬಣ್ಣ ಬಳಿಯದ ಕಾರಣ ರಾತ್ರಿ ವೇಳೆ ವಾಹನ ಸವಾರರಿಗೆ ಇವು ಕಾಣಿಸುತ್ತಿಲ್ಲ. ಟ್ರಾಫಿಕ್ ಪೊಲೀಸರು ಮತ್ತು ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಅಪಾಯಕಾರಿ ಹಂಪ್‌ಗಳನ್ನು ತೆರವುಗೊಳಿಸಬೇಕೆಂದು ಅಥವಾ ವೈಜ್ಞಾನಿಕವಾಗಿ ಮಾರ್ಪಡಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.

Fatal Accident in Shivamogga LBS Nagar

Fatal Accident in Shivamogga LBS Nagar
Fatal Accident in Shivamogga LBS Nagar
shivamogga car decor sun control house
shivamogga car decor sun control house
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.