ಜೀ ಕನ್ನಡ ವೀರ ಕನ್ನಡಿಗ ಪ್ರಶಸ್ತಿ ವಿಜೆತೆ ಡಾ.ಪ್ರತಿಭಾ ಈಗ ಸಾಗರ ತಹಶೀಲ್ದಾರ್

ಹಂಚಿಕೊಳ್ಳಿ
WhatsApp Facebook X Telegram
Dr. Pratibha R Takes Charge as New Tehsildar
Dr. Pratibha R Takes Charge as New Tehsildar

Dr. Pratibha R ಸಾಗರ : ಸಾಗರ ತಾಲೂಕು ಕಚೇರಿಯ ನೂತನ ತಹಶೀಲ್ದಾರ್ ಆಗಿ ಡಾ. ಪ್ರತಿಭಾ ಆರ್. ಅವರು ವರ್ಗಾವಣೆಗೊಂಡು ಬಂದಿದ್ದು, ಶನಿವಾರದಂದು ಅಧಿಕೃತವಾಗಿ ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, ತಮ್ಮ ದಕ್ಷ ಕಾರ್ಯವೈಖರಿಯ ಮೂಲಕ ಅಲ್ಲಿ ಉತ್ತಮ ಹೆಸರು ಗಳಿಸಿದ್ದರು.

ಸಕಲೇಶ​​ಪುರ ಯುವಕ ಶಿವಮೊಗ್ಗದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ

ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಡಾ. ಪ್ರತಿಭಾ ಆರ್. ಅವರು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯವರಾದ ಇವರು ಆರಂಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ವಿಷಯ ಪರಿವೀಕ್ಷಕರಾಗಿ ಹಾಗೂ ಡಯಟ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ತಹಶೀಲ್ದಾರ್ ಹುದ್ದೆಗೆ ಏರಿದ್ದಾರೆ. ಈ ಹಿಂದೆ ಕಾರ್ಕಳ ಮತ್ತು ಕಾಪು ಸೇರಿದಂತೆ ವಿವಿಧೆಡೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಪಡೆದಿದ್ದಾರೆ.

2025 ರಲ್ಲಿ ಜೀ ಕನ್ನಡ ವಾಹಿನಿಯು ನೀಡುವ ಪ್ರತಿಷ್ಠಿತ ‘ವೀರ ಕನ್ನಡಿಗ’ ಪ್ರಶಸ್ತಿಗೆ ಡಾ. ಪ್ರತಿಭಾ ಆರ್. ಅವರು ಭಾಜನರಾಗಿದ್ದಾರೆ. ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಸ್ಥಳಗಳಲ್ಲಿಯೂ ಅಪಾರ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿರುವ ಅವರು, ಸಾಗರ ತಾಲೂಕಿನಲ್ಲಿಯೂ ಅತ್ಯುತ್ತಮವಾಗಿ ಕೆಲಸ ಮಾಡುವ ಮೂಲಕ ಜನಸೇವೆ ಮಾಡುವುದಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಿಳಿಸಿದ್ದಾರೆ.

Dr. Pratibha R Takes Charge as New Tehsildar

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor