ಹೊನ್ನಾನಿ ರುದ್ರಭೂಮಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ: ಶಿಕ್ಷಣಕ್ಕೆ ಒತ್ತು ನೀಡಲು ಕರೆ

ಹಂಚಿಕೊಳ್ಳಿ
WhatsApp Facebook X Telegram
Dr. B.R. Ambedkar 135th Jayanti Celebrated
Dr. B.R. Ambedkar 135th Jayanti Celebrated

ತೀರ್ಥಹಳ್ಳಿ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 135 ನೇ  ಜಯಂತೋತ್ಸವವನ್ನು ಕರ್ನಾಟಕ ದಲಿತ  ಸಂಘರ್ಷ ಸಮಿತಿ ತೀರ್ಥಹಳ್ಳಿ.ತಾಲೂಕು ಶಾಖೆ ಹೊನ್ನಾನಿ ರುದ್ರಭೂಮಿಯಲ್ಲಿ ಆಚರಿಸಲಾಯಿತು. ಸಮಾರಂಭದ ಉದ್ಘಾಟನೆ ಯನ್ನು ತಾಲೂಕು ಸಂಚಾಲಕರಾದ ಕೀಗಡಿ ಕೃಷ್ಣಮೂರ್ತಿ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಗಿರೀಶ್ ಹೊನ್ನಾನಿಯ ಸಿರಿಗಣೆ ಭಾಸ್ಕರ್ ಸುಬ್ರಮಣ್ಯ ಕೀಗಡಿ  ಉಪಸ್ತಿತರಿದ್ದರು.

ಅಂಬೇಡ್ಕರ್  ಜನನ ದಲಿತ ಹಾಗೂ ಮಹಿಳೆಯರಿಗೆ ಬಾಳಿನಲ್ಲಿ  ನವ ಸೂರ್ಯೋದಯದಂತೆ  ಜಾತಿ ವ್ಯವಸ್ಥೆ ವಿರುದ್ಧ ಹೋರಾಡಲು ಪ್ರೇರಣೆಯಾಯಿತು.ಮಹಿಳೆಯರಿಗೆ ಮೀಸಲಾತಿ ದೊರೆತು ಮಹಿಳೆಯರು ಸಮಾಜದಲ್ಲಿ ಪುರುಷರಂತೆ ಸರಿ ಸಮನಾದ ಜೀವನ ನಡೆಸಲು ಅವಕಾಶವಾಯಿತು ಮಹಿಳೆಯರು ಮತ್ತು ದಲಿತರು ಎಂದು ಅಂಬೇಡ್ಕರ್ ಅವರನ್ನು ಮರೆಯಬಾರದು.ಹಾಗೂ ಸ್ವಾತಂತ್ರ್ಯ ಪೂರ್ವ ಹಾಗೂ ಈಗಿನ ಸಾಮಾಜಿಕ  ಸ್ಥಿತಿಗಳು ಅಜಗಜಾಂತರ ವ್ಯತ್ಯಾಸ ಇದೆ ಈಗ ನಗರಗಳಲ್ಲಿ ಅಸ್ಪೃಶ್ಯತೆ ನಶಿಸಿಡಿ ಹಳ್ಳಿಗಳಲ್ಲಿ ಈಗಲೂ ತಾರತಮ್ಯ ಇದೆ ಇದು ಹೋಗಲಾಡಿಸಲು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಮೌಡ್ಯದಿಂದ ದೂರ ಇರಬೇಕು ಎಂದು ಸಿರಿಗಣೆ ಭಾಸ್ಕರ್ ಹೇಳಿದರು.

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕೀಗಡಿ ಕೃಷ್ಣಮೂರ್ತಿ ಅವರು ಅಂಬೇಡ್ಕರ್ ಸವಿಂಧಾನದ ಮುಖಾಂತರ ನಮಗೆ ಕೊಟ್ಟಿರುವ ಹಕ್ಕುಗಳನ್ನು ಉಪಯೋಗಿಸಿಕೊಂಡು ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

Dr. B.R. Ambedkar 135th Jayanti Celebrated

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor