ಬ್ಲೈಂಡ್ ಸ್ಪಾಟ್​ ನಲ್ಲಿ ಕಾನ್ವೆಕ್ಸ್ ಮಿರರ್​ ಅಳವಡಿಸಿದ ಟ್ರಾಫಿಕ್​ ಪೊಲೀಸ್! ಏನಿದು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
Convex Mirrors Installed in Shivamogga to Prevent Road Accidents
Convex Mirrors Installed in Shivamogga to Prevent Road Accidents

Convex Mirrors Installed / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕೆಲಸದ ಬಗ್ಗೆ ಮಾತೇ ಇಲ್ಲ, ಸಿಕ್ಕ ಸಿಕ್ಕಲ್ಲಿ ಅಡ್ಡಹಾಕಿ ಪೈನ್​ ಕಟ್ಟಿಸ್ತಾರೆ ಅನ್ನೋದು ಬಿಟ್ಟರೆ, ಟ್ರಾಫಿಕ್ ಸಿಸ್ಟಮ್​ನಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಹಭಾಗಿತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕಾನ್ವೆಕ್ಸ್ ಮಿರರ್‌ಗಳನ್ನು ಅಳವಡಿಸಿದೆ.

ನಗರದ ಹೊಳೆಹೊನ್ನೂರು ರೈಲ್ವೆ ಫ್ಲೈಓವರ್ ಮೇಲ್ಭಾಗ ಹಾಗೂ ಕೀರ್ತಿನಗರದ ರಸ್ತೆಯಲ್ಲಿ ಕನ್ನಡಿಗಳನ್ನು ಅಳವಡಿಸಲಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ಈ ಪ್ರದೇಶಗಳಲ್ಲಿ , ಬ್ಲೈಂಡ್ ಆಗಿ ಕಟ್ ಆದರೆ ಅಪಘಾತ ಆಗುವ ಚಾನ್ಸ್ ಇರುತ್ತದೆ. ಆದರೆ ಈ ಕನ್ನಡಿಗಳು ವಾಹನ ಚಾಲಕರಿಗೆ ಮುಂದೆ ಬರುವ ವಾಹನಗಳನ್ನು ತೋರಿಸುತ್ತದೆ. ಇದರಿಂದ ಅಪಘಾತ ತಪ್ಪಿಸಬಹುದು ಎನ್ನುವುದು ಕಾನ್ಸೆಪ್ಟ್!

ಕಾನ್ವೆಕ್ಸ್ ಮಿರರ್​ನ ಲಕ್ಷಣವೇನು?

ಕಾನ್ವೆಕ್ಸ್ ಮಿರರ್ ಅಥವಾ ಪೀನ ದರ್ಪಣ ಅಂದರೆ ಹೊರಮುಖವಾಗಿ ಉಬ್ಬಿರುವ ಹಾಗೂ ವಕ್ರ ಮೇಲ್ಮೈಯನ್ನು ಹೊಂದಿರುವ ವಿಶೇಷ ರೀತಿಯ ಕನ್ನಡಿ. ಇದು ತನ್ನ ಮೇಲೆ ಬೀಳುವ ಬೆಳಕಿನ ಕಿರಣಗಳನ್ನು ಹೊರಮುಖವಾಗಿ ಚದುರಿಸುತ್ತದೆ. ಅಲ್ಲದೆ ಕನ್ನಡಿಯ ಮೇಲ್ಮೈ ಹೊರಗಡೆ ಬಾಗಿರುವುದರಿಂದ ಇದು ವಾಹನ ಚಾಲಕರಿಗೆ ಎದುರಿನ ಚಿತ್ರವನ್ನು ದೊಡ್ಡದಾಗಿ ನೀಡುತ್ತದೆ. ಈ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ನೇರವಾಗಿರುತ್ತದೆ ಹಾಗೂ ನೈಜ ವಸ್ತುಗಳಿಗಿಂತ ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ.

ಸಾಮಾನ್ಯ ಕನ್ನಡಿಗಳಲ್ಲಿ ಅಥವಾ ಬರಿಗಣ್ಣಿಗೆ ಕಾಣಿಸದ ತಿರುವಿನಲ್ಲಿನ ವಾಹನಗಳು ಈ ಕಾನ್ವೆಕ್ಸ್ ಮಿರರ್‌ನಲ್ಲಿ ಸುಲಭವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುತ್ತವೆ. ಬ್ಲೈಂಡ್ ಸ್ಪಾಟ್​ಗಳಲ್ಲಿ ಅಥವಾ ಟಿ-ಜಂಕ್ಷನ್‌ಗಳಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಕಿರಿದಾದ ರಸ್ತೆಗಳಲ್ಲಿ ಎದುರಿನಿಂದ ಅಥವಾ ಅಡ್ಡಲಾಗಿ ಬರುತ್ತಿರುವ ವಾಹನಗಳನ್ನು ದೂರದಿಂದಲೇ ಗುರುತಿಸಲು ಈ ಕನ್ನಡಿಯು ಚಾಲಕರಿಗೆ ಸಹಾಯ ಮಾಡುತ್ತದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor