ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ನಿನ್ನೆ ಈ ಘಟನೆ ನಡೆದಿದೆ. ಹೊಸನಗರ ತಾಲ್ಲೂಕಿನ ಕೊಪ್ಪರಗುಂಡಿ ಬಳಿ ಬರುವ ಸೇತುವೆ ಬಳಿ ಈ ಘಟನೆ ಸಂಭವಿಸಿದೆ.
ಕೋಡೂರು ಹತ್ರಹತ್ರ ಘಟನೆ ನಡೆದಿದ್ದು, ರಿಪ್ಪನ್​ಪೇಟೆ ಕಡೆಯಿಂದ ಅಕ್ಕಿ ತುಂಬಿಕೊಂಡು ಬರ್ತಿದ್ದ ಲಾರಿಗೆ, ಹೊಸನಗರ ಕಡೆಯಿಂದ ಬರ್ತಿದ್ದ ಖಾಲಿ ಲಾರಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಲಾರಿಗಳ ಮುಂಭಾಗ ಜಖಂ ಆಗಿದೆ. ಅದೃಷ್ಟವಶಾತ್ ಎರಡು ಲಾರಿಗಳ ಚಾಲಕರಿಗೆ ಪ್ರಾಣಾಪಾಯ ಉಂಟಾಗಿಲ್ಲ. ಇಬ್ಬರಿಗೂ ಗಾಯಗಳಾಗಿದ್ದು, ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment